Bigg Boss ಏನೋ ಮುಗೀತು, ಆದ್ರೆ ಟಾಪ್ 6 ಸ್ಪರ್ಧಿಗಳಿಂದ ಕಲಿಯಬೇಕಾದ Life Lessons ಏನು ನೋಡಿ

Published : Jan 19, 2026, 04:53 PM IST

Bigg Boss Kannada: ಮೂರು ತಿಂಗಳ ಕಾಲ ಭರ್ಜರಿ ಮನರಂಜನೆ ನೀಡಿದ ಬಿಗ್ ಬಾಸ್ ಕನ್ನಡ ಈಗಾಗಲೇ ಮುಗಿದಿದೆ. ಆದರೆ ಇಲ್ಲಿವರೆಗೂ ಬಿಗ್ ಬಾಸ್ ನೋಡಿಕೊಂಡು ಬಂದಿರುವ ನೀವು ಬಿಗ್ ಬಾಸ್ ಸ್ಪರ್ಧಿಗಳಿಂದ ಕಲಿಯಬೇಕಾಗಿರೋದು ತುಂಬಾನೇ ಇದೆ. ಯಾವ ಸ್ಪರ್ಧಿಯಿಂದ ಏನನ್ನು ಕಲಿಯಬಹುದು ನೋಡೋಣ. 

PREV
18
ಬಿಗ್ ಬಾಸ್ ಕನ್ನಡ

ಬಿಗ್ ಬಾಸ್ ಕನ್ನಡ ಈಗಾಗಲೇ ಮುಕ್ತಾಯ ಕಂಡಿದೆ. ಮೂರು ತಿಂಗಳ ಕಾಲ ಭರ್ಜರಿ ಮನರಂಜನೆ ನೀಡಿದ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಗಿಲ್ಲಿ ನಟ ವಿನ್ನರ್ ಆಗಿದ್ದು, ರಕ್ಷಿತಾ ಶೆಟ್ಟಿ ರನ್ನರ್ ಅಪ್ ಆಗಿದ್ದು ಆಗಿದೆ. ಅಲ್ಲದೇ ಅಶ್ವಿನಿ ಗೌಡ, ಕಾವ್ಯಾ ಶೈವ, ಮ್ಯೂಟಂಟ್ ರಘು ಹಾಗೂ ಧನುಷ್ ಗೌಡ ಮುಂದಿನ ನಾಲ್ಕು ಸ್ಥಾನಗಳನ್ನು ಪಡೆದಿದ್ದೂ ಕೂಡ ಆಗಿದೆ.

28
ಸ್ಪರ್ಧಿಗಳಿಂದ ಕಲಿಯಬೇಕಾಗಿರೋದು ಏನು?

ಇಲ್ಲಿವರೆಗೂ ಬಿಗ್ ಬಾಸ್ ನೋಡುತ್ತಾ, ಮನರಂಜನೆ ಪಡೆದುಕೊಂಡಿರುವುದು ಆಯಿತು. ಬಿಗ್ ಬಾಸ್ ಮುಗಿದ ಮೇಲೆ ಇನ್ನೇನು ಅಂತ ಯೋಚನೆ ಮಾಡುತ್ತಿದ್ದೀರಾ? ಹಾಗಿದ್ರೆ ಈ ಮಾಹಿತಿ ನಿಮಗಾಗಿ. ಬಿಗ್ ಬಾಸ್ ಸ್ಪರ್ಧಿಗಳಲ್ಲಿ ಕೆಟ್ಟ ಗುಣ, ಒಳ್ಳೆ ಗುಣ, ಪ್ರೀತಿ, ತ್ಯಾಗ ಎಲ್ಲವನ್ನೂ ನೋಡಿದ್ದೇವೆ. ಆದರೆ ಅವರಿಂದ ನಾವು ಏನನ್ನು ಕಲಿಯಬಹುದು ಅನ್ನೋದನ್ನು ನೋಡೋಣ.

38
ಗಿಲ್ಲಿ ನಟ

ಯಾವಾಗಲೂ ತಮಾಷೆ ಮಾಡುತ್ತಾ ನಗಿಸುತ್ತಿದ್ದ ಗಿಲ್ಲಿಯಿಂದ ಕಲಿಯಬೇಕಾಗಿರೋದು ಏನಂದ್ರೆ, ಯಶಸ್ಸು ಪಡೆಯಬೇಕು ಅಂದ್ರೆ, ಯಾವಾಗಲೂ ಗಂಭೀರವಾಗಿ ಇರಲೇಬೇಕು ಅಂತ ಏನೂ ಇಲ್ಲ. ಯಾವಾಗಲೂ ನಗುತ್ತಿರಿ, ಇನ್ನೊಬ್ಬರನ್ನು ನಗಿಸಿ. ಆದರೆ ಎಷ್ಟೇ ಮೇಲಕ್ಕೆ ಹೋದರೂ ನೀವು ಬಂದಂತಹ ಮೂಲವನ್ನು ಮರೆಯಬೇಡಿ.

48
ರಕ್ಷಿತಾ ಶೆಟ್ಟಿ

ತನ್ನ ವೈಯಕ್ತಿಕ ವಿಚಾರಕ್ಕೆ ಬಂದರೆ ಎದುರು ಯಾರಿದ್ದರೂ ಬಿಡದ ರಕ್ಷಿತಾ ಶೆಟ್ಟಿ, ಜೀವನದ ಬಗ್ಗೆ ಮಾತನಾಡಿದರೆ ಅದನ್ನ ಎಲ್ಲರೂ ಒಪ್ಪಿಕೊಳ್ಳುವಂತಿತ್ತು. ಅವರಿಂದ ಕಲಿಯಬೇಕಾದ್ದು ಏನಂದ್ರೆ, ಪ್ರಬುದ್ಧತೆಗೆ ವಯಸ್ಸಿನ ಮಿತಿ ಇಲ್ಲ, ಬುದ್ಧಿವಂತಿಕೆ ಅನ್ನೋದು ಸಂಖ್ಯೆಗಳಿಗೆ ಸಂಬಂಧಿಸಿದ್ದು ಅಲ್ಲ, ಜೀವನವನ್ನು ಅರ್ಥ ಮಾಡಿಕೊಳ್ಳುವ ಗುಣ ಬರೋದು ಅನುಭವದಿಂದ ವಯಸ್ಸಿನಿಂದ ಅಲ್ಲ.

58
ಅಶ್ವಿನಿ ಗೌಡ

ತಮ್ಮ ಖಡಕ್ ಮಾತುಗಳಿಂದಲೇ ಜನಪ್ರಿಯತೆ ಪಡೆದ ಬಿಗ್ ಬಾಸ್ ರಾಜಮಾತೆ ಅಶ್ವಿನಿ ಗೌಡ ಅವರಿಂದ ಕಲಿಯಬೇಕಾದ್ದು ಏನಂದ್ರೆ ಜೀವನ ಅನ್ನೋದು ಕ್ಲಾಸ್ ರೂಮ್ ಇದ್ದ ಹಾಗೆ. ಯಾರು ನಿಮಗೆ ಕಲಿಸುತ್ತಾರೆ ಅನ್ನೋದನ್ನು ವಯಸ್ಸು ನಿರ್ಧರಿಸೋದಿಲ್ಲ. ಕಲಿಯುವುದು, ಕಲಿಯದಿರುವುದು ಮತ್ತು ಮುಂದುವರಿಯುವುದು ಜೀವನದ ನಿಜವಾದ ಪ್ರಗತಿಯಾಗಿದೆ.

68
ಕಾವ್ಯಾ ಶೈವ

ಬಿಗ್ ಬಾಸ್ ಆರಂಭದಿಂದ ಕೊನೆಯವರೆಗೂ ತಮ್ಮ ವ್ಯಕ್ತಿತ್ವವನ್ನು ಬಿಟ್ಟುಕೊಡದ ಕಾವ್ಯಾ ಶೈವ ಅವರಿಂದ ಕಲಿಯಬೇಕಾಗಿರುವ ವಿಷಯ ಏನಂದ್ರೆ, ಶಾಂತವಾಗಿರೋದು ಒಂದು ತಂತ್ರಗಾರಿಕೆಯಾಗಿದೆ. ಆಕೆಯ ಆಟದ ಮೇಲೆ ಸವಾಲು ಎದ್ದರು, ಎಲ್ಲೂ ಕುಗ್ಗದೇ ತನ್ನ ಆಟದ ಮೇಲೆ ಫೋಕಸ್ ಮಾಡಿದರು. ಜಗಳಕ್ಕಿಂತ ತಾಳ್ಮೆ ಜೋರಾಗಿ ಮಾತನಾಡುತ್ತೆ ಅನ್ನೋದನ್ನು ಇದು ತೋರಿಸುತ್ತದೆ.

78
ಮ್ಯೂಟೆಂಟ್ ರಘು

ತಮ್ಮ ಅದ್ಭುತ ಆಟದ ವೈಖರಿಯಿಂದ ಮನ ಗೆದ್ದ ಮ್ಯೂಟೆಂಟ್ ರಘು ಅವರಿಂದ ಕೂಡ ಕಲಿಯೋದು ಬಹಳಷ್ಟಿದೆ. ಮುಖ್ಯವಾಗಿ ಯಾವತ್ತೂ ಪುಸ್ತಕವನ್ನು ಅದರ ಕವರ್ ನೋಡಿ ಜಡ್ಜ್ ಮಾಡಬಾರದು ಎನ್ನುತ್ತಾರೆ. ರಘು ವಿಷಯದಲ್ಲೂ ಅದು ನಿಜ. ರಘು ನೋಡಲು ವಿಲನ್ ನಂತೆ, ಒರಟನಂತೆ ಕಂಡರೂ ಸಹ, ಹೃದಯ ಮಗುವಿನಂತೆ. ಭಯಹುಟ್ಟಿಸುವ ಮುಖದ ಹಿಂದೆ ನಿಷ್ಕಲ್ಮಶ ಮಗುವಿನ ಹೃದಯ ಇದೆ ಎನ್ನುತ್ತಾರೆ ಅಲ್ವಾ? ಹಾಗೆ ರಘು.

88
ಧನುಷ್ ಗೌಡ

ಸೀಸನ್ ಆರಂಭದಿಂದ ಮುಕ್ತಾಯ ಆಗುವವರೆಗೂ ತಾಳ್ಮೆಯಿಂದ ಆಡಿ ಜನರ ಮನಸ್ಸನ್ನು ಗೆದ್ದವರು ಧನುಷ್ ಗೌಡ. ಇವರಿಂದ ಜನರು ಕಲಿಯಬೇಕಾದ ವಿಷಯ ಏನಂದ್ರೆ ಯಾವಾಗಲೂ ಮಾತನಾಡುವ ಅಗತ್ಯ ಇಲ್ಲ, ಎಲ್ಲಿ ಅಗತ್ಯ ಇದೆಯೋ ಆವಾಗ ಮಾತನಾಡಿ, ಮೌನಕ್ಕೂ ಶಕ್ತಿ ಇದೆ. ಬೌಂಡರೀಸ್ ಶಕ್ತಿಯನ್ನು ತೋರಿಸುತ್ತೆ ಎಂದು ಕೊನೆಯವರೆಗೂ ತಮ್ಮ ವ್ಯಕ್ತಿತ್ವ, ತಾಳ್ಮೆಯಿಂದ ಗೆದ್ದವರು ಧನುಷ್ ಗೌಡ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories