Photos: ಲಕ್ಷ್ಮೀ ನಿವಾಸ ಖ್ಯಾತಿಯ 17 ಧಾರಾವಾಹಿಗಳ ನಟ ಮಧು ಹೆಗಡೆ ರಿಯಲ್‌ ಮದುವೆ ಝಲಕ್‌ ಇದು!

Published : Apr 29, 2025, 04:08 PM ISTUpdated : Apr 29, 2025, 04:55 PM IST

ಲಕ್ಷ್ಮೀ ನಿವಾಸ ಸೇರಿದಂತೆ ಹದಿನೇಳಕ್ಕೂ ಅಧಿಕ ಧಾರಾವಾಹಿಗಳಲ್ಲಿ ನಟಿಸಿರುವ ಮಧು ಹೆಗಡೆ ರಿಯಲ್‌ ಮದುವೆ ಫೋಟೋಗಳಿವು. 

PREV
110
Photos: ಲಕ್ಷ್ಮೀ ನಿವಾಸ ಖ್ಯಾತಿಯ 17 ಧಾರಾವಾಹಿಗಳ ನಟ ಮಧು ಹೆಗಡೆ ರಿಯಲ್‌ ಮದುವೆ ಝಲಕ್‌ ಇದು!

'ಲಕ್ಷ್ಮೀ  ನಿವಾಸ' ಧಾರಾವಾಹಿ ಖ್ಯಾತಿಯ, ಸಂತೋಷ್‌ ಪಾತ್ರಧಾರಿ ನಟ ಮಧು ಹೆಗಡೆ ಅವರು ರಿಯಲ್‌ ಮದುವೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

210

ಕನ್ನಡ ನಟ ಮಧು ಹೆಗಡೆ ಅವರು ನಮ್ರತಾ ಶರ್ಮಾ ಎಂಬುವವರನ್ನು ಮದುವೆಯಾಗಿದ್ದಾರೆ. ಇವರು ಮದುವೆ ಆಗಿ ಆರು ವರ್ಷಗಳು ಕಳೆದಿವೆ. 

310

ಮಧು ಹೆಗಡೆ ಅವರು ಮೂಲತಃ ಹೊಸನಗರದವರು, ಇನ್ನು ನಮ್ರತಾ ಶರ್ಮಾ ಅವರು ಸಕಲೇಶಪುರದವರು. ಇಬ್ಬರ ಊರು ಬೇರೆ ಬೇರೆಯಾದರೂ ಮನಸ್ಸು ಒಂದಾಗಿದೆ. 

410

ಕನ್ನಡ ನಟ ಮಧು ಹೆಗಡೆ ಅವರು ಕನ್ನಡ ಕಿರುತೆರೆಯಲ್ಲಿ ಹದಿನೇಳಕ್ಕೂ ಹೆಚ್ಚಿನ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಸಾಕಷ್ಟು ವರ್ಷಗಳಿಂದ ಅವರು ಚಿತ್ರರಂಗದಲ್ಲಿದ್ದಾರೆ. 

510

ನಮ್ರತಾ ಶರ್ಮಾ ಅವರು ಉದ್ಯಮಿಯೂ ಹೌದು, ಅಷ್ಟೇ ಅಲ್ಲದೆ ನಿರೂಪಕಿ ಕೂಡ ಹೌದು. ಇನ್ನು ಕನ್ನಡಪ್ರಭ ಪತ್ರಿಕೆಯಲ್ಲಿ ಇಂಟರ್ನಿ ಕೂಡ ಆಗಿದ್ದರಂತೆ. 

610

ಮಧು ಹೆಗಡೆ ಹಾಗೂ ನಮ್ರತಾ ಶರ್ಮಾ ಅವರು ಸಮಯ ಸಿಕ್ಕಾಗ ಟ್ರಾವೆಲ್‌ ಮಾಡುತ್ತಿರುತ್ತಾರೆ, ಸೋಶಿಯಲ್‌ ಮೀಡಿಯಾದಲ್ಲಿ ಫೋಟೋಗಳನ್ನು ಶೇರ್‌ ಮಾಡುತ್ತಿರುತ್ತಾರೆ. 

710

ಮಧು ಹೆಗಡೆ ಅವರು ʼಲಕ್ಷ್ಮೀ ನಿವಾಸʼ ಧಾರಾವಾಹಿಯಲ್ಲಿ ಸಂತೋಷ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂತೋಷ್‌ ಸಿಕ್ಕಾಪಟ್ಟೆ ಜಿಪುಣ. 

810

ಇವರಿಬ್ಬರದ್ದು ಲವ್‌ ಅಥವಾ ಅರೇಂಜ್‌ ಮ್ಯಾರೇಜ್ ಎಂಬ ಬಗ್ಗೆ ಮಾಹಿತಿ ಇಲ್ಲ. ಈ ಜೋಡಿ ಈ ವಿಷಯದ ಬಗ್ಗೆ ಮಾಹಿತಿ ಕೊಡಬೇಕಿದೆ. ಅಂದಹಾಗೆ ಕಿರುತೆರೆಯ ಮುದ್ದಾದ ಜೋಡಿಯಿದು. 

910

ಲಕ್ಷ್ಮೀ ನಿವಾಸ ಧಾರಾವಾಹಿ ನೋಡಿ ಎಲ್ಲರೂ ಸಂತೋಷ್‌ ಪಾತ್ರಕ್ಕೆ ಸಿಕ್ಕಾಪಟ್ಟೆ ಬೈಯ್ಯುತ್ತಾರಂತೆ. ಜನ ಬೈದರೆ ನನ್ನ ಪಾತ್ರ ರೀಚ್‌ ಆಗಿದೆ ಎಂದರ್ಥ ಎನ್ನುತ್ತಾರೆ ಮಧು ಹೆಗಡೆ. 

1010

ಮಧು ಹೆಗಡೆ, ನಮ್ರತಾ ಶರ್ಮಾ ಅವರು ನಟಿ, ನಿರ್ಮಾಪಕಿ ಶ್ರುತಿ ನಾಯ್ಡು ಅವರ ಜೊತೆಗೆ ತೆಗೆದ ಫೋಟೋ ಇದು. ಚಿತ್ರರಂಗದವರ ಜೊತೆ ಮಧು ಒಳ್ಳೆಯ ಸಂಬಂಧ ಹೊಂದಿದ್ದಾರೆ.

Read more Photos on
click me!

Recommended Stories