Amruthadhaare Gautams daughter: ಗೌತಮ್‌ಗೆ ಭೂಮಿ ಸಿಕ್ಕ ಬೆನ್ನಲ್ಲೇ ತನ್ನ ಮಗ ಯಾರೆಂದು ಗೊತ್ತಾಗಿ ಖುಷಿಯಿಂದ ಕುಣಿದಾಡಿದ್ದ. ಆದರೀಗ ಮಗಳೂ ಸಿಕ್ಕಾಗಿದೆ. ಆದರೆ ಆಕೆಯೇ ತನ್ನ ಮಗಳು ಎಂದು ಗೌತಮ್‌ಗೆ ಮಾತ್ರವಲ್ಲ, ಸ್ವತಃ ಧಾರಾವಾಹಿ ವೀಕ್ಷಕರಿಗೂ ತಿಳಿದಿಲ್ಲ . ಆದರೆ ನಿರ್ದೇಶಕರು ಕೊಟ್ಟಿರುವ ಸುಳಿವು…
'ಅಮೃತಧಾರೆ' ಧಾರಾವಾಹಿಯಲ್ಲಿ ಗೌತಮ್-ಭೂಮಿ ಯಾವಾಗ ಒಂದಾಗ್ತಾರೆ ಅಂತ ವೀಕ್ಷಕರು ಕಾದಿದ್ದೇ ಕಾದದ್ದು. ಏತನ್ಮಧ್ಯೆ ಧಾರಾವಾಹಿ ಅಭಿಮಾನಿಗಳಿಗೆ ಸರ್‌ಪ್ರೈಸ್ ಸಿಕ್ಕಿದೆ. ಹೌದು, ಗೌತಮ್‌ಗೆ ಮಗಳು ಹತ್ತಿರವಾಗುವ ಸಮಯ ಬಂದಿದೆ. ನಿಮಗೆಲ್ಲರಿಗೂ ತಿಳಿದಿರುವಂತೆ ಶಕುಂತಲಾ ಮತ್ತು ಜೈದೇವ್ ಸಖತ್ತಾಗೆ ಪ್ಲಾನ್ ಮಾಡಿ, ಭೂಮಿ-ಗೌತಮ್ ಮಗಳು ಹುಟ್ಟಿದ ತಕ್ಷಣವೇ ಕಿಡ್ನ್ಯಾಪ್ ಮಾಡಿಸಿದ್ದರು. ಕೊನೆಗೆ ಆ ಮಗು ಎಲ್ಲಿಗೆ ಹೋಯ್ತು? ಎಂದು ಎಲ್ಲರೂ ತಲೆಕೆಡಿಸಿಕೊಂಡಿದ್ದರು.
26
ಹಾಡಿಹೊಗಳುತ್ತಿದ್ದಾರೆ ವಠಾರದ ಜನ
ಇತ್ತೀಚೆಗಷ್ಟೇ ಗೌತಮ್‌ಗೆ ಭೂಮಿ ಸಿಕ್ಕ ಬೆನ್ನಲ್ಲೇ ತನ್ನ ಮಗ ಯಾರೆಂದು ಗೊತ್ತಾಗಿ ಖುಷಿಯಿಂದ ಕುಣಿದಾಡಿದ್ದ. ಆದರೀಗ ಮಗಳೂ ಸಿಕ್ಕಾಗಿದೆ. ಆದರೆ ಆಕೆಯೇ ತನ್ನ ಮಗಳು ಎಂದು ಗೌತಮ್‌ಗೆ ಮಾತ್ರವಲ್ಲ, ಸ್ವತಃ ಧಾರಾವಾಹಿ ವೀಕ್ಷಕರಿಗೂ ತಿಳಿದಿಲ್ಲ ಬಿಡಿ. ಆದರೆ ನಿರ್ದೇಶಕರು ಕೊಟ್ಟಿರುವ ಸುಳಿವು ನೋಡಿದರೆ ಸದ್ಯ ಗೌತಮ್ ಜೊತೆಯಲ್ಲಿರುವ ಆ ಪುಟ್ಟ ಹುಡುಗಿ ಅವನದ್ದೇ ಮಗು ಎಂಬುದು ಗೊತ್ತಾಗುತ್ತದೆ. ಈಗ ಆ ಮಗು ಗೌತಮ್ ಜೀವನದಲ್ಲಿ ಬಂದ ಮೇಲೆ ಎಷ್ಟೆಲ್ಲಾ ಬದಲಾವಣೆ ಆಗ್ತಿದೆ ಅಂದ್ರೆ ಸ್ವತಃ ವಠಾರದ ಜನರೇ ಹಾಡಿಹೊಗಳುತ್ತಿದ್ದಾರೆ.
36
ದಿನಕ್ಕೊಂದು ಟ್ವಿಸ್ಟ್
ಈಗ ಧಾರಾವಾಹಿಯಲ್ಲಿ ಮತ್ತೊಂದು ಟ್ವಿಸ್ಟ್ ಎದುರಾಗಿದೆ. ಅದೇನಪ್ಪಾ ಅಂದ್ರೆ ಗೌತಮ್ ಆ ಹುಡುಗಿಯನ್ನ ಮನೆಗೆ ಕರೆದುಕೊಂಡ ಬಂದ ಮೇಲೆ ವಠಾರದಲ್ಲಿ ನೀರಿನ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳು ಬಗೆಹರಿದಿವೆ. ಅಷ್ಟೇ ಅಲ್ಲ, ಹುಡುಗಿಯ ಕೈನಲ್ಲಿ ತ್ರಿಶೂಲಾಕಾರದ ಮಚ್ಚೆಯನ್ನ ಸೂಕ್ಷ್ಮವಾಗಿ ಗಮನಿಸಿದ ಹಿರಿಯರೊಬ್ಬರು ಅದು ಸಾಮಾನ್ಯ ಮಗುವಲ್ಲ, ಅದೃಷ್ಟದ ಮಗು ಎಂದಿದ್ದಾರೆ. ವಿಶೇಷವೆಂದ್ರೆ ಸದ್ಯಕ್ಕೆ ಆ ಹುಡುಗಿ ಯಾರ ಜೊತೆಯೂ ಮಾತನಾಡುತ್ತಿಲ್ಲ. ಇದನ್ನೆಲ್ಲಾ ನೋಡಿದ ವೀಕ್ಷಕರು ಏನಿದು ದಿನಕ್ಕೊಂದು ಟ್ವಿಸ್ಟ್ ಅಂದಿದ್ದಾರೆ.
ಅಷ್ಟೇ ಅಲ್ಲ, ಧಾರಾವಾಹಿಯಲ್ಲಿ ಎಲ್ಲರೂ ಒಂದಾಗುತ್ತಿದ್ದಾರೆ. ಈಗ ಭೂಮಿಕಾ ಜೊತೆಗಿರುವ ಆಕೆಯ ಮಗ ಆಕಾಶ್, ತಾತ-ಮೊಮ್ಮಗನ ಜೊತೆಗೂಡಿ ಕುಣಿದು ಕುಪ್ಪಳಿಸುತ್ತಿದ್ದಾನೆ. ಆದರೆ ಈತನೇ ನಮ್ಮ ಮೊಮ್ಮಗ ಎಂಬುದು ಭೂಮಿ ತಂದೆ-ತಾಯಿಗೆ ಗೊತ್ತಾಗಿಲ್ಲ. ಎಲ್ಲವೂ ಒಂದು ರೀತಿ ಕಣ್ಣಾಮುಚ್ಚಾಲೆ ರೀತಿ ನಡೆದುಕೊಂಡು ಹೋಗುತ್ತಿದೆ.
56
ಕೆಟ್ಟ ದೃಷ್ಟಿ ಬೀಳದಿರಲಿ
ಇದೆಲ್ಲದರ ಮಧ್ಯೆ ಶಕುಂತಲಾ-ಜೈದೇವ್ ಮಾತ್ರ ಆಸ್ತಿಗಾಗಿ ಭಾರೀ ಪ್ಲಾನ್ ಮಾಡುತ್ತಲೇ ಬರುತ್ತಿದ್ದಾರೆ. ಇಷ್ಟೆ ಆದರೆ ಪರ್ವಾಗಿಲ್ಲ. ಇವರ ಕೆಟ್ಟ ದೃಷ್ಟಿ ಪುನಃ ಗೌತಮ್ ಫ್ಯಾಮಿಲಿ ಮೇಲೆ ಬಿತ್ತೋ ಕಥೆ ಎತ್ತ ಸಾಗುವುದೋ ಗೊತ್ತಿಲ್ಲ. ಆದರೆ ಸದ್ಯ ಧಾರಾವಾಹಿಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಎದುರಾಗುತ್ತಿರುವುದಂತು ಸುಳ್ಳಲ್ಲ. ಆದ್ರೆ ಇದನ್ನೇ ತುಂಬಾ ಡ್ರ್ಯಾಗ್ ಮಾಡ್ಬೇಡಿ ಅಂತಿದ್ದಾರೆ ವೀಕ್ಷಕರು.
66
ಮಗಳು ಸಿಕ್ಕಿದ್ದೂ ವೀಕ್ಷಕರಿಗೂ ಖುಷಿ.
ಧಾರಾವಾಹಿಯಲ್ಲಿ ಗೌತಮ್‌ಗೆ ಆಕೆಯೇ ತನ್ನ ಮಗಳು ಎಂದು ಗೊತ್ತಾದ ಮೇಲೆ ಎಷ್ಟು ಖುಷಿಪಡುತ್ತಾನೋ ಅಷ್ಟೇ ಖುಷಿ ವೀಕ್ಷರಿಗಾಗಿದೆ. ಹಾಗಾಗಿ ವೀಕ್ಷಕರು ಮಾಡಿರುವ ಕಾಮೆಂಟ್ ನೋಡಿದ್ರೆ ನಿಮ್ಮ ಮುಖದಲ್ಲೂ ಸಂತಸ ತರಿಸಬಹುದು. "ಅಂತು ಡುಮ್ಮ ಸರ್ ಯುವರಾಣಿ ಸಿಕ್ಕಳು. ಆದಷ್ಟು ಬೇಗ ಭೂಮಿ ಗೌತಮ್ ಸರ್ ಒಂದಾಗಲಿ", "ಡೈರೆಕ್ಟರ್ ಸರ್ ಅದೆಷ್ಟು ಅಂತ ಎಳ್ಕೊಂಡು ಹೋಗ್ತೀರಾ, ಒಂದಲ್ಲ ಒಂದು ದಿನ ಎಲ್ರು ಒಂದಾಗ್ಲೇ ಬೇಕು ಅಲ್ವಾ ಬೇಗ ಒಂದು ಮಾಡಿ ಪುಣ್ಯ ಕಟ್ಕೋಳಿ. ಸತತವಾಗಿ ಒಂದು ತಿಂಗಳು ಆಯ್ತು ನಮ್ ಗುಂಡು ಸರ್ ಭೂಮಿ ವೇದನೆ ನೋಡೋಕ್ ಆಗ್ತಾ ಇಲ್ಲ", "ಇದು ಪಕ್ಕ, ನಮ್ ಗುಂಡು ಭೂ ಮಗಳು ಅನ್ನೋರು ಲೈಕ್ ಮಾಡಿ" "ಗೌತಮ್ ದಿವಾನ್ ಅವರಂತಹ ಅಣ್ಣ,ಗಂಡ,ಅಪ್ಪ, ಎಲ್ಲ ತರತಹದ ಕ್ಯಾರೆಕ್ಟರ್ ಇರೋರು ಎಲ್ಲರಿಗೂ ಬೇಕು. ಸಮಾಜಕ್ಕೆ ಒಳ್ಳೇ ವ್ಯಕ್ತಿ ಅನಿಸಿಕೊಳ್ಳಲಿ ಅಷ್ಟೇ" ಅಂತೆಲ್ಲಾ ಖುಷ್ ಖುಷಿಯಾಗಿ ಹೇಳಿದ್ದಾರೆ.