ನರಸಿಂಹಯ್ಯನ ಪ್ರಾಣ ಉಳಿಸಿ ವಿಶ್ವನ ಮನೆಗೆ ಜಾನು ಎಂಟ್ರಿ? ಬಯಲಾಗುತ್ತಾ ಒನ್ ಸೈಡ್ ಲವ್‌ಸ್ಟೋರಿ?

Lakshmi Nivasa: ಸಮುದ್ರದ ಪಾಲಾಗಿದ್ದ ಜಾನು, ನರಸಿಂಹಯ್ಯನಿಂದ ಬದುಕುಳಿದಿದ್ದಳು. ಈಗ ಅದೇ ಜಾನು ಲಾರಿ ಬರುವುದನ್ನು ನೋಡಿ ನರಸಿಂಹಯ್ಯನ ಪ್ರಾಣ ಉಳಿಸಿದ್ದಾಳೆ. ಮುಂದೆ ಯಾವ ಟ್ವಿಸ್ಟ್‌ಗಳು ಬರಲಿವೆ?

ಸಮುದ್ರದ ಪಾಲಾಗಿದ್ದ ಜಾನು ನಿರ್ದೇಶಕರ ಕೃಪೆಯಿಂದ ಬದುಕುಳಿದಿದ್ದಾಳೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಚೆನ್ನೈಗೆ ಬಂದಿದ್ದ ಗೆಳೆಯ ವಿಶ್ವನ ತಂದೆ ನರಸಿಂಹಯ್ಯ ಕಾರ್ ಡಿಕ್ಕಿಯಲ್ಲಿ ಅಡಗಿ ಕುಳಿತಿದ್ದಳು.  ಇದೀಗ ನರಸಿಂಹಯ್ಯನ ಪ್ರಾಣವನ್ನು ಜಾನು ಉಳಿಸಿದ್ದಾಳೆ.

ನರಸಿಂಹಯ್ಯಗೆ ಫೋನ್ ಮಾಡಿರುವ ತನು, ನಿಮ್ಮ ಜೊತೆಯಲ್ಲಿ ಯಾರನ್ನಾದರನ್ನು ಕರೆದುಕೊಂಡು ಬರುತ್ತಿದ್ದೀರಾ? ಇಂದು ಬೆಳಗ್ಗೆ ಕಾಗೆಗಳು ಕಾ..ಕಾ.. ಎಂದು ಹೇಳಿದ್ದು. ಹೀಗೆ ಆದ್ರೆ ಮನೆಗೆ ಅತಿಥಿ ಬರ್ತಾರೆ ಎಂದರ್ಥ  ಅಲ್ಲವಾ ಎಂದು ಮಾವನನ್ನು ಪ್ರಶ್ನೆ ಮಾಡಿದ್ದಾಳೆ. ಇದಕ್ಕೆ ನರಸಿಂಹಯ್ಯ, ಹಾಗೇನಿಲ್ಲ ನಾನೊಬ್ಬನೇ ಬರುತ್ತಿದ್ದೇನೆ ಎಂದು ಹೇಳಿದ್ದಾಳೆ. 


ಮಾರ್ಗ ಮಧ್ಯೆ ಕಾರ್ ನಿಲ್ಲಿಸಿದಾಗ ಡಿಕ್ಕಿಯಿಂದ ಜಾನು ಹೊರಗೆ ಬಂದಿದ್ದಾಳೆ. ಇತ್ತ ನರಸಿಂಹಯ್ಯ ಸಹ ಫೋನ್‌ನಲ್ಲಿ ಮಾತನಾಡುತ್ತಾ ರಸ್ತೆ ನಡುವೆಯೇ ಬಂದಿದ್ದಾನೆ. ಮಾತಿನ ಭರಾಟೆಯಲ್ಲಿ ತನ್ನ ಹಿಂದೆ ಲಾರಿ ಬರುತ್ತಿರೋದು ನರಸಿಂಹಯ್ಯನ ಗಮನಕ್ಕೆ ಬಂದಿಲ್ಲ.

ಡಿಕ್ಕಿಯಿಂದ ಹೊರ ಬಂದಿರುವ ಜಾನು, ಲಾರಿ ಬರುತ್ತಿರೋದನ್ನು ಗಮನಿಸಿ ಓಡೋಡಿ ಬಂದು ನರಸಿಂಹಯ್ಯನ ಪ್ರಾಣ ಉಳಿಸಿದ್ದಾಳೆ. ಸಮುದ್ರದಡದಲ್ಲಿ ಜಾನು ಪ್ರಜ್ಞೆಹೀನಾಳಗಿ ಬಿದ್ದಿರೋದನ್ನು ನರಸಿಂಹಯ್ಯ ಗಮನಿಸಿದ್ದನು. ಇದೀಗ ಅದೇ ಹುಡುಗಿಯಿಂದ ನರಸಿಂಹಯ್ಯನ ಪ್ರಾಣ ಉಳಿದಿದೆ. 

ತನ್ನ ಪ್ರಾಣ ಉಳಿಸಿರೋ ಜಾಹ್ನವಿಯನ್ನು ನರಸಿಂಹಯ್ಯ ಮನೆಗೆ ಕರೆದುಕೊಂಡು ಹೋಗುವ ಸಾಧ್ಯತೆಗಳಿವೆ. ಆದರೆ ಈಕೆ ತಾನು ದ್ವೇಷಿಸುವ ತಂಗಿ ಲಕ್ಷ್ಮೀಯ ಮಗಳು ಎಂದು ನರಸಿಂಹಯ್ಯನಿಗೆ ಗೊತ್ತಿಲ್ಲ. ಮತ್ತೊಂದೆಡೆ ವಿಶ್ವ ಪ್ರೀತಿಸುತ್ತಿದ್ದ ಹುಡುಗಿ ಇದೇ ಜಾನು ಎಂದು ತನುಗೆ ಗೊತ್ತಿಲ್ಲ.  

ವಿಶ್ವನಿಗೆ ಜಾನು ತನ್ನ ಸೋದರತ್ತೆ ಮಗಳು ಎಂಬ ವಿಷಯ ಗೊತ್ತಿಲ್ಲ. ಅದೇ ರೀತಿ ವಿಶ್ವನ ತಾಯಿ ಲಲಿತಾಗೂ ಜಾನು ಯಾರು ಎಂದು ಗೊತ್ತಿಲ್ಲ. ಇತ್ತ ಜಾನು ಮುಂದೆ ವಿಶ್ವನ ಒನ್‌ಸೈಡ್ ಲವ್ ಸ್ಟೋರಿ ರಿವೀಲ್ ಆಗುತ್ತಾ ಎಂದು ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.

ಇತ್ತ ಜಾನುಳನ್ನು ಕಳೆದುಕೊಂಡು ಜಯಂತ್, ಪತ್ನಿಯ ಪೋಷಕರಿಗೆ ಸುಳ್ಳು ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾಳೆ. ಇತ್ತ ಜಾಹ್ನವಿಯನ್ನು ನೆನಪು ಮಾಡಿಕೊಂಡು ಇಡೀ ಕುಟುಂಬ ಕಣ್ಣೀರು ಹಾಕುತ್ತಿದೆ. ಮುಂದೆ ಯಾವೆಲ್ಲಾ ಟ್ವಿಸ್ಟ್‌ಗಳು ಇರಲಿವೆ ಎಂದು ವೀಕ್ಷಕರು ಯೋಚಿಸುತ್ತಿದ್ದಾರೆ

Latest Videos

click me!