ಸೀರಿಯಲ್'ನಲ್ಲಿ ಸಾಯುತ್ತಿದ್ದಂತೆ ಸ್ವರ್ಗಕ್ಕೆ ಹೋಗದೇ, ಮಲೇಷ್ಯಾಕ್ಕೆ ಹಾರಿದ ‘Lakshmi Nivasa’ ಲಲಿತಾ

Published : Jan 09, 2026, 03:51 PM IST

Lakshmi Nivasa ಸೀರಿಯಲ್ ನಲ್ಲಿ ಲಲಿತಾ ಪಾತ್ರ ಮಾಡುತ್ತಿರುವ ನಟಿ ವಿಜಯಲಕ್ಷ್ಮೀ ಪಾತ್ರವನ್ನು ಇದೀಗ ಸಾವಿನ ಮೂಲಕ ಕೊನೆ ಮಾಡಲಾಗಿದೆ. ಧಾರಾವಾಹಿಯಲ್ಲಿ ಲಲಿತಾ ಸತ್ತಳೆಂದು ಮನೆಮಂದಿ ಕಣ್ಣೀರು ಹಾಕಿದ್ರೆ, ಇತ್ತ ರಿಯಲ್ ಆಗಿ ನಟಿ ಮಲೇಷ್ಯಾ ತೆರಳಿ ಎಂಜಾಯ್ ಮಾಡ್ತಿದ್ದಾರೆ.

PREV
17
ಲಕ್ಷ್ಮೀ ನಿವಾಸ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಲಕ್ಷ್ಮೀ ನಿವಾಸ’ ಧಾರಾವಾಹಿಯ ಕೊನೆಯ ಪ್ರೊಮೋದಲ್ಲಿ ವಿಶ್ವನ ತಾಯಿ ಲಲಿತಾ ಅವರು ಸಾವನ್ನಪ್ಪಿರುವುದನ್ನು ಕಾಣಬಹುದು. ಆ ಮೂಲಕ ಲಲಿತಾ ಪಾತ್ರವನ್ನು ಧಾರಾವಾಹಿಯಿಂದ ಮುಗಿಸಿದ್ದಾರೆ. ಆದರೆ ರಿಯಲ್ ಆಗಿ ಬೇರೆನೋ ನಡೆಯುತ್ತಿದೆ.

27
ವಿಜಯಲಕ್ಷ್ಮೀ

ಅಂದ ಹಾಗೆ ‘ಲಕ್ಷ್ಮೀ ನಿವಾಸ’ದ ಲಕ್ಷ್ಮೀ ಅತ್ತಿಗೆ ಲಲಿತಾ ಪಾತ್ರವನ್ನು ಹಿರಿಯ ನಟಿ ವಿಜಯಲಕ್ಷ್ಮೀ ನಿರ್ವಹಿಸುತ್ತಿದ್ದರು. ಧಾರಾವಾಹಿಯಲ್ಲಿ ಇವರ ಪಾತ್ರ ಅದ್ಭುತವಾಗಿ ಬರುತ್ತಿತ್ತು. ಆದರೆ ತೆರೆಯ ಹಿಂದಿನ ಕೈಗಳ ಕಾರಣ ತಮ್ಮ ಪಾತ್ರವನ್ನು ಸುಮ್ಮನೆ ಮುಗಿಸುತ್ತಾರೆ ಎಂದು ಈಗಾಗಲೇ ನಟಿ ಮಾಹಿತಿ ಹಂಚಿಕೊಂಡು ಬೇಸರ ಹೊರಹಾಕಿದ್ದರು.

37
ಸಾಯುತ್ತಿದ್ದಂತೆ ಮಲೇಷ್ಯಾದಲ್ಲಿ ಪ್ರತ್ಯಕ್ಷ

ಇದೀಗ ನಟಿ ವಿಜಯಲಕ್ಷ್ಮೀ ಸೀರಿಯಲ್ ನಲ್ಲಿ ಸಾವನ್ನಪ್ಪುತ್ತಿದ್ದಂತೆ, ರಿಯಲ್ ಲೈಫಲ್ಲಿ ಮಲೇಷ್ಯಾದಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು, ನಟಿ ತಮ್ಮ ಕುಟುಂಬದ ಜೊತೆ ಮಲೇಷ್ಯಾಗೆ ತೆರಳಿ ಸುಂದರ ಪ್ರವಾಸಿ ತಾಣಗಳಲ್ಲಿ ಎಂಜಾಯ್ ಮಾಡುತ್ತಿದ್ದಾರೆ.

47
ಮಲೆಷ್ಯಾ ಟ್ರಾವೆಲ್

ವಿಜಯಲಕ್ಷ್ಮೀ ಸುಬ್ರಹ್ಮಣಿಯವರು ಮಲೇಷ್ಯಾದ ಬಟು ಕೇವ್ ಗೆ ತೆರಳಿದ್ದು, ಅಲ್ಲಿ ವಿಶ್ವದ ಅತಿ ಎತ್ತರದ ಮುರುಗನ ಪ್ರತಿಮೆಯ ದರ್ಶನ ಪಡೆದು ಬಂದಿದ್ದಾರೆ. ಜೊತೆಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸುಂದರವಾದ ಫೋಟೊಗಳನ್ನು ನಟಿ ಶೇರ್ ಮಾಡಿದ್ದಾರೆ.

57
ಸತ್ತ ಮೇಲೆ ಸ್ವರ್ಗ ಅಲ್ಲ ಮಲೇಷ್ಯಾ

ನಟಿಯ ಫೊಟೊ ನೋಡಿ ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿ, ಎಲ್ಲರೂ ಸತ್ತ ನಂತರ ಸ್ವರ್ಗಕ್ಕೆ ಹೋಗುತ್ತಾರೆ. ಆದರೆ ನೀವು ಸತ್ತ ಬಳಿಕ ಸೀದಾ ಮಲೇಷ್ಯಾಗೆ ಹಾರಿದ್ದೀರಿ ಎಂದು ತಮಾಷೆ ಮಾಡಿದ್ದಾರೆ. ಜೊತೆಗೆ ಇನ್ನು ಮುಂದೆ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ನಿಮ್ಮನ್ನು ಮಿಸ್ ಮಾಡುವುದಾಗಿ ಜನರು ತಿಳಿಸಿದ್ದಾರೆ.

67
ಏನಂದ್ರು ಫ್ಯಾನ್ಸ್

We missing you in a ಲಕ್ಷ್ಮಿನಿವಾಸ serial . ನಿಮ್ಮ ಪಾತ್ರ ನಿಮ್ಮಷ್ಟು ಸುಂದರವಾಗಿ ಬಹುಶಃ ಮತ್ಯಾರೂ ನಿಭಾಯಿಸಲು ಸಾಧ್ಯವಿಲ್ಲ. ಅದಕ್ಕೆ ಅನ್ಸತ್ತೆ ನಿಮ್ಮ ಪಾತ್ರವನ್ನು ಧಾರಾವಾಹಿಯಲ್ಲಿ ಕೊನೆಗಾಣಿಸಿದ್ದು. ಆದರೆ ನೀವು ಇರಬೇಕಿತ್ತು. maam you did a good job. we always love you and miss you ಎಂದು ಭಾವನಾತ್ಮಕವಾಗಿ ಕಾಮೆಂಟ್ ಮಾಡಿದ್ದಾರೆ.

77
ಪಾತ್ರ ಮುಗಿಸುವ ಬಗ್ಗೆ ನಟಿ ಏನು ಹೇಳಿದ್ರು?

ಪ್ರೀತಿ ವಿಶ್ವಾಸಕ್ಕೆ ಬೆಲೆ ಇಲ್ಲ, ಬರೀ ಸ್ವಾರ್ಥ, ಪಕ್ಷಪಾತ ಒಂದು ಪಾತ್ರವನ್ನು ಮೇಲೆತ್ತಲು ಅದಕ್ಕೆ ಅನುಕಂಪ ಗಿಟ್ಟಿಸಿಕೊಡುವುದಕ್ಕೆ, ಇನ್ನೊಂದು ಪಾತ್ರವನ್ನು ಕೊಲ್ಲುವುದು.. ಕಲಾವಿದೆಗೆ ಕೊನೆಯವರೆಗೂ ತಿಳಿಸದಿರುವುದು.. ಒಬ್ಬ ಕಲಾವಿದೆಗೆ ಈ ಪರಿ ಅವಮಾನ ಎಂದು ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ನಟಿ ಪೋಸ್ಟ್ ಹಂಚಿಕೊಂಡಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories