'ಅಮೃತಧಾರೆ' ಧಾರಾವಾಹಿಯಲ್ಲಿ ಶಕುಂತಲಾಳ ಮುಖವಾಡ ಕಳಚಿದೆ. ಕೇಕ್ನಲ್ಲಿ ಬಾಂಬ್ ಇಟ್ಟಿದ್ದು ತಾನೇ ಆದರೂ, ಮಗ ಜೈದೇವನ ಮೇಲೆ ಆರೋಪ ಹೊರಿಸಿ ಜೈಲಿಗೆ ಕಳುಹಿಸಿದ್ದಳು. ಈಗ ಮತ್ತೆ ಜೈದೇವನನ್ನು ಹೊರತಂದು, ಗೌತಮ್-ಭೂಮಿಕಾ ವಿರುದ್ಧ ಹೊಸ ಸಂಚು ರೂಪಿಸುವ ಸಾಧ್ಯತೆ ಇದೆ.
ಹುಟ್ಟುಗುಣ ಸುಟ್ಟರೂ ಹೋಗಲ್ಲ ಎನ್ನೋ ಗಾದೆ ಮಾತನ್ನು ನಮ್ಮ ಹಿರಿಯರು ಸುಮ್ಮನೇ ಮಾಡಿಲ್ಲ ಬಿಡಿ. ನಿಜ ಜೀವನದಲ್ಲಿ ಹಲವರಿಗೆ ಈ ಅನುಭವ ಆಗುತ್ತಲೇ ಇರುತ್ತದೆ. ಅದನ್ನೇ ಇದೀಗ ಅಮೃತಧಾರೆ ಸೀರಿಯಲ್ (Amruthadaare Serial)ನಲ್ಲಿಯೂ ತೋರಿಸುತ್ತಿದ್ದಾರೆ.
26
ಹೆತ್ತ ಮಗನ ಮೇಲೆ ಪ್ರೀತಿ
ಗೌತಮ್- ಭೂಮಿಕಾ ಎಷ್ಟೇ ಪ್ರೀತಿ ತೋರಿದರೂ, ಹೆತ್ತ ಮಗ ಜೈದೇವನೇ ಮನೆಯಿಂದ ಆಚೆಗೆ ಹಾಕಿದರೂ, ಶಕುಂತಲಾಗೆ ಹೆತ್ತ ಮಗನ ಮೇಲೆಯೇ ಹೆಚ್ಚು ಪ್ರೀತಿ. ಗೌತಮ್ ಮತ್ತು ಭೂಮಿಕಾರ ಮೇಲೆ ಸೇಡು ತೀರಿಸಿಕೊಳ್ಳುವ ಗುಣ ಅತ್ತ ಶಕುಗೂ ಹೋಗಲ್ಲ, ಇತ್ತ ಜೈದೇವಗೂ ಹೋಗ್ತಿಲ್ಲ.
36
ನಿದ್ದೆ ಮಾತ್ರೆ ಹಾಕಿದ್ದ ಜೈದೇವ
ಮಿಂಚು ಮತ್ತು ಆಕಾಶ್ ಹುಟ್ಟುಹಬ್ಬದ ದಿನ ಜ್ಯೂಸ್ನಲ್ಲಿ ನಿದ್ದೆ ಮಾತ್ರೆ ಹಾಕಿ ಎಲ್ಲರ ಪ್ರಜ್ಞೆ ತಪ್ಪಿಸಿ, ಮಿಂಚುವನ್ನು ಕಿಡ್ನ್ಯಾಪ್ ಮಾಡಿಕೊಂಡು ಹೋಗುವ ಆಸೆಯಲ್ಲಿದ್ದ ಜೈದೇವ. ಆದರೆ ಮಕ್ಕಳ ಕೇಕ್ನಲ್ಲಿ ಬಾಂಬ್ ಹಾಕಿರುವುದು ಬೆಳಕಿಗೆ ಬಂದಿತ್ತು.
ಇದನ್ನು ಜೈದೇವನ ಮೇಲೆ ಹೊರಿಸಿ ಶಕುಂತಲಾ ಆತನನ್ನು ಜೈಲಿಗೆ ಅಟ್ಟಿದಳು. ಜೈದೇವ ತಾನು ಆ ಕೆಲಸ ಮಾಡಲಿಲ್ಲ ಎಂದು ಹೇಳಿದ್ದ. ಅದಾಗಲೇ ಈ ಕೆಲಸ ಮಾಡಿದ್ದು ಶಕುಂತಲಾ ಎನ್ನುವುದು ಬುದ್ಧಿವಂತ ವೀಕ್ಷಕರಿಗೆ ಅರ್ಥ ಆಗಿತ್ತು.
56
ಮುಖವಾಡ ಬಯಲು
ಅದೀಗ ಹಾಗೆಯೇ ಆಗಿದೆ. ಶಕುಂತಲಾ ಮುಖವಾಡ ಬಯಲಾಗಿದೆ. ಅವಳೇ ಕೇಕ್ನಲ್ಲಿ ಬಾಂಬ್ ಇಟ್ಟು, ಪೊಲೀಸರಿಗೆ ಫೋನ್ ಮಾಡಿದ್ದಾಳೆ. ತಾನು ಒಳ್ಳೆಯವಳು ಎನ್ನುವ ಪೋಸ್ ಕೊಟ್ಟು ಮತ್ತೆ ಎಲ್ಲರನ್ನೂ ಮೂರ್ಖಳನ್ನಾಗಿಸಿದ್ದಾಳೆ.
66
ಮತ್ತೆ ಆರಂಭದಿಂದ ಸೀರಿಯಲ್ ಶುರು
ಮುಂದೆ ಜೈದೇವನನ್ನು ಜೈಲಿನಿಂದ ಬಿಡುಗಡೆ ಮಾಡಿಕೊಂಡು ಬರ್ತಾಳೆ. ನಂತರ ಅಮ್ಮ-ಮಗ ಸೇರಿ ಮತ್ತೆ ಖತರ್ನಾಕ್ ಪ್ಲ್ಯಾನ್ ಮಾಡ್ತಾರೆ. ಮತ್ತೊಂದಿಷ್ಟು ವರ್ಷ ಸೀರಿಯಲ್ ಮುಂದೆ ಹೋಗತ್ತೆ. ನಾಯಕ-ನಾಯಕಿಯರನ್ನು ಮತ್ತೆ ಪೆದ್ದುಗಳನ್ನಾಗಿ ಮಾಡಲಾಗುತ್ತೆ. ಹೊಸದಾಗಿ ಸೀರಿಯಲ್ ಮತ್ತೆ ಶುರುವಾಗುತ್ತೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.