ಶುಭಕೃತ್‌ ನಾಮ ಸಂವತ್ಸರ ಬಂತು; ‌ಹೀರೋ ಆದ Lakshmi Nivasa Serial ನಟ ಧನಂಜಯ್!‌

Published : Sep 17, 2025, 05:23 PM IST

ಲಕ್ಷ್ಮೀ ನಿವಾಸ ಧಾರಾವಾಹಿಯ ಸಿದ್ದೇಗೌಡ್ರು‌ ಎನ್ನುವ ಪಾತ್ರದದಲ್ಲಿ ನಟಿಸುತ್ತಿರುವ ಧನಂಜಯ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕಂಠದಾನ ಕಲಾವಿದ, ಡ್ಯಾನ್ಸರ್ ಆಗಿರುವ ಧನಂಜಯ್ ಈಗಾಗಲೇ ‘ವಾಸಂತಿ ನಲಿದಾಗ’, ‌’ಥಗ್ಸ್ ಆಫ್ ರಾಮಘಡʼ ಎಂಬ ಸಿನಿಮಾಗಳಲ್ಲಿ ನಟಿಸಿದ್ದಾರೆ. 

PREV
15
ಹುಟ್ಟುಹಬ್ಬದ ವಿಶೇಷ

ಈಗ ಧನಂಜಯ್‌ ಅವರು ಪೂರ್ಣ ಪ್ರಮಾಣದ ಹೀರೋ ಆಗಿದ್ದಾರೆ. ಶುಭಕೃತ್ ನಾಮ ಸಂವತ್ಸರ ಎಂಬ ಸಿನಿಮಾದಲ್ಲಿ ಧನಂಜಯ್‌ ಈಗ ಹೀರೋ. ಇವರ ಹುಟ್ಟುಹಬ್ಬದ ವಿಶೇಷವಾಗಿ‌‌ ಸಿನಿಮಾ ತಂಡವು ಪೋಸ್ಟರ್ ಬಿಡುಗಡೆ ಮಾಡಿ ಶುಭ ಹಾರೈಸಿದೆ.

25
ಕ್ರೈಮ್ ಥ್ರಿಲ್ಲರ್ ಕಥೆ

‘ಫೋರ್ ವಾಲ್ಸ್’ ಸಿನಿಮಾ ಮೂಲಕ ಪ್ರೇಕ್ಷಕರ ಮೆಚ್ಚುಗೆ ಪಡೆದಿರುವ ಎಸ್ ಎಸ್ ಸಜ್ಜನ್ ಅವರ ಹೊಸ ಪ್ರಯತ್ನವೇ ಶುಭಕೃತ್ ನಾಮ ಸಂವತ್ಸರ. ಟೈಟಲ್ ಹೇಳುವಂತೆ ಇದೊಂದು ಹಬ್ಬದ ಹಿನ್ನೆಲೆಯಲ್ಲಿ ನಡೆಯುವ ಕಥೆಯಾಗಿದೆ. ಅದಕ್ಕೆ ಕ್ರೈಮ್ ಥ್ರಿಲ್ಲರ್ ಕಥೆ ಟಚ್ ಕೊಟ್ಟು ಸಜ್ಜನ್ ಸಿನಿಮಾ ಮಾಡುತ್ತಿದ್ದಾರೆ.

35
ಕನ್ನಡ ಹಾಗೂ ತೆಲುಗು ಭಾಷೆ

ಸಜ್ಜನ್‌ ಸಾಹಸಕ್ಕೆ ಫೋರ್ ವಾಲ್ಸ್‌ ನಿರ್ಮಾಣ ತಂಡ ಸಾಥ್ ಕೊಡುತ್ತಿದೆ. ಎಸ್.ವಿ ಪಿಕ್ಚರ್ಸ್ ಬ್ಯಾನರ್ ನಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಶುಭಕೃತ್ ನಾಮ‌ ಸಂವತ್ಸರ ತೆರೆಗೆ ಬರಲಿದೆ.‌ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಶೂಟಿಂಗ್ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

45
ಕ್ಯಾಮರಾ ಕೆಲಸ ಯಾರದ್ದು?

ಶುಭಕೃತ್ ನಾಮ ಸಂವತ್ಸರ ಸಿನಿಮಾಗೆ ದೇವೇಂದ್ರ ವಡ್ಡೆ ಕ್ಯಾಮೆರಾ ವರ್ಕ್ ಮಾಡುತ್ತಿದ್ದಾರೆ. ತೆಲುಗಿನ ರುದ್ರಮದೇವಿ, ಗರುಡವೇಗ ಸಿನಿಮಾಗಳಲ್ಲಿ ದುಡಿದ ಅನುಭವ ಇದೆ.

55
ಸಂಗೀತ ನಿರ್ದೇಶಕ ಯಾರು?

ತೆಲುಗು ಸಿನಿಮಾಗಳಲ್ಲಿ ಕೆಲಸ ಮಾಡಿ ಅನುಭವವಿರುವ ಸಂಗೀತ ನಿರ್ದೇಶಕ ಸುಧಾ ಶ್ರೀನಿವಾಸ್ ಮ್ಯೂಸಿಕ್ ಒದಗಿಸಲಿದ್ದಾರೆ. ನವೆಂಬರ್‌ನಿಂದ ಸಿನಿಮಾ ತಂಡವು ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ.

Read more Photos on
click me!

Recommended Stories