ಬಾಡಿಗೆ ಮನೆಯಿಂದ ಸ್ವಂತ ಮನೆವರೆಗೆ- ಮದುವೆಗೆ ಮೊದಲೇ ಸಾಧನೆ ಮಾಡಿದ ʼನೀನಾದೆ ನಾʼ ನಟ ದಿಲೀಪ್‌ ಶೆಟ್ಟಿ!

‘ನೀನಾದೆ ನಾ’ ಧಾರಾವಾಹಿ ಖ್ಯಾತಿಯ ದಿಲೀಪ್‌ ಶೆಟ್ಟಿ ಅವರು ಹೊಸ ಮನೆಗೆ ಕಾಲಿಟ್ಟಿರೋದು ಎಲ್ಲರಿಗೂ ಗೊತ್ತಿದೆ. ಇತ್ತೀಚೆಗೆ ದಿಲೀಪ್‌ ಶೆಟ್ಟಿಯ ಗೃಹ ಪ್ರವೇಶದ ಫೋಟೋಗಳು ವೈರಲ್‌ ಆಗಿತ್ತು. ಈಗ ಅವರು ಈ ಮನೆ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

neenadhe naa kannada serial actor dileep shetty new home photos

ದಿಲೀಪ್‌ ಶೆಟ್ಟಿ ಅವರ ಹೊಸ ಮನೆ ಪ್ರವೇಶದಲ್ಲಿ ಖುಷಿ ಶಿವು ಕೂಡ ಭಾಗಿಯಾಗಿದ್ದಾರೆ. ಈ ಜೋಡಿ ಕಂಡರೆ ಅನೇಕರಿಗೆ ಇಷ್ಟ ಎನ್ನಬಹುದು. 

neenadhe naa kannada serial actor dileep shetty new home photos

“‌ಬಾಡಿಗೆ ಮನೆಯ ಮೇಲ್ಚಾವಣಿಯಿಂದ ನಮ್ಮದೇ ಆದ ಮನೆಯವರೆಗೆ… ಕನಸಿನಿಂದ ಆರಂಭವಾಗಿ, ಅನೇಕ ಸಂಕಷ್ಟಗಳನ್ನು ಹಾದುಬಂದು, ಇಂದು ನಮ್ಮದೇ ಆದ ನೆಲೆ ಸಿಕ್ಕಿದೆ. ಪ್ರತಿಯೊಂದು ತ್ಯಾಗವೂ ಈ ಪ್ರಯಾಣವನ್ನು ಸಾರ್ಥಕವಾಗಿಸಿದೆ” ಎಂದು ದಿಲೀಪ್‌ ಶೆಟ್ಟಿ ಅವರು ಹೇಳಿದ್ದಾರೆ.
 


ದಿಲೀಪ್‌ ಶೆಟ್ಟಿ ಅವರು ನಟನೆಗೂ ಮುನ್ನ ವಿದೇಶದಲ್ಲಿ ಕೆಲಸ ಮಾಡುತ್ತಿದ್ದರು. ನಟನೆ ಮೇಲಿನ ಆಸೆಯಿಂದ ಆ ಕೆಲಸಕ್ಕೆ ಗುಡ್‌ಬೈ ಹೇಳಿ ಧಾರಾವಾಹಿಯತ್ತ ಮುಖ ಮಾಡಿದ್ದರು. ಕನ್ನಡ ಕಿರುತೆರೆಯಲ್ಲಿ ಆರು ಅಡಿ ಎತ್ತರದ ದಿಲೀಪ್‌ ಶೆಟ್ಟಿ ಒಂದಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿದ್ದಾರೆ. 
 

ಈ ಹಿಂದೆ ʼವಿದ್ಯಾ ವಿನಾಯಕʼ ಧಾರಾವಾಹಿಯಲ್ಲಿ ದಿಲೀಪ್‌ ಶೆಟ್ಟಿ ನಟಿಸಿದ್ದರು. ಆ ನಂತರ ʼಡ್ಯಾನ್ಸಿಂಗ್ʼ‌ ಶೋನಲ್ಲಿಯೂ ಅವರು ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲದೆ ತೆಲುಗಿನಲ್ಲಿಯೂ ಅವರು ಒಂದಾದ ಮೇಲೆ ಒಂದರಂತೆ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. 
 

ದಿಲೀಪ್‌ ಶೆಟ್ಟಿ ಈಗ ಬೆಂಗಳೂರಿನಲ್ಲಿ ಹೊಸ ಮನೆಗೆ ಕಾಲಿಟ್ಟಿದ್ದಾರೆ. ನಟಿ ಅಮೃತಾ ರಾಮಮೂರ್ತಿ, ಖುಷಿ ಶಿವು, ರಾಘವೇಂದ್ರ, ಕಿಶನ್‌ ಬಿಳಗಲಿ ಸೇರಿದಂತೆ ಸಾಕಷ್ಟು ಜನರು ಈ ಮನೆಗೆ ಆಗಮಿಸಿ ಶುಭ ಹಾರೈಸಿದ್ದಾರೆ. 
 

ಅನೇಕರು ದಿಲೀಪ್‌ ಶೆಟ್ಟಿ ಸಾಧನೆ ಕಂಡು ಮೆಚ್ಚುಗೆ ಸೂಚಿಸಿದ್ದಾರೆ. ಚಿತ್ರರಂಗಕ್ಕೆ ಬಂದು ಕೆಲವೇ ವರ್ಷಗಳಲ್ಲಿ ಅವರು ಈ ಮನೆಗೆ ಕಾಲಿಟ್ಟಿದ್ದಾರೆ. 

Latest Videos

vuukle one pixel image
click me!