ಸ್ಟಾರ್ ಸುವರ್ಣ ವಾಹಿನಿಯಲ್ಲಿ ನಂ 1 ಆಗಿರುವ ಈ ಸೀರಿಯಲ್ ಸ್ವಮೇಕ್ ಕಥೆಯಾಗಿದೆ.
ಅಜಿತ್ ರಾಮ್‌ನಾರಾಯಣ್ ಎನ್ನುವ ಪೊಲೀಸ್ ಆಫೀಸರ್‌ಗೆ ಅತ್ತೆ ಮಗಳನ್ನು ಮದುವೆ ಆಗೋಕೆ ಇಷ್ಟವಿರೋದಿಲ್ಲ. ಹೀಗಾಗಿ ಅವನು ಭೂಮಿ ಎನ್ನುವ ಹುಡುಗಿಯನ್ನು ಒಂದು ವರ್ಷದ ಮಟ್ಟಿಗೆ ಮದುವೆ ಆಗುತ್ತಾನೆ. ಕಾಂಟ್ರ್ಯಾಕ್ಟ್ ಮದುವೆ, ಡಿವೋರ್ಸ್ ಕಂಡರೆ ಭೂಮಿಗೆ ಆಗೋದಿಲ್ಲ. ಆದರೆ ತನ್ನ ತಂದೆಯ ಕೊಲೆಯ ಆರೋಪ ತಾಯಿ ಮೇಲಿದೆ, ತಾಯಿಯನ್ನು ಬಿಡಿಸಲು ಹಣ ಬೇಕು ಎನ್ನುವ ಕಾರಣಕ್ಕೆ ಅವಳು ಅಜಿತ್‌ನನ್ನು ಮದುವೆ ಆಗುತ್ತಾಳೆ. ಅಜಿತ್ ಮನೆಯಲ್ಲಿ ಸಾಕಷ್ಟು ನೋವು, ಅವಮಾನ ಅನುಭವಿಸುವ ಅವಳು ತನ್ನ ಸ್ವಂತ ಗಂಡನ ಮನೆ, ಮನೆಯವರು ಎಂದು ಪ್ರೀತಿಸುತ್ತಾಳೆ. ಈಗ ಅಜಿತ್‌ಗೆ ಭೂಮಿ ಮೇಲೆ ಲವ್ ಆಗಿದೆ. ಇವರಿಬ್ಬರು ಒಂದಾಗ್ತಾರಾ ಎನ್ನೋದು ಈ ಸೀರಿಯಲ್ ಕಥೆ.
ಇದು ಸರಳ ಕಥೆಯಾದರೂ ಕೂಡ ಅಜಿತ್ ಹಾಗೂ ಭೂಮಿ ಕಾಂಬಿನೇಶನ್ ವೀಕ್ಷಕರ ಮನಸ್ಸನ್ನು ಗೆಲ್ಲುವುದು. ನನಗೂ ಕೂಡ ಇದೇ ಥರ ಗಂಡ, ಹೆಂಡತಿ ಇರಬೇಕು ಇರಬೇಕು ಎನಿಸುವ ಪಾತ್ರವಾಗಿದೆ. ಅಜಿತ್, ಭೂಮಿ ಡೈಲಾಗ್‌ಗಳು, ಜಗಳಗಳು, ಪ್ರೀತಿ, ಮುದ್ದಾಟ ಎಲ್ಲವೂ ವೀಕ್ಷಕರಿಗೆ ಇಷ್ಟ ಆಗುತ್ತವೆ.