Actress Jyothi Rai: 'ನಾನು ಸ್ಮೋಕ್‌ ಮಾಡಲ್ಲ ರೀ' ಎಂದು ಧೂಮಪಾನ ಮಾಡಿದ ಕನ್ನಡತಿ ಜ್ಯೋತಿ ರೈ!

Published : Aug 03, 2025, 02:21 PM IST

Kannada Tv Actress Jyothi Rai Photos: ಯಾವಾಗಲೂ ಬೋಲ್ಡ್‌ ಫೋಟೋ ಹಂಚಿಕೊಳ್ಳೋ ನಟಿ ಜ್ಯೋತಿ ರೈ ಅವರು ಈ ಬಾರಿ ಸ್ಮೋಕ್‌ ಮಾಡುವ ವಿಡಿಯೋ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ತಾನು ಸ್ಮೋಕ್‌ ಮಾಡೋದಿಲ್ಲ ಎಂದು ಕೂಡ ಹೇಳಿದ್ದಾರೆ. 

PREV
15

ಸಣ್ಣಗಾಗಿ, ಬೋಲ್ಡ್‌ ಫೋಟೋ, ವಿಡಿಯೋಗಳ ಮೂಲಕ ಸದ್ದು ಮಾಡ್ತಿರೋ ನಟಿ ಜ್ಯೋತಿ ರೈ ಅವರು ‘ಕಿಲ್ಲರ್’‌ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ರೆಡಿಯಾಗ್ತಿರೋ ಈ ಸಿನಿಮಾದಲ್ಲಿ ಆಕ್ಷನ್‌ ಹಾಗೂ ಹಸಿಬಿಸಿ ದೃಶ್ಯಗಳು ಇದ್ದಂತಿದೆ.

25

ಕೆಲ ದಿನಗಳ ಹಿಂದೆ ಕಿಲ್ಲರ್‌ ಸಿನಿಮಾದ ರೊಮ್ಯಾಂಟಿಕ್‌ ದೃಶ್ಯದ ಝಲಕ್‌ ಹಂಚಿಕೊಂಡಿದ್ದ ಜ್ಯೋತಿ ರೈ ಅವರೀಗ ಸ್ಮೋಕಿಂಗ್‌ ಮಾಡುವ ವಿಡಿಯೋ ಹಂಚಿಕೊಂಡಿದ್ದಾರೆ.

35

ಜ್ಯೋತಿ ರೈ ಅವರು “ನಾನು ಸ್ಮೋಕ್‌ ಮಾಡೋದಿಲ್ಲ, ಸ್ಮೋಕ್‌ ಮಾಡೋರನ್ನು ಜಡ್ಜ್‌ ಕೂಡ ಮಾಡೋದಿಲ್ಲ. ಅವರ ಲೈಫ್‌, ಅವರಿಷ್ಟ” ಎಂದು ಹೇಳಿದ್ದಾರೆ. ಇನ್ನೋರ್ವ ನಟ ಸಾಯಿ ಕಿರಣ್‌ ಅವರು, “ನೀವು ಸ್ಮೋಕ್‌ ಮಾಡೋದು ಕಲಿತಿಲ್ಲ” ಎಂದಿದ್ದಾರೆ. ಅದಕ್ಕೆ ಜ್ಯೋತಿ ನಕ್ಕು ಸುಮ್ಮನಾಗಿದ್ದಾರೆ.

45

ಜ್ಯೋತಿ ರೈ ಅವರು ಸ್ಮೋಕ್‌ ಮಾಡುತ್ತಿರುವ ವಿಡಿಯೋ ಮಾಡಿ, ಸ್ಮೋಕ್‌ ಮಾಡೋದು ನಿಮ್ಮಿಷ್ಟ ಎಂದು ಹೇಳಿದ್ದಕ್ಕೆ ಅನೇಕರು ನೆಗೆಟಿವ್‌ ಆಗಿಯೂ ಪ್ರತಿಕ್ರಿಯೆ ನೀಡಿದ್ದಾರೆ. ಸ್ಮೋಕ್‌ ಮಾಡೋದನ್ನು ನೀವು ಉತ್ತೇಜಿಸುತ್ತಿದ್ದೀರಾ? ನಿಮಗೆಲ್ಲ ಏನಾಗಿದೆ ಎಂಬ ಮಾತು ಕೂಡ ಬಂದಿದೆ.

55

ಅನೇಕ ವರ್ಷಗಳಿಂದ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಜ್ಯೋತಿ ರೈ ಅವರೀಗ ಸಿನಿಮಾಗಳಲ್ಲಿ ನಾಯಕಿಯಾಗಿ ಮುಂದುವರೆಯುವ ಆಸೆ ಇದೆ ಎಂದಿದ್ದಾರೆ. ಹೀಗಾಗಿ ಅವರೀಗ ಬೋಲ್ಡ್‌ ಪಾತ್ರಗಳಿಗೆ ಜೀವ ತುಂಬಲಿದ್ದಾರಂತೆ.

Read more Photos on
click me!

Recommended Stories