ಅವಳಿ ಮಕ್ಕಳಿಗಾಗಿ Lakshmi Nivasa ನಟಿ ಟ್ವಿನ್​ ಬಾಳೆಹಣ್ಣು ತಿಂದ್ರಂತೆ! ಮಾನಸಾ ಮನೋಹರ ಏನ್​ ಹೇಳಿದ್ರು ಕೇಳಿ

Published : Mar 09, 2026, 08:56 PM IST

'ಲಕ್ಷ್ಮೀ ನಿವಾಸ' ಸೀರಿಯಲ್‌ನಲ್ಲಿ ನೆಗೆಟಿವ್ ಪಾತ್ರದಲ್ಲಿ ನಟಿಸುತ್ತಿರುವ ಮಾನಸಾ ಮನೋಹರ್ ಗರ್ಭಿಣಿಯಾಗಿದ್ದು, ತಮಗೆ ಅವಳಿ ಮಕ್ಕಳಾಗಬೇಕೆಂಬ ಆಸೆಯಿಂದ ಅವಳಿ ಬಾಳೆಹಣ್ಣುಗಳನ್ನು ತಿಂದಿದ್ದಾಗಿ ಹೇಳಿಕೊಂಡಿದ್ದಾರೆ. 2024ರಲ್ಲಿ ಉದ್ಯಮಿ ಪ್ರೀತಂ ಚಂದ್ರ ಅವರನ್ನು ಎರಡನೇ ಮದುವೆಯಾಗಿದ್ದಾರೆ.

PREV
16
'ಲಕ್ಷ್ಮೀ ನಿವಾಸ' ಸೀರಿಯಲ್‌ ನಟಿ

'ಲಕ್ಷ್ಮೀ ನಿವಾಸ' ಸೀರಿಯಲ್‌ನ ನಟಿ ಮಾನಸಾ ಮನೋಹರ್ ಗರ್ಭಿಣಿಯಾಗಿದ್ದು, ಬರುವ ಮೇ ನಲ್ಲಿ ಅಮ್ಮ ಆಗಲಿದ್ದಾರೆ. ಕಳೆದ ತಿಂಗಳು ಅವರು ತಾವು ಗರ್ಭಿಣಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದರು. ವಿಶೇಷವೆಂದರೆ, ಅವರ ಅತ್ತಿಗೆಯೂ ಗರ್ಭಿಣಿಯಾಗಿದ್ದು, ಇಬ್ಬರೂ ಕೆಲವೇ ವಾರಗಳ ಅಂತರದಲ್ಲಿ ಮಗುವನ್ನು ಸ್ವಾಗತಿಸಲಿದ್ದಾರೆ.

26
ನೆಗೆಟಿವ್​ ರೋಲ್​

'ಲಕ್ಷ್ಮೀ ನಿವಾಸ' ಸೀರಿಯಲ್​ನಲ್ಲಿ ಸಿದ್ಧೇ ಗೌಡರ ಅತ್ತಿಗೆ ನೀಲೂ ಪಾತ್ರದಲ್ಲಿ ಅರ್ಥಾತ್​ ನೆಗೆಟಿವ್ ಶೇಡ್​ನಲ್ಲಿ ಮಿಂಚುತ್ತಿರೋ ನಟಿ ಮಾನಸಾ ಮನೋಹರ (Manasa Manohar). ಅವರು ಈಗ ಮಗುವಿನ ನಿರೀಕ್ಷೆಯಲ್ಲಿದ್ದು, ಇದರ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಹಾಕಿದ್ದಾರೆ.

36
2024ರಲ್ಲಿ ಮದುವೆ

ಅಂದಹಾಗೆ, 2024ರಲ್ಲಿ ಮಾನಸ ಮನೋಹರ್ ಬ್ಯುಸಿನೆಸ್ ಮ್ಯಾನ್ ಆಗಿರುವ ಪ್ರೀತಂ ಚಂದ್ರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದು ನಟಿಯ ಎರಡನೆ ಮದುವೆಯಾಗಿದೆ. ಇತ್ತೀಚೆಗಷ್ಟೇ ನಟಿ ತಮ್ಮ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ್ದರು.

46
ಟ್ವಿನ್​ ಬಾಳೆಹಣ್ಣು

ಗರ್ಭಿಣಿಯಾಗಿರುವ ಮಾನಸಾ ಅವರಿಗೆ ಅವಳಿ ಮಕ್ಕಳ ಮೇಲೆ ತುಂಬಾ ಪ್ರೀತಿಯಂತೆ. ತಮಗೆ ಅವಳಿ-ಜವಳಿ ಮಕ್ಕಳು ಹುಟ್ಟಬೇಕು ಎನ್ನುವುದು ಅವರ ಆಸೆಯಾಗಿತ್ತಂತೆ. ಅದಕ್ಕಾಗಿಯೇ ನಾನು ಅವಳಿ ಬಾಳೆಹಣ್ಣುಗಳನ್ನು ತಿನ್ನುತ್ತಿದ್ದೆ ಎಂದಿದ್ದಾರೆ. ಎರಡು ಬಾಳೆಹಣ್ಣುಗಳು ಕೂಡಿಕೊಂಡಿದ್ದರೆ ಅದನ್ನು ತಿಂದರೆ ಅವಳಿ ಮಕ್ಕಳು ಹುಟ್ಟುತ್ತಾರೆ ಎನ್ನುವುದು ಜನಜನಿತ ಮಾತಾಗಿದೆ. ಅದೆಷ್ಟೋ ವರ್ಷಗಳಿಂದ ಈ ಮಾತು ಪ್ರಚಲಿತದಲ್ಲಿದೆ. ಅದೇ ರೀತಿ ಮಾನಸಾ ಅವರೂ ಕೇಳಿದ್ದರಿಂದ ಅದನ್ನೇ ಹೆಚ್ಚಾಗಿ ತಿನ್ನುತ್ತಿದ್ದಂತೆ.

56
ಮುಂದಿನ ಸಲ ನೋಡೋಣ

ಆದರೆ ಹಾಗಾಗಲಿಲ್ಲ ಎಂದು ನಕ್ಕಿದ್ದಾರೆ ನಟಿ. ಅವಳಿ ಮಕ್ಕಳಾದರೆ ಈಗಲೇ ಗೊತ್ತಾಗುತ್ತದೆ. ಆದರೆ ತಮಗೆ ಒಂದೇ ಮಗು ಹುಟ್ಟುವುದು. ಮುಂದಿನ ಸಲ ನೋಡೋಣ ಎಂದಿದ್ದಾರೆ ಮಾನಸಾ.

66
ಮೊದಲ ಮದುವೆ ಕುರಿತು

ಕೆಲ ದಿನಗಳ ಹಿಂದೆ ನಟಿ, ಮೊದಲ ಮದುವೆಯ ಬಗ್ಗೆ ಮಾತನಾಡಿದ್ದರು. ಏನೂ ಸತ್ವ ಉಳಿದುಕೊಳ್ಳದಿದ್ದಾಗ, ಯಾರೂ ಏನೂ ಎಂಜಾಯ್‌ ಮಾಡುತ್ತಿರಲಿಲ್ಲ ಎಂದಾಗ ಆ ಮದುವೆ ಮುರಿದುಕೊಳ್ಳುತ್ತಿರುತ್ತದೆ. ಫಿಸಿಕಲೀ, ಮೆಂಟಲೀ, ಎಮೋಶನಲಿ ಆಗಿರಬಹುದು. ಇನ್ನೊಬ್ಬ ವ್ಯಕ್ತಿಯನ್ನು ಮದುವೆ ಆಗುವಾಗ ಹೆಣ್ಣು ಮಕ್ಕಳಿಗೆ ಏನೇನೋ ಯೋಚನೆ ಇರುತ್ತದೆ. ನನ್ನ ಅದೃಷ್ಟವೋ, ಪ್ರಾರ್ಥನೆಯೋ ಏನೋ ನನ್ನ, ಪ್ರೀತಂ ಯೋಚನೆಗಳು 99% ಮ್ಯಾಚ್‌ ಆಗುತ್ತವೆ. ಆಗ ಭಯ ಇಲ್ಲದೆ, ಆತ್ಮವಿಶ್ವಾಸ ಬರುತ್ತದೆ ಎಂದು ಮಾನಸಾ ಮನೋಹರ್‌ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories