ಜೀ ಪವರ್ ನಲ್ಲಿ ಈಗಾಗಲೇ ಪ್ರಸಾರವಾಗುತ್ತಿರುವ ಶುಭಸ್ಯ ಶೀಘ್ರಂ ಧಾರಾವಾಹಿ ಸಂಪೂರ್ಣವಾಗಿ ಗಟ್ಟಿಮೇಳವನ್ನೇ ರಿಮೇಕ್ ಮಾಡಿದಂತಿದೆ. ಈಗಾಗಲೇ ಸೂಪರ್ ಹಿಟ್ ಆಗಿರುವ ಒಂದು ಧಾರಾವಾಹಿಯಲ್ಲಿ, ಕಿಂಚಿತ್ತಷ್ಟೇ ಬದಲಾವಣೆ ಮಾಡಿ ಮತ್ತೆ ಪ್ರಸಾರ ಮಾಡುವ ಅಗತ್ಯ ಏನಿತ್ತು ಎಂದು ಕೇಳುತ್ತಿದ್ದಾರೆ ಜನ.
ಇತ್ತೀಚೆಗಷ್ಟೇ ಜೀ ಪವರ್ (Zee Power) ಹೊಸ ವಾಹಿನಿ ಆರಂಭವಾಗಿದ್ದು, ಹಲವಾರು ಸೀರಿಯಲ್ ಗಳು ಆರಂಭವಾಗಿವೆ. ಒಂದೊಂದು ಕಥೆ ಒಂದೊಂದು ರೀತಿಯಲ್ಲಿ ವಿಭಿನ್ನವಾಗಿವೆ. ಇವುಗಳಲ್ಲಿ ಒಂದು ಧಾರಾವಾಹಿ ಶುಭಸ್ಯ ಶೀಘ್ರಂ. ಅಮೃತಧಾರೆಯ ವಿಲನ್ ಜೈ ದೇವ್ ಆಲಿಯಾಸ್ ರಾಣವ್ ಗೌಡ, ಈ ಧಾರಾವಾಹಿಯಲ್ಲಿ ನಾಯಕ.
27
ಜೀ ಪವರ್ ಸೀರಿಯಲ್
ಜೀ ಕನ್ನಡ ವಾಹಿನಿಯಲ್ಲಿ 'ಅಣ್ಣಯ್ಯ' ಧಾರಾವಾಹಿಯನ್ನು ನಿರ್ಮಾಣ ಮಾಡಿರುವ ಪ್ರಮೋದ್ ಶೆಟ್ಟಿ ಮತ್ತು ಸುಪ್ರೀತಾ ಪ್ರಮೋದ್ ಶೆಟ್ಟಿ ಅವರು ಈಗ ಜೀ ಪವರ್‌ಗಾಗಿ 'ಶುಭಸ್ಯ ಶೀಘ್ರಂ' ಹೆಸರಿನ ಹೊಸ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ.
37
ರಾಣವ್ ಗೌಡ ನಾಯಕ
ಶುಭಸ್ಯ ಶೀಘ್ರಂ (Shubhasya Sheegram) ಧಾರಾವಹಿಯ ನಾಯಕಿಯಾಗಿ ಸ್ನೇಹಾ ಮತ್ತು ಹೀರೋ ಆಗಿ ರಾಣವ್ ನಟಿಸುತ್ತಿದ್ದಾರೆ. ಇದೊಂದು ಕೌಟುಂಬಿಕ ಧಾರಾವಾಹಿಯಾಗಿದ್ದು, ಆರಂಭದಲ್ಲಿ ಪ್ರೊಮೋದಲ್ಲಿ ತೋರಿಸಿದಂತೆ ನಾಯಕಿ ಅಮ್ಮ ಸಣ್ಣ ಅಂಗಡಿ ಇಟ್ಟುಕೊಂಡಿದ್ದು, ಅಪ್ಪ ಸೆಕ್ಯೂರಿಟಿ ಗಾರ್ಡ್, ನಾಲ್ಕು ಜನ ಅಕ್ಕ ತಂಗಿಯರ ಕಥೆ ಇದು.
ನಾಯಕಿಯು ತನ್ನ ಕಿವಿ ಕೇಳದ ಅಕ್ಕನ ಮದುವೆ ಮಾಡಲು ಏನೆಲ್ಲಾ ತ್ಯಾಗ ಮಾಡುತ್ತಾಳೆ ಎಂಬುದೇ ಈ ಸೀರಿಯಲ್‌ನ ಕಥೆ. ಈ ಸಂದರ್ಭದಲ್ಲಿ ಆಕೆ ಹುಡುಗಿಯರನ್ನೇ ಕಂಡರೆ ಆಗದಂತಹ ನಾಯಕನನ್ನು ಭೇಟಿಯಾಗುತ್ತಾಳೆ, ಕೊನೆಗೆ ಆತನ ಜೊತೆಗೆ ಗುದ್ಧಾಟ ನಡೆದು, ಆತನನ್ನೇ ಮದುವೆಯಾಗುತ್ತಾಳೆ.
57
ಗಟ್ಟಿಮೇಳ ರಿಮೇಕ್
ಸದ್ಯ ಪ್ರಸಾರವಾಗುತ್ತಿರುವ ಈ ಧಾರಾವಾಹಿಯನ್ನು ನೋಡಿದರೆ, ಕಥೆ ಸೇಮ್ ಟು ಸೇಮ್ ಜೀ ಕನ್ನಡದ ಜನಪ್ರಿಯ ಧಾರಾವಾಹಿಯಾದ ಗಟ್ಟಿಮೇಳದ (Gattimela) ರಿಮೇಕ್ ನಂತೆ ಇದೆ. ಕಥೆ. ಕ್ಯಾರೆಕ್ಟರ್ ಎಲ್ಲವೂ ಸೇಮ್ ಟು ಸೇಮ್ ಹಾಗೇ ನಡೆಯುತ್ತಾ ಸಾಗಿದೆ. ಸೀರಿಯಲ್ ನೋಡಿರುವ ವೀಕ್ಷಕರು ಸಹ ಅದನ್ನೆ ಹೇಳುತ್ತಿದ್ದಾರೆ.
67
ಅಮೂಲ್ಯ -ಶುಭ ಕಥೆ ಒಂದೇ
ಗಟ್ಟಿಮೇಳದಲ್ಲಿ ಅಮೂಲ್ಯ ಅಮ್ಮ ಮಾಡಿದ ತಿಂಡಿಗಳನ್ನು ತನ್ನ ಸ್ಕೂಟರಲ್ಲಿ ತೆಗೆದುಕೊಂಡು ಹೋಗಿ ಮಾರುತ್ತಿದ್ದಳು, ಇಲ್ಲಿ ಶುಭ ಸೈಕಲಲ್ಲಿ ತೆಗೆದುಕೊಂಡು ಮಾರುತ್ತಿದ್ದಾಳೆ. ಗಟ್ಟಿ ಮೇಳದಲ್ಲಿ ವೇದಾಂತ್ ಗೆ ಹುಡುಗಿಯರನ್ನು ಕಂಡರೆ ಆಗೋದಿಲ್ಲ, ತನ್ನ ಆಫೀಸಲ್ಲೂ ಹುಡುಗಿಯರನ್ನು ಸೇರಿಸೋದಿಲ್ಲ, ಇಲ್ಲೂ ಅಷ್ಟೇ ನಾಯಕನಿಗೆ ಹುಡುಗಿಯರನ್ನು ಕಂಡ್ರೆ ಆಗೋದಿಲ್ಲ.
77
ಯಾಕೆ ಮತ್ತೆ ಅದೇ ಕಥೆಯ ಸೀರಿಯಲ್?
ಗಟ್ಟಿಮೇಳದಲ್ಲಿ ನಾಯಕಿಯ ಅಕ್ಕನನ್ನು ನಾಯಕನ ತಮ್ಮ ಇಷ್ಟಪಟ್ಟು ಮದುವೆಯಾಗುತ್ತಾನೆ, ಶುಭಸ್ಯ ಶೀಘ್ರಂನಲ್ಲೂ ನಾಯಕಿ ಶುಭಳ ಕಿವಿ ಕೇಳದ ಅಕ್ಕನ ಮೇಲೆ ನಾಯಕನ ತಮ್ಮನಿಗೆ ಲವ್ ಆಗುತ್ತಾ ಬಂದಿದೆ. ಹಾಗಿದ್ರೆ ಎರಡೂ ಕಥೆ ಒಂದೇ ಅಂದಮೇಲೆ ಈ ಹಿಂದೆ ಯಶಸ್ವಿಯಾದ ಅದೇ ಕಥೆಯನ್ನು ಮತ್ತೆ ಇಲ್ಲಿ ಮಾಡುವ ಅಗತ್ಯ ಏನಿದೆ ಅನ್ನೋದೆ ಪ್ರಶ್ನೆ.