ಸಿಎಂ ಬಂದ್ರೂ ಡಿಲೀಟ್​ ಮಾಡಲ್ಲ, ಅವ್ರಾ- ನಾನಾ ನೋಡ್ತೇನೆ, ನಾನು ಮೀಟರ್​ ಇರೋನು ಎಂದ Dog Satish

Published : Mar 04, 2026, 05:23 PM IST

ಬಿಗ್‌ಬಾಸ್ ಖ್ಯಾತಿಯ ಡಾಗ್ ಸತೀಶ್, ತಾವು ಮೂತ್ರ ವಿಸರ್ಜನೆ ಮಾಡುವಾಗ ಸುದೀಪ್ ಅವರ ಹಾಡನ್ನು ಬಳಸಿದ ವಿಡಿಯೋದಿಂದ ವಿವಾದ ಸೃಷ್ಟಿಸಿದ್ದಾರೆ. ಈ ಬಗ್ಗೆ ದೂರು ದಾಖಲಾಗಿದ್ದು, ತೀವ್ರ ವಿರೋಧ ವ್ಯಕ್ತವಾದರೂ, ಇದು ನನ್ನ ಇಷ್ಟ ಮತ್ತು ವಿಡಿಯೋ ಡಿಲೀಟ್ ಮಾಡುವುದಿಲ್ಲ ಎಂದು ಸತೀಶ್ ಸ್ಪಷ್ಟಪಡಿಸಿದ್ದಾರೆ.

PREV
16
ಸೂಸೂ ಮಾಡಿದ್ರೂ ಸುದ್ದಿ!

ನಾನು ಸೂ ಸೂ ಮಾಡಿದ್ರೂ ದೇಶದ ತುಂಬೆಲ್ಲಾ ಸುದ್ದಿ ಮಾಡ್ತೀನಿ ಅಂತ ಮೊದ್ಲೇ ಹೇಳಿದ್ನಲ್ವಾ, ನೋಡಿ ಸುದ್ದಿ ಮಾಡಿದ್ದೇನೆ. ಸುದೀಪ್​ ಅವರಿಗೆ ಹರ್ಟ್​ ಆಗಲಿ ಎಂದು ನಾನು ಸೂ ಸೂ ಮಾಡುವಾಗ ಅವರ ಹಾಡೇನು ಹಾಕಲಿಲ್ಲ. ನಾನು ಮೂತ್ರ ಮಾಡುವಾಗ, ದಾದಾ ಯಾರು ಗೊತ್ತಾ ಎನ್ನೋದು ಮ್ಯಾಚ್​ ಆಗಿತ್ತು ಎಂದು ಹಾಕಿರೋದು ಅಷ್ಟೇ ಎಂದು ಬಿಗ್​ಬಾಸ್​ ಡಾಗ್​ ಸತೀಶ್​ ಇದೀಗ ಹೇಳಿದ್ದಾರೆ.

26
ಬಿಗ್​ಬಾಸ್​ ರಜತ್​ ದೂರು

ಮೂತ್ರ ವಿಸರ್ಜನೆ ಸಮಯದಲ್ಲಿ ಸುದೀಪ್​ ಅವರ ಸಿನಿಮಾ ಹಾಡನ್ನು ಹಾಕಿರುವುದಕ್ಕೆ ಕೋಪಗೊಂಡು ಇದಾಗಲೇ ಬಿಗ್​ಬಾಸ್​ ಮಾಜಿ ಸ್ಪರ್ಧಿ ರಜತ್​ ಅವರು ದೂರು ದಾಖಲು ಮಾಡಿದ್ದಾರೆ. ವಿನಯ್​ ಗೌಡ ಕೂಡ ಕಿಡಿ ಕಾರಿದ್ದಾರೆ. ಇದೀಗ ಈ ಬಗ್ಗೆ ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಡಾಗ್​ ಸತೀಶ್​ ಈ ರೀತಿಯಾಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.

36
ಸಿಎಂ ಹೇಳಿದ್ರೂ ಡಿಲೀಟ್​ ಮಾಡಲ್ಲ

ನಾನು ಸಿಎಂ ಬಂದು ಹೇಳಿದ್ರೂ ವಿಡಿಯೋ ಡಿಲೀಟ್​ ಮಾಡಲ್ಲ. ನಾನಾ, ಅವ್ರಾ ನೋಡಿಯೇ ಬಿಡ್ತೇನೆ. ನಾನೇನು ಸುದೀಪ್​ ಅವರ ಫೋಟೋ ಹಾಕಿದ್ದೇನಾ, ಇಲ್ವಲ್ಲಾ. ಯಾವ ಹಾಡು ಹಾಕಬೇಕು ಎನ್ನೋದು ನನ್ನ ಇಷ್ಟ. ಹಾಕಿದ್ದೇನೆ ಅಷ್ಟೇ ಎಂದಿದ್ದಾರೆ ಡಾಗ್.

46
ತಂದಿಕ್ಕಲು ನೋಡ್ತಿದ್ದಾರೆ

ಇದರಲ್ಲಿ ವಿವಾದ ಆಗುವಂಥದ್ದು ಏನೂ ಇಲ್ಲ. ಸುಮ್ಮನೇ ಒಂದಷ್ಟು ಜನ ತಂದಿಕ್ಕಲು ನೋಡ್ತಾ ಇದ್ದಾರೆ. ಹಾಡು ಹಾಕಿದ್ರೆ ಏನು ತಪ್ಪು? ಅದು ನನ್ನ ಇಷ್ಟದ ಹಾಡು, ಹಾಕಿದೆ ಅಷ್ಟೇ. ಯಾವುದೇ ಕಾರಣಕ್ಕೂ ವಿಡಿಯೋ ಡಿಲೀಟ್​ ಮಾಡಲ್ಲ ಎಂದಿದ್ದಾರೆ.

56
ಕಮೆಂಟ್ಸ್​ ನಾನು ನೋಡೋದೇ ಇಲ್ವಲ್ಲಾ!

ಕೆಟ್ಟದ್ದಾಗಿ ಕಮೆಂಟ್ಸ್​ ಮಾಡೋದು ಮಾಡಿಕೊಳ್ತಾರೆ. ಕಮೆಂಟ್ಸ್​ ಬಂದಿದೆ ಅಂತ ನೀವು ಹೇಳಬೇಕು. ನನಗೆ ಗೊತ್ತೇ ಇಲ್ವಾಲ್ಲಾ. ಕಮೆಂಟ್ಸ್​ ಹಾಕೋರನ್ನು ತಗೊಂಡು ನಾನೇನು ಮಾಡಲಿ, ಅವರೇನು ನನಗೆ ದುಡ್ಡು ಕೊಡ್ತಾರಾ, ಇಲ್ವಾ ಇನ್ನೇನು ಕೊಡ್ತಾರೆ, ಕಮೆಂಟ್ಸ್​ ಹಾಕೋರು ಹಾಕ್ತಾರೆ ಎಂದು ಎಸ್​ಎಸ್​ಟಿವಿಗೆ ನೀಡಿರುವ ಸಂದರ್ಶನದಲ್ಲಿ ಡಾಗ್​ ಸತೀಶ್​ ಹೇಳಿದ್ದಾರೆ.

66
ನಾನು ಮೀಟರ್​ಲೆಸ್​ ಅಲ್ಲ

ನಾನು ಮೀಟರ್​ ಇರೋನು, ಮೀಟರ್​ಲೆಸ್​ ಅಲ್ಲ. ಯಾರೋ ಕುಮ್ಮಕ್ಕು ನೀಡಿ ಪ್ರಚೋದನೆ ಮಾಡ್ತಾದ್ದಾರೆ ಅಷ್ಟೇ. ನನ್ನ ಥೀಮ್​ಗೆ ಆ ಹಾಡು ಸ್ಯೂಟ್​ ಆಯಿತು. ನನ್ನ ಇನ್​ಸ್ಟಾಗ್ರಾಮ್​. ನನ್ನ ಇಷ್ಟ, ಯಾವ್ನೂ ಏನೂ ಮಾಡಲು ಆಗಲ್ಲ ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories