Dushyanth Chakravarthy: ಹಿಂದೆ ಕಲರ್ಸ್ ಕನ್ನಡದಲ್ಲಿ, ಇದೀಗ ಜೀ ಕನ್ನಡದಲ್ಲಿ ಮೋಡಿ ಮಾಡುತ್ತಿರುವ ಕಲಾವಿದನೊಬ್ಬರ ಬಾಲ್ಯದ ಫೋಟೊ ಇದು. ಸದ್ಯ ವೀಕ್ಷಕರ ಫೇವರಿಟ್ ಆಗಿರುವ, ಮಾತಲ್ಲೇ ಮೋಡಿ ಮಾಡುವ, ಮುದ್ದು ಮುಖದ ಈ ಮಗು ಯಾರೆಂದು ಗೆಸ್ ಮಾಡ್ತೀರಾ? ಇವರ ಅಪ್ಪನೂ ಕಲಾವಿದರೇ.
ಫೋಟೊದಲ್ಲಿ ಕಾಣಿಸುತ್ತಿರುವ ಈ ಪುಟ್ಟ ಮಗು ಯಾರು ಅಂತ ಗೊತ್ತಾಯ್ತ? ಇಲ್ವಾ? ಸರಿಯಾಗಿ ನೋಡಿದ್ರೆ ಗೊತ್ತಗಿಯೇ ಬಿಡುತ್ತೆ. ಸದ್ಯ ಕನ್ನಡ ಕಿರುತೆರೆಯಲ್ಲಿ ಮೋಡಿ ಮಾಡುತ್ತಿರುವ ಕಲಾವಿದರೊಬ್ಬರ ಬಾಲ್ಯದ ಫೋಟೋ ಇದು.
27
ಇನ್ನೂ ಗೊತ್ತಾಗಿಲ್ವಾ?
ಫೋಟೊ ನೋಡಿ ಇನ್ನೂ ಗೊತ್ತಾಗಿಲ್ವಾ? ಇವರು ಬೇರೆ ಯಾರೂ ಅಲ್ಲ, ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್ ಮಗನ ಪಾತ್ರದಲ್ಲಿ ನಟಿಸುತ್ತಿರುವ ಆಕಾಶ್ ಇವರೇ ನೋಡಿ.
37
ದುಷ್ಯಂತ್ ಚಕ್ರವರ್ತಿ
ಈ ಪುಟಾಣಿ ಹೆಸರು ದುಷ್ಯಂತ್ ಚಕ್ರವರ್ತಿ. ಅಮೃತಧಾರೆಯಲ್ಲಿ ಆನಂದ್ ಪಾತ್ರದಲ್ಲಿ ನಟಿಸುತ್ತಿರುವ ಆನಂದ್ ಅವರ ಮುದ್ದು ಮಗನೇ ಈ ದುಷ್ಯಂತ್. ಬಾಲ್ಯದಲ್ಲೂ ಅಷ್ಟೇ ಮುದ್ದಾಗಿದ್ದರು ನೋಡಿ.
ಇವು ವಾರಾಣಾಸಿಯ ಫೋಟೊಗಳು. ಇದಕ್ಕೆ ಗಂಗಾ ನದಿಯ ಮಡಿಲಿನಲ್ಲಿ ಅಪ್ಪಾಜಿ ಅಮ್ಮನ ಜೊತೆ ಎನ್ನುವ ಕ್ಯಾಪ್ಶನ್ ಕೂಡ ಕೊಡಲಾಗಿದೆ. ಬಾಲ್ಯದಲ್ಲಿ ವಾರಾಣಾಸಿಗೆ ಹೋಗಿದ್ದಾಗ ತೆಗೆದಂತಹ ಫೋಟೊಗಳಿವು.
57
ಆನಂದ್-ಚೈತ್ರಾ ದಂಪತಿಗಳ ಮಗ
ಕಿರುತೆರೆಯಲ್ಲಿ ಹಲವು ವರ್ಷಗಳಿಂದ ತೊಡಗಿಸಿಕೊಂಡಿರುವ ಆನಂದ್ ಮತ್ತು ಚೈತ್ರಾ ದಂಪತಿಗಳ ಮುದ್ದಿನ ಪುತ್ರ ಇವರು. ದುಷ್ಯಂತ್ ತಮ್ಮ ತಾಯಿ ಜೊತೆ ನಮ್ಮಮ್ಮ ಸೂಪರ್ ಸ್ಟಾರ್ ನಲ್ಲಿ ಸ್ಪರ್ಧಿಸಿದ್ದರು.
67
ನಿನಗಾಗಿ ಧಾರಾವಾಹಿಯಲ್ಲಿ ನಟನೆ
ಇನ್ನು ದುಷ್ಯಂತ್ ಅವರು ಕಲರ್ಸ್ ಕನ್ನಡ ಧಾರಾವಾಹಿಯಲ್ಲಿ ಪ್ರಸಾರವಾಗುತ್ತಿದ್ದ ನಿನಗಾಗಿ ಧಾರಾವಾಹಿಯಲ್ಲಿ, ಕೃಷ್ಣನ ಫ್ರೆಂಡ್ ಆಗಿ ನಟಿಸಿದ್ದರು. ಆ ಧಾರಾವಾಹಿಯಲ್ಲೂ ತಮ್ಮ ತುಂಟತನದಿಂದ ಜನಪ್ರಿಯತೆ ಪಡೆದಿದ್ದರು.
77
ಅಮೃತಧಾರೆಯ ಅಪ್ಪು
ಇದೀಗ ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್-ಭೂಮಿಕಾ ದಂಪತಿಗಳ ಮುದ್ದಿನ ಮಗ ಆಕಾಶ್ ಆಗಿ, ಪ್ರೀತಿಯ ಅಪ್ಪು ಆಗಿ, ಪಟಪಟನೆ ಮಾತನಾಡುವ ಮುದ್ದು ಹುಡುಗನಾಗಿ, ಚಿಕ್ಕಿಯ ಡಾರ್ಲಿಂಗ್ ಆಗಿ, ಮಿಂಚುವಿನ ಬೆಸ್ಟ್ ಫ್ರೆಂಡ್ ಆಗಿ ನಟಿಸುತ್ತಿದ್ದಾರೆ.