ಗುಂಡಮ್ಮನ ಕೈಗೆ ತಗ್ಲಾಕೊಂಡ ಪರಶು; ಕಾಲ್ಕೆಳಗೆ ಹಾಕೊಂಡು ತುಳಿದು ಬಿಡು ಎಂದ ಫ್ಯಾನ್ಸ್!

Published : Apr 29, 2025, 12:11 PM ISTUpdated : Apr 29, 2025, 12:16 PM IST

Kannada Serial Annayya Promo: ಅಣ್ಣಯ್ಯ ಧಾರಾವಾಹಿಯಲ್ಲಿ ಗೋಡಂಬಿ ಮೇಲೆ ಪರಶು ಹಲ್ಲೆ ನಡೆಸಿದ್ದಾನೆ. ಗುಂಡಮ್ಮ ತನ್ನ ಗಂಡನನ್ನು ರಕ್ಷಿಸಿದ್ದಾಳೆ. ಪ್ರೇಕ್ಷಕರು ಗುಂಡಮ್ಮನ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

PREV
16
ಗುಂಡಮ್ಮನ ಕೈಗೆ ತಗ್ಲಾಕೊಂಡ ಪರಶು; ಕಾಲ್ಕೆಳಗೆ ಹಾಕೊಂಡು ತುಳಿದು ಬಿಡು ಎಂದ ಫ್ಯಾನ್ಸ್!

ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಅಣ್ಣಯ್ಯ ಸೀರಿಯಲ್ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಪಾರು ಸೋದರ ಪರಶು ಅಸಲಿ ಮುಖ ಗೋಡಂಬಿಗೆ ಗೊತ್ತಾಗಿದೆ. ಆದ್ರೆ ಪರಶು ನಡೆಸಿದ ಹಲ್ಲೆಯಿಂದಾಗಿ ಗೋಡಂಬಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಪ್ರಜ್ಞೆ ಬಂದಾಗ ಪರಶು ಕಡೆ ಗೋಡಂಬಿ ಬೆರಳು ತೋರಿಸಿದ್ರೂ ಅದು ಯಾರಿಗೂ ಅರ್ಥವಾಗಿಲ್ಲ.

26

ಗೋಡಂಬಿಯನ್ನು ಶಿವು ಮತ್ತು ಪಾರು ಆಸ್ಪತ್ರೆಗೆ ದಾಖಲಿಸಲು ತೆರಳುವಾಗಲೂ ಪರಶು ಮತ್ತು ವೀರಭದ್ರ ತಡೆಯಲು ಪ್ರಯತ್ನಿಸಿದ್ರು. ಆದರೂ ಪಾರು-ಶಿವು ಸಾಹಸದಿಂದಾಗಿ ಸರಿಯಾದ ಸಮಯಕ್ಕೆ ಗೋಡಂಬಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. 

36

ಗೋಡಂಬಿ ಗುಣಮುಖನಾದ್ರೆ ತಮಗೆ ಉಳಿಗಾಲವಿಲ್ಲ ಎಂಬ ಸತ್ಯ ಅರಿತ ವೀರಭದ್ರ ಮತ್ತು ಪರಶು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ರಾತ್ರಿ ಆಸ್ಪತ್ರೆಯಲ್ಲಿ ಗೋಡಂಬಿಯನ್ನು ನೋಡಿಕೊಳ್ಳಲು ತಾನು ಉಳಿದುಕೊಳ್ಳೋದಾಗಿ ಪರಶು ಹೇಳುತ್ತಾನೆ. ಆದ್ರೆ ಇದಕ್ಕೆ ಪಾರು ಒಪ್ಪಿಗೆ ನೀಡಲ್ಲ. ಹಾಗಾಗಿ ತಂದೆ, ಸೋದರ ಮತ್ತು ಛತ್ರಿಯನ್ನು ಆಸ್ಪತ್ರೆಯಿಂದ ಹೊರಗೆ ಕಳುಹಿಸಿದ್ದಾಳೆ. 

46

ಆಸ್ಪತ್ರೆಯಿಂದ ಹೊರ ಬಂದಿರುವ ಮೂವರು ಗೋಡಂಬಿಯನ್ನು ಕೊಲ್ಲುವ ಪ್ಲಾನ್ ಮಾಡಿದ್ದಾರೆ. ಡಾಕ್ಟರ್ ವೇಷದಲ್ಲಿ ಗೋಡಂಬಿಯನ್ನು ಕೊಲ್ಲಲು ಪರಶು ಬಂದಾಗ ವಾರ್ಡ್‌ನೊಳಗೆ ಜಿಮ್ ಸೀನ ಇರುತ್ತಾನೆ. ಯಾರ್ ನೀವು ಎಂದು ಕೇಳುತ್ತಿದ್ದಂತೆ ಆತನ ಮೇಲೆಯೂ ಹಲ್ಲೆ ನಡೆಸಲು ಮುಂದಾಗುತ್ತಾನೆ. 

56

ಪತಿಯ ಪ್ರಾಣ ಉಳಿಸಿದ ಗುಂಡಮ್ಮ 

ಅಷ್ಟರಲ್ಲಿಯೇ ಹಿಂದಿನಿಂದ ಬಂದ ಗುಂಡಮ್ಮ ಗಂಡನನ್ನ ರಕ್ಷಿಸಿದ್ದಾಳೆ. ಮುಂದೆ ಪರಶು ಪರಿಸ್ಥಿತಿ ಏನಾಗಬಹುದು ಎಂದು ಕಲ್ಪನೆ ಮಾಡಿಕೊಂಡು ಪ್ರೇಕ್ಷಕರ ನಗುತ್ತಿದ್ದಾರೆ. ಬಿಡುಗಡೆಯಾಗಿರುವ ಪ್ರೋಮೋಗೆ ತಮಾಷೆಯಾಗಿ ವೀಕ್ಷಕರು ಕಮೆಂಟ್ ಮಾಡಿದ್ದಾರೆ.
 

66

ಗುಂಡಮ್ಮ ಸೂಪರ್ ಎಂದ ವೀಕ್ಷಕರು

ಇಂದು ಬಿಡುಗಡೆಯಾಗಿರುವ ವೀಕ್ಷಕರ ಕಮೆಂಟ್ ಹೀಗಿದೆ. ಗುಂಡಮ್ಮ ಕಾಲ ಕೆಳಗೆ ಹಾಕೊಂಡು ಪಚಕ್ ಪಚಕ್ ಅಂತ ತುಳುದು ಬಿಡು. ಸೀನಾ , ಗುಂಡಮ್ಮನಿಗೋಸ್ಕರ ಈ ಧಾರಾವಾಹಿ ನೋಡುತ್ತೇನೆ. ನಮ್ಮ ಗುಂಡಮ್ಮ ಸುಪರ್ ಈ ಧಾರಾವಾಹಿ ಹೈ.ಲೈಟ್ ಅಂದರೆ ನಮ್ ಸೀನ ಗುಂಡಮ್ಮ ಎಂದು ಕಮೆಂಟ್ ಮಾಡಿದ್ದಾರೆ.

Read more Photos on
click me!

Recommended Stories