‘ಅಕ್ಕ’ ಸೀರಿಯಲ್ ನಂತರ ಬರೋಬ್ಬರಿ 19ವರ್ಷಗಳ ಬಳಿಕ ಜೀ ಕನ್ನಡಕ್ಕೆ ಸುಚಿತ್ರಾ ಕಂ ಬ್ಯಾಕ್

Published : Mar 09, 2026, 05:15 PM IST

ಕನ್ನಡದಲ್ಲಿ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟ ಧಾರಾವಾಹಿ ಅಂದ್ರೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಮಾಂಗಲ್ಯ. ಈ ಧಾರಾವಾಹಿ ನಟಿ ಸುಚಿತ್ರಾ ಇದೀಗ 19 ವರ್ಷದ ಬಳಿಕ ‘ಕೃಷ್ಣ ರುಕ್ಕು’ ಧಾರಾವಾಹಿಯ ಮೂಲಕ ಮತ್ತೆ ಜೀ ಕನ್ನಡಕ್ಕೆ ಕಂ ಬ್ಯಾಕ್ ಮಾಡುತ್ತಿದ್ದಾರೆ. 

PREV
16
ನಟಿ ಸುಚಿತ್ರಾ

ಕನ್ನಡ ಕಿರುತೆರೆಯಲ್ಲಿ ಒಂದು ಕಾಲದಲಿ ಧೂಳೆಬ್ಬಿಸಿದ್ದ ನಟಿ ಸುಚಿತ್ರಾ. ಅಕ್ಕ, ಮಾಂಗಲ್ಯ ಮೊದಲಾದ ಧಾರಾವಾಹಿಗಳಲ್ಲಿ ನಟಿಸಿದ ನಟಿ ಇದೀಗ ಬರೋಬ್ಬರಿ 19 ವರ್ಷಗಳ ಬಳಿಕ ಜೀ ಕನ್ನಡಕ್ಕೆ ಮತ್ತೆ ಕಂ ಬ್ಯಾಕ್ ಮಾಡುತ್ತಿದ್ದಾರೆ. ಹೊಸದಾಗಿ ಶುರುವಾಗಲಿರುವ ‘ಕೃಷ್ಣ ರುಕ್ಕು’ ಧಾರಾವಾಹಿಯಲ್ಲಿ ಸುಚಿತ್ರಾ ನಟಿಸುತ್ತಿದ್ದಾರೆ.

26
ಮಾಂಗಲ್ಯ ಧಾರಾವಾಹಿ ನಟಿ

ಹಲವು ವರ್ಷಗಳ ಹಿಂದೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಮಾಂಗಲ್ಯ ಸೀರಿಯಲ್ ನೆನಪಿದ್ಯಾ? ಆ ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿದ್ದ ನಟಿ ಸುಚಿತ್ರಾ. ಸುಮಾರು 7-8 ವರ್ಷಗಳವರೆಗೆ ಪ್ರಸಾರವಾಗುತ್ತಿದ್ದಂತಹ ಧಾರಾವಾಹಿಯಲ್ಲಿ ಇವರ ನಟನೆಯನ್ನು ಜನ ಇಷ್ಟಪಟ್ಟಿದ್ದರು.

36
ಸುಚಿತ್ರಾ ನಟಿಸಿದ ಧಾರಾವಾಹಿಗಳು

ಸುಚಿತ್ರಾ ಅವರು ಕನ್ನಡಿ, ಅಕ್ಕ, ಮಾಂಗಲ್ಯ, ಕಾವ್ಯಾಂಜಲಿ ಮತ್ತು ಈಶ್ವರಿ ಸೇರಿ ಹಲವಾರು ಕನ್ನಡ , ತಮಿಳು, ತೆಲುಗು ಸೀರಿಯಲ್ ಗಳಲ್ಲೂ ನಟಿಸಿದ್ದಾರೆ. ನನ್ನಲ್ , ಭಾಕ್ಯಲಕ್ಷ್ಮೀ , ಮಾಂಗಲ್ಯ ದೋಷಮ್ ಇವರು ನಟಿಸಿದ ಜನಪ್ರಿಯ ಇತರ ಭಾಷೆಯ ಧಾರವಾಹಿಗಳು. ಇದಲ್ಲದೇ ಟಿವಿ ಶೋ, ಕ್ವಿಜ್ ಶೋಗಳ ನಿರೂಪಣೆ ಕೂಡ ಮಾಡಿದ್ದಾರೆ. ಇತ್ತೀಚೆಗೆ ಉದಯ ಟಿವಿಯಲ್ಲಿ ಪ್ರಸಾರವಾದಂತಹ ‘ಸಿಂಧು ಭೈರವಿ’ ಧಾರಾವಾಹಿಯಲ್ಲಿ ಆರಂಭದ ಕೆಲವು ಎಪಿಸೋಡ್ ಗಳಲ್ಲೂ ನಟಿಸಿದ್ದರು.

46
19 ವರ್ಷದ ಬಳಿಕ ಜೀ ಕನ್ನಡಕ್ಕೆ ಕಂ ಬ್ಯಾಕ್

ಜೀ ಕನ್ನಡದ ಆರಂಭಿಕ ದಿನಗಳಲ್ಲಿ ಅಂದರೆ 2006-07 ರಲ್ಲಿ ಖ್ಯಾತ ಸಿನಿಮಾ ನಿರ್ದೇಶಕ ಶಿವಮಣಿ ನಿರ್ದೇಶನ ಮಾಡಿದ್ದ ‘ಅಕ್ಕ’ ಧಾರವಾಹಿಯಲ್ಲಿ ದ್ವಿಪಾತ್ರದಲ್ಲಿ ( ನಾಯಕಿ ಮತ್ತು ಖಳನಾಯಕಿಯಾಗಿ ಸುಚಿತ್ರ ಬಣ್ಣ ಹಚ್ಚಿದ್ದರು. ಇದೀಗ ಬರೋಬ್ಬರಿ 19 ವರ್ಷದ ಬಳಿಕ ಜೀ ಕನ್ನಡಕ್ಕೆ ಕಂ ಬ್ಯಾಕ್ ಮಾಡಿದ್ದರೆ.

56
ಕೃಷ್ಣ ರುಕ್ಕು ಧಾರಾವಾಹಿಯಲ್ಲಿ ನಟನೆ

ಇದೀಗ ಜೀ ಕನ್ನಡದಲ್ಲಿ ಹೊಸದಾಗಿ ಶುರುವಾಗಲಿರುವ ‘ಕೃಷ್ಣರುಕ್ಕು’ ಧಾರಾವಾಹಿಯಲ್ಲಿ ಸುಚಿತ್ರ ನಾಯಕನ ತಾಯಿಯಂತ ಅತ್ತೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆ ಮೂಲಕ ಹತ್ತೊಬ್ಬಂದು ವರ್ಷದ ನಂತ್ರ ಜೀ ಕನ್ನಡ ವಾಹಿನಿಯ ಧಾರಾವಾಹಿಯಲ್ಲಿ ಸುಚಿತ್ರ ನಟಿಸುತ್ತಿದ್ದಾರೆ.

66
ಯಾರೆಲ್ಲಾ ನಟಿಸುತ್ತಿದ್ದಾರೆ?

‘ಕೃಷ್ಣ ರುಕ್ಕು’ ಧಾರಾವಾಹಿಯಲ್ಲಿ ಮೌನ ಗುಡ್ಡೇಮನೆ ರುಕ್ಕು ಆಗಿ ನಟಿಸಿದರೆ, ಅಕ್ಷಯ್ ನಾಯಕ್ ಕೃಷ್ಣನ ಪಾತ್ರ ಮಾಡುತ್ತಿದ್ದಾರೆ. ಎಸ್ ನಾರಾಯಣ್ ನಾಯಕನ ತಂದೆಯ ಪಾತ್ರದಲ್ಲಿ ನಟಿಸಿದ್ರೆ. ಖ್ಯಾತ ನಟಿ ಸುಚಿತ್ರ, ನಾಯಕನ ಅತ್ತೆಯಾಗಿ ನಟಿಸುತ್ತಿದ್ದಾರೆ. ಗಾಯಕ ನವೀನ ಸಜ್ಜು ಕೂಡ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಧೃತಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲೀಪ್ ರಾಜ್ ಹಾಗೂ ಶ್ರೀ ವಿದ್ಯಾ ‘ಕೃಷ್ಣ ರುಕ್ಕು’ ಸೀರಿಯಲ್​ನ ನಿರ್ಮಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories