ತಮ್ಮ ಹೆಂಡ್ತಿಗೆ ಇಷ್ಟವಾದ ಸಿನಿಮಾ ಯಾವುದು ಮತ್ತು ಯಾಕೆ ಎಂಬುದನ್ನು ರಿವೀಲ್ ಮಾಡಿದ್ರು ಕ್ರೇಜಿಸ್ಟಾರ್ ರವಿಚಂದ್ರನ್!

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪತ್ನಿ ಸುಮತಿ ಅವರಿಗೆ 'ಈ' ಸಿನಿಮಾ ಅಂದ್ರೆ ತುಂಬಾ ಇಷ್ಟವಂತೆ. ಈ ಬಗ್ಗೆ ರವಿಚಂದ್ರನ್ ಮಾತನಾಡಿದ್ದಾರೆ.

ಕ್ರೇಜಿಸ್ಟಾರ್‌  ವಿ.ರವಿಚಂದ್ರನ್ ಸೂಪರ್ ಹಿಟ್ ಸಿನಿಮಾಗಳ ಸರದಾರ. ರವಿಚಂದ್ರನ್ ಕಲ್ಪನೆಯಲ್ಲಿ ಅರಳಿದ ಸಿನಿಮಾಗಳು, ಇಂದಿಗೂ ಹಚ್ಚ ಹಸಿರು ಆಗಿವೆ. ರವಿಚಂದ್ರನ್ ಸಿನಿಮಾಗಳಿಗೆ ನಾದಬ್ರಹ್ಮ ಹಂಸಲೇಖ ಅವರ ಸಂಗೀತ ಕಳಸ  ಇಟ್ಟವಂತೆ ಆಗುತ್ತಿತ್ತು. ಈ ಇಬ್ಬರು ಕಲಾವಿದರ ಕಾಂಬಿನೇಷನ್‌ನಲ್ಲಿ ಮೂಡಿಬಂದ ಹಾಡುಗಳಲ್ಲಿ ಪ್ರೀತಿಯ ಹೂರಣ ತುಂಬಿರುತ್ತಿತ್ತು

ಇಂದು ವಿ.ರವಿಚಂದ್ರನ್ ಸಿನಿಮಾಗಳ ಜೊತೆ ಕಿರುತೆರೆಯ ರಿಯಾಲಿಟಿ ಶೋನ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಜೀ  ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಭರ್ಜರಿ  ಬ್ಯಾಚೂಲರ್ಸ್-2 ಶೋಗೆ ರವಿಚಂದ್ರನ್ ಜಡ್ಜ್ ಆಗಿದ್ದಾರೆ. ಕ್ರೇಜಿಸ್ಟಾರ್ ಜೊತೆ ಡಿಂಪಲ್ ಕ್ವೀನ್, ಬುಲ್ ಬುಲ್ ರಚಿತಾ ರಾಮ್ ಸಹ ತೀರ್ಪುಗಾರ್ತಿಯಾಗಿದ್ದಾರೆ.


ಈ ವಾರ ಸರಿಗಮಪ  ಮತ್ತು ಭರ್ಜರಿ ಬ್ಯಾಚೂಲರ್ಸ್ ಶೋ ಜೊತೆಯಾಗಿ ಪ್ರಸಾರವಾಗಿತ್ತು. ಈ ವೇಳೆ ವಿ.ರವಿಚಂದ್ರನ್ ತಮ್ಮ ಮಡದಿ ಸುಮತಿ  ಅವರಿಗೆ ಇಷ್ಟವಾದ ಸಿನಿಮಾ ಯಾವುದು ಮತ್ತು ಯಾಕೆ ಎಂಬುದನ್ನು ವಿವರಿಸಿದ್ದಾರೆ. ಆ ಸಿನಿಮಾದಲ್ಲಿನ ತಮ್ಮ ಪಾತ್ರದ ಬಗ್ಗೆಯೂ ರವಿಮಾಮ ಮಾತನಾಡಿದ್ದಾರೆ.

ಸರಿಗಮಪ ಶೋನ ಸ್ಪರ್ಧಿಗಳಾದ ಲಹರಿ ಮತ್ತು ರಘುತ್ತೋಮ್ ಜೊತೆಯಾಗಿ 'ಯಾರೇ ನೀನು ಚೆಲುವೆ' ಸಿನಿಮಾದ ಟೈಟಲ್ ಹಾಡು ಹಾಡಿದರು. ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಎಸ್ ಜಾನಕಿ ಅವರು ಹಾಡಿದ  'ಪ್ರಿಯಾ ಲವ್ಸ್ ಮಿ ಪ್ರಿಯಾ' ಹಾಡನ್ನು ಅತ್ಯದ್ಭುತವಾಗಿ ಹಾಡಿದರು. 

ಈ ಹಾಡಿನ ಬಗ್ಗೆ ಕಮೆಂಟ್ ಮಾಡುತ್ತಿರುವ ಸಂದರ್ಭದಲ್ಲಿ, ಇದು ನನ್ನ ಪತ್ನಿಗೆ ಇಷ್ಟವಾದ ಸಿನಿಮಾ ಇದಾಗಿದೆ.  ನಾನು ನಟಿಸಿದ ಸಿನಿಮಾಗಳಲ್ಲಿ ನನ್ನ ಹೆಂಡ್ತಿ ಇಷ್ಟಪಡುವ ಸಿನಿಮಾ ಅಂದ್ರೆ ಅದು ಯಾರೇ ನೀನು ಚೆಲುವೆ. ಕಾರಣ ಈ ಚಿತ್ರದಲ್ಲಿ ನಾನು ಹೀರೋಯಿನ್‌ನನ್ನೇ ಮುಟ್ಟೇ ಇಲ್ಲ ಎಂದು ರವಿಚಂದ್ರನ್ ಹೇಳಿದರು. 

ಈ ಚಿತ್ರದಲ್ಲಿ ಯಾವುದೇ ಕಾಮ, ಮೋಹ, ಆಸೆ ಯಾವುದು ಇರಲಿಲ್ಲ. ಚಿತ್ರದಲ್ಲಿ ಸೂರ್ಯ ಮತ್ತು ಕಮಲಿ ನಡುವೆ ಶುದ್ಧ ಮತ್ತು ನಿಷ್ಕಲ್ಮಷವಾದ ಪ್ರೀತಿ ಮಾತ್ರ ಇತ್ತು. ಇಡೀ ಚಿತ್ರದಲ್ಲಿ ಹೀರೋ ಮುಖದಲ್ಲಿ ಯಾವುದೇ ಆಸೆಯನ್ನು ತೋರಿಸಲಿಲ್ಲ. ಹಾಗಾಗಿ ಪ್ರಿಯಾ ಲವ್ಸ್ ಮಿ ಪ್ರಿಯಾ ಹಾಡನ್ನು ಸಿನಿಮಾದಲ್ಲಿ ಬಳಸಲು ಆಗಲಿಲ್ಲ. ಹಾಗಾಗಿ ಟೈಟಲ್ ಕಾರ್ಡ್‌ನಲ್ಲಿ ಈ ಹಾಡು ಬಳಸಲಾಯ್ತು ಎಂದು ವಿ. ರವಿಚಂದ್ರನ್ ಹೇಳಿದರು.

1998ರಲ್ಲಿ ಬಿಡುಗಡೆಯಾದ 'ಯಾರೇ ನೀನು ಚೆಲುವೆ' ಮಲ್ಟಿ ಸ್ಟಾರ್‌ಗಳನ್ನು ಒಳಗೊಂಡಿತ್ತು. ವಿ.ರವಿಚಂದ್ರನ್ ಮತ್ತು ಸಂಗೀತಾ ಮಾಧವನ್ ನಾಯರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ವಿಷ್ಣುವರ್ಧನ್, ರಮೇಶ್  ಅರವಿಂದ್, ಜಗ್ಗೇಶ್, ಪ್ರಕಾಶ್ ರೈ, ತಾರಾ ಅನುರಾಧ, ದೊಡ್ಡಣ್ಣ, ಹೀರಾ ರಾಜಗೋಪಾಲ್ ಅತಿಥಿ ಪಾತ್ರಗಳಲ್ಲಿ ನಟಿಸಿದ್ದರು. ಯಾರೇ ನೀನು ಚೆಲುವೆ ಸಿನಿಮಾ ತಮಿಳಿನ  ಕಾದಲ್ ಕೊಟ್ಟೈ ಚಿತ್ರದ ರಿಮೇಕ್ ಆಗಿತ್ತು, ಹಿಂದಿಯಲ್ಲಿ ಸಿರ್ಫ್ ತುಮ್ ಹೆಸರಿನಲ್ಲಿ ಈ ಸಿನಿಮಾ ರಿಮೇಕ್ ಆಗಿತ್ತು.

Latest Videos

click me!