Lakshmi Nivasa Serial Episode: ಆಸ್ತಿಗೋಸ್ಕರ ಇಂದು ಸಮಾಜದಲ್ಲಿ ಅಣ್ಣ-ತಮ್ಮ, ಅಕ್ಕ-ತಂಗಿ ಎಂದು ಹೊಡೆದಾಟ ಮಾಡುವುದನ್ನು ನೋಡುತ್ತೇವೆ. ಅಣ್ಣ ನಮ್ಮನವಾದರೂ ಕೂಡ, ಅತ್ತಿಗೆ ನಮ್ಮವಳಾ ಎಂಬ ಗಾದೆ ಇದೆ. ಆದರೆ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಈ ಗಾದೆಯನ್ನು ಉಲ್ಟಾ ಮಾಡಬೇಕಿದೆ.
ಹಣಕ್ಕೋಸ್ಕರ ಒಡಹುಟ್ಟಿದ ಸಹೋದರಿ ಜೀವನ ಹಾಳು ಮಾಡಲು ಅಣ್ಣ-ತಮ್ಮ ರೆಡಿಯಾಗಿದ್ದಾರೆ.
ಹೌದು, ಹರೀಶ್ ಹಾಗೂ ಸಂತೋಷ್‌ಗೆ ಹಣದ ವ್ಯಾಮೋಹ. ಅಪ್ಪ-ಅಮ್ಮನನ್ನು ನೋಡಿಕೊಳ್ಳೋಕೆ ಆಗೋದಿಲ್ಲ ಎಂದು ಅವರು ಅಪ್ಪ-ಅಮ್ಮನನ್ನು ಹಂಚಿಕೊಂಡರು, ಮನೆಯಲ್ಲಿರಿಸಿಕೊಂಡು ಅವಮಾನ ಮಾಡಿದರು. ಹೀಗಾಗಿ ಅಪ್ಪ-ಅಮ್ಮ ಅವರ ಹಂಗಿನಿಂದ ಹೊರಬಂದು, ಸ್ವಂತ ಮನೆ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಇಷ್ಟೆಲ್ಲ ಆದರೂ ಕೂಡ ಅಪ್ಪ-ಅಮ್ಮನ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು.
26
ಸಂತೋಷ್‌ಗೆ ತಕ್ಕ ಶಾಸ್ತಿ ಆಯ್ತು
ಅನ್ಯಾಯ ಮಾಡಿದರೆ, ಅಧರ್ಮದಿಂದ ಇದ್ದರೆ ಎಷ್ಟು ದಿನ ಅಲ್ಲವೇ? ಒಂದಲ್ಲ ಒಂದು ದಿನ ಕರ್ಮ ಹಿಂತಿರುಗಿಸಿ ಕೊಡುತ್ತದೆ ಎನ್ನುತ್ತಾರೆ. ಹಾಗೆಯೇ ಸಂತೋಷ್, ಹರೀಶ್ ಮಾಡಿದ ಕೆಲಸದಲ್ಲಿ ನಷ್ಟ ಬಂದಿದೆ. ಹೀಗಿದ್ದರೂ ಇವರಿಗೆ ಬುದ್ಧಿ ಬರುತ್ತಿಲ್ಲ. ಅವರು ಮತ್ತೆ ಮತ್ತೆ ಅನ್ಯಾಯ ಮಾಡುತ್ತಿದ್ದಾರೆ.
36
ಭಾವನಾ-ಸಿದ್ದು ದೂರ ಆಗ್ಬೇಕಂತೆ
ತನಗಿಂತ ಐದು ವರ್ಷ ದೊಡ್ಡವಳಾದ ಭಾವನಾಳನ್ನು ಸಿದ್ದೇಗೌಡ ಪ್ರೀತಿಸಿ ಮದುವೆಯಾಗುತ್ತಾನೆ. ಸಮಾಜದ ಕಟ್ಟುಪಾಡುಗಳನ್ನು ಮೀರಿ ಭಾವನಾ ಅವನನ್ನು ಪ್ರೀತಿಸುತ್ತಾಳೆ. ಇವರು ಚೆನ್ನಾಗಿ ಬದುಕುತ್ತಿರುವಾಗ ಸಿದ್ದು ತಂದೆ, ತಾಯಿ, ಅತ್ತಿಗೆ ಸೇರಿಕೊಂಡು ಇವರಿಬ್ಬರನ್ನು ಬೇರೆ ಬೇರೆ ಮಾಡಲು ನೋಡುತ್ತಾಳೆ. ಸಂತೋಷ್‌ನನ್ನು ಈ ಕೆಟ್ಟ ಕೆಲಸಕ್ಕೆ ಬಳಸಿಕೊಳ್ತಾರೆ.
ಭಾವನಾ ಹಾಗೂ ಸಿದ್ದೇಗೌಡ ದೂರ ಆದರೆ, ಭಾವನಾಳನ್ನು ನಿಮ್ಮ ಮನೆಗೆ ಕರೆದುಕೊಂಡು ಹೋಗಿ ಎಂದು ಸಿದ್ದು ತಂದೆ ಹೇಳಿದಾಗ, ಸಂತೋಷ್ ದುಡ್ಡಿನ ಆಸೆಯಿಂದ ಭಾವನಾಳನ್ನು ಮನೆಗೆ ಕರೆದುಕೊಂಡು ಬರುತ್ತಾನೆ. ಆಮೇಲೆ ಭಾವನಾ ಇನ್ನೊಂದು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಾಳೆ. ಇದರ ಬಗ್ಗೆ ಸಂತುಗಾಗಲೀ, ಹರಿಗಾಗಲೀ ಚಿಂತೆಯೇ ಇಲ್ಲ.
56
ಇಂಥ ಅಣ್ಣ-ತಮ್ಮ ಇರೋ ಬದಲು ಸಾಯಬೇಕು
ಒಡಹುಟ್ಟಿದ ಸಹೋದರಿ ಜೀವನ ಹಾಳಾಯ್ತು, ಗಂಡನಿಂದ ದೂರವಾದಳು, ಅವಳು ಮುಂದೆ ಒಬ್ಬಂಟಿಯಾಗಿ ಜೀವನ ಮಾಡಬೇಕು, ಗಂಡ ಇದ್ದು ಇಲ್ಲದಂತೆ ಬದುಕಬೇಕು, ಮತ್ತೆ ಅವಳನ್ನು ಯಾರು ಮದುವೆ ಆಗ್ತಾರೆ ಎಂಬೆಲ್ಲ ಪ್ರಶ್ನೆಗಳಿವೆ. ಇವು ಯಾವುದು ಆ ಸಹೋದರರಿಗೆ ಕಾಣಲೇ ಇಲ್ವೇ? ತಾವು ಚೆನ್ನಾಗಿರಬೇಕು, ತಮ್ಮ ಕೈಯಲ್ಲಿ ದುಡ್ಡು ಓಡಾಡಬೇಕು, ತಾವು ಮನೆ ಖರೀದಿ ಮಾಡಬೇಕು, ಆಸ್ತಿ ಮಾಡಬೇಕು ಎಂದು ಬಯಸುವ ಇವರು ನಿಜವಾದ ಸಹೋದರರೇ? ಇಂಥ ಸಹೋದರರು ಇಲ್ಲದೆ ಹೋದರೆ ಚೆನ್ನಾಗಿರುತ್ತೆ, ಇವರಿಗೆ ಬುದ್ಧಿ ಕಲಿಸಬೇಕು ಎಂದು ವೀಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
66
ಮುಂದೆ ಏನಾಗುವುದು?
ಸಂತೋಷ್ ಹಾಗೂ ಹರೀಶ್ ಏನೇ ಮಾಡಿದರೂ ಕೂಡ ನಿಜವಾದ ಪ್ರೀತಿಗೆ ಸಾವಿಲ್ಲ ಎಂದು ಹೇಳಲಾಗುತ್ತದೆ. ಅಂತೆಯೇ ಸಿದ್ದೇಗೌಡ ಹಾಗೂ ಭಾವನಾ ಮತ್ತೆ ಒಂದಾಗಿದ್ದಾರೆ. ಇದನ್ನು ನೋಡಿ ಶ್ರೀನಿವಾಸ್-ಲಕ್ಷ್ಮೀ ಕೂಡ ಖುಷಿಯಾಗಿದ್ದಾರೆ.