Lakshmi Nivasa Serial Twist: ಜಯಂತ್​ಗೆ 2ನೇ ಮದುವೆ ಆಫರ್​: ಅಳಿಯನ ಮದುವೆಗೆ ಮುಂದಾದ ಜಾಹ್ನವಿ ಅಪ್ಪ!

Published : Mar 05, 2026, 12:41 PM IST

ಲಕ್ಷ್ಮಿ ನಿವಾಸ ಧಾರಾವಾಹಿಯಲ್ಲಿ, ಜಯಂತ್ ಲಲಿತಮ್ಮನ ಸಾವಿಗೆ ಕಾರಣನಾಗಿ ಸಂತೋಷ್‌ನಿಂದ ಬ್ಲ್ಯಾಕ್‌ಮೇಲ್‌ಗೆ ಒಳಗಾಗಿದ್ದಾನೆ. ಈ ಸತ್ಯ ಯಾರಿಗೂ ತಿಳಿಯದಂತೆ, ಜಾಹ್ನವಿಯ ಪೋಷಕರು ಆತನಿಗೆ ಮರುಮದುವೆ ಮಾಡಲು ಮುಂದಾಗಿದ್ದಾರೆ.  

PREV
16
ಲಲಿತಮ್ಮನ ಕೊ*ಲೆ

ಲಕ್ಷ್ಮಿ ನಿವಾಸ (Lakshmi Nivasa) ಸೀರಿಯಲ್​ನಲ್ಲಿ ಸದ್ಯ ಜಯಂತ್​, ಲಲಿತಮ್ಮನ ಕೊ*ಲೆ ಮಾಡಿ ಏನೂ ಆಗದವರ ರೀತಿಯಲ್ಲಿ ಇದ್ದಾನೆ. ಜಾಹ್ನವಿಯನ್ನು ಹುಡುಕಿ ವಿಶ್ವನ ಮನೆಗೆ ಹೋದಾಗ, ಅಡ್ಡ ಬಂದ ಲಲಿತಮ್ಮನನ್ನು ದೂಕುವ ಭರದಲ್ಲಿ ಅವರ ಸಾವಿಗೆ ಕಾರಣನಾಗಿದ್ದಾನೆ ಜಯಂತ್​.

26
ಸಂತೋಷ್​ ಬ್ಲ್ಯಾಕ್​ಮೇಲ್​

ಇದರ ವಿಡಿಯೋ ಮಾಡಿರುವ ಸಂತೋಷ್​ ಜಯಂತ್​ನ ಬ್ಲ್ಯಾಕ್​ಮೇಲ್​ ಮಾಡುತ್ತಾ, ದುಡ್ಡು ವಸೂಲಿ ಮಾಡುತ್ತಿದ್ದಾನೆ, ಅದೇ ದುಡ್ಡಿನಲ್ಲಿ ಭರ್ಜರಿ ಮನೆಯ ಸಾಲವನ್ನೂ ತೀರಿಸಿದ್ದಾನೆ. ಆದರೆ ಜಯಂತ್​ಗೆ ಇನ್ನೂ ಅವನು ಯಾರು ಎನ್ನುವುದು ತಿಳಿದಿಲ್ಲ.

36
ಯಾರಿಗೂ ಗೊತ್ತಿಲ್ಲದ ಸತ್ಯ

ಇದೀಗ, ಜಾಹ್ನವಿ ಬದುಕಿದ್ದಾಳೆ ಎನ್ನುವ ಸತ್ಯ ಆಕೆಯ ಅಪ್ಪ-ಅಮ್ಮನಿಗೆ ಸೇರಿ ಬಹುತೇಕ ಯಾರಿಗೂ ಗೊತ್ತಿಲ್ಲ. ಆದರೆ ವಿಶ್ವನ ಮೂಲಕ ಜಯಂತ್​ಗೆ ಆ ಸತ್ಯ ಗೊತ್ತಿದೆ. ಆದರೆ ಅದನ್ನು ಆತ ಆಕೆಯ ಅಪ್ಪ-ಅಮ್ಮನ ಎದುರು ಬಾಯಿ ಬಿಡುತ್ತಿಲ್ಲ.

46
ಅಳಿಯನಿಗೆ ಮದುವೆ

ಮನೆಗೆ ಬಂದಿರುವ ಅಳಿಯ ತುಂಬಾ ಒಳ್ಳೆಯವ ಎಂದುಕೊಂಡಿದ್ದಾರೆ ಜಾಹ್ನವಿ ಅಪ್ಪ-ಅಮ್ಮ. ಅದೇ ಕಾರಣಕ್ಕೆ ಇನ್ನೂ ವಯಸ್ಸು ಇರುವ ಅಳಿಯನಿಗೆ ಮತ್ತೊಂದು ಮದುವೆ ಮಾಡಿಸಬೇಕು, ತನ್ನ ಮಗಳ ನೆನಪಿನಲ್ಲಿಯೇ ಆತ ಒಬ್ಬಂಟಿಯಾಗಿ ಇರುವುದು ಬೇಡ ಎನ್ನುವುದು ಅವರ ಕಳಕಳಿ.

56
ಮರು ಮದುವೆ

ಅದೇ ಮಾತನ್ನು ಜಯಂತ್​ ಮುಂದಿಟ್ಟಿದ್ದಾನೆ ಜಾಹ್ನವಿ ಅಪ್ಪ. ಆದರೆ ಜಾಹ್ನವಿ ಬದುಕಿದ್ದಾಳೆ ಎನ್ನುವ ಸತ್ಯ ತಿಳಿದಿರುವ ಜಯಂತ್​, ಅದನ್ನು ಹೇಳಲಿಲ್ಲ. ಆದರೆ ನಾನು ಜಾಹ್ನವಿ ನೆನಪಿನಲ್ಲಿಯೇ ಇರುತ್ತೇನೆ. ಮತ್ತೊಂದು ಮದುವೆ ಬೇಡ ಎಂದು ತಿರಸ್ಕರಿಸಿದ್ದಾನೆ.

66
ಮುಂದಿನದ್ದು ನಿಗೂಢ

ಒಟ್ಟಿನಲ್ಲಿ ಈಗ ಜಯಂತ್​ ಮತ್ತು ಜಾಹ್ನವಿ ಮುಂದಿನ ಸ್ಟೋರಿ ಮಾತ್ರ ನಿಗೂಢವಾಗಿದೆ. ಲಲಿತಾಳ ಸಾವಿಗೆ ಕಾರಣ ಆಗಿರೋ ಜಯಂತ್​ ಸಿಕ್ಕಿಬಿದ್ದರೆ ಆತನಿಗೆ ಭಾರಿ ಶಿಕ್ಷೆ ಆಗುವುದಂತೂ ಗ್ಯಾರೆಂಟಿ. ಒಟ್ಟಿನಲ್ಲಿ ಇವರಿಬ್ಬರ ಕಥೆ ಏನು ಎನ್ನುವುದು ವೀಕ್ಷಕರಿಗೂ ಅರ್ಥ ಮಾಡಿಕೊಳ್ಳಲು ಆಗ್ತಿಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories