ರಾಜಕುಮಾರಿಯಂತೆ ಮಿಂಚಿದ ತನ್ವಿ ರಾವ್ ಅಂದಕ್ಕೆ ಮನಸೋತ ಲಕ್ಷ್ಮಿ ಬಾರಮ್ಮ ಕೀರ್ತಿಗೆ ಅಕ್ಕ ಅಂದ್ರು ಫ್ಯಾನ್ಸ್

Published : Mar 30, 2024, 05:38 PM IST

ಲಕ್ಷ್ಮೀ ಬಾರಮ್ಮ ಸೀರಿಯಲ್ ನ ಕೀರ್ತಿ ಪಾತ್ರದ ಮೂಲಕ ಜನಪ್ರಿಯತೆ ಪಡೆದಿರುವ ನಟಿ ತನ್ವಿ ರಾವ್ ಅವರು ಹೊಸ ಫೋಟೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಥೇಟ್ ರಾಣಿಯಂತೆ ಕಾಣಿಸ್ತಿದ್ದಾರೆ.   

PREV
17
ರಾಜಕುಮಾರಿಯಂತೆ ಮಿಂಚಿದ ತನ್ವಿ ರಾವ್ ಅಂದಕ್ಕೆ ಮನಸೋತ ಲಕ್ಷ್ಮಿ ಬಾರಮ್ಮ ಕೀರ್ತಿಗೆ ಅಕ್ಕ ಅಂದ್ರು ಫ್ಯಾನ್ಸ್

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ಲಕ್ಷ್ಮೀ ಬಾರಮ್ಮ. ಈ ಧಾರಾವಾಹಿಯ ಒಂದು ಪ್ರಮುಖ ಪಾತ್ರ ಕೀರ್ತಿಯದ್ದು. ವೈಷ್ಣವ್ ನನ್ನು ಹುಚ್ಚರಂತೆ ಪ್ರೀತಿಸುವ ಕೀರ್ತಿ ಪಾತ್ರದಲ್ಲಿ ಮಿಂಚುತ್ತಿರುವ ನಟಿ ತನ್ವಿ ರಾವ್ (Tanvi Rao). 

27

ಲಕ್ಷ್ಮೀ ಬಾರಮ್ಮ (Lakshmi Baramma) ಸೀರಿಯಲ್ ನ ನಾಯಕ -ನಾಯಕಿ ಪಾತ್ರಕ್ಕಿಂತ ಹೆಚ್ಚಾಗಿ ಜನರು ಇಷ್ಟಪಟ್ಟಿರೋ ಪಾತ್ರ ಕೀರ್ತಿಯದ್ದು. ಕಾರಣ ತನ್ವಿ ರಾವ್ ಅವರ ನಟನೆ. ಕಣ್ಣಲ್ಲೇ ಮಾತನಾಡೋ ಅಭಿನಯ ನಿಜಕ್ಕೂ ಅದ್ಭುತ. ವಿಲನ್ ಪಾತ್ರ ಜನರಿಗೆ ಅಷ್ಟೊಂದು ಇಷ್ಟವಾಗೋದಕ್ಕೆ ಕಾರಣವೇ ತನ್ವಿ ರಾವ್ ನಟನೆ. 

37

ಸೋಷಿಯಲ್ ಮೀಡಿಯಾದಲ್ಲಿ (social media) ಸಖತ್ ಆಕ್ಟೀವ್ ಆಗಿರುವ ತನ್ವಿ ರಾವ್ ಹೆಚ್ಚಾಗಿ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಈ ಬಾರಿ ತನ್ವಿ ಕೆಂಪು ಸೀರೆ,  ಸ್ಲೀವ್‌ಲೆಸ್ ಬಿಳಿ ಬ್ಲೌಸ್ ಧರಿಸಿ, ಮಹಾರಾಣಿಯಂತೆ ಸಿಂಗಾರಗೊಂಡಿದ್ದಾರೆ. ಅವರ ಅಂದಕ್ಕೆ ಅಭಿಮಾನಿಗಳು ಮನಸೋತಿದ್ದಾರೆ. 
 

47

ಹಿಂದಿನ ಕಾಲದ ರಾಣಿಯಂತೆ ಸೀರೆ, ಕುಪ್ಪಸ, ಕಿವಿಗೆ ದೊಡ್ಡದಾದ ಜುಮುಕಿ, ಹಣೆಮೇಲೆ ಮುಂದಾಲೆ, ಮೂಗಿನಲ್ಲಿ ಹರಳಿನ ನತ್ತು, ಕುತ್ತಿಗೆಯಲ್ಲಿ ಹೆವಿ ನೆಕ್ ಪೀಸ್ ಗಳು, ಬೆರಳಲ್ಲಿ ದೊಡ್ಡದಾಗ ಉಂಗುರ, ಕೈಯಲ್ಲಿ ಕಡಗದಂತಹ ಬಳೆ, ಬಾಜು ಬಂಧಿ, ಕೆಂಪು ಬಿಂದಿ, ಕೈಯಲ್ಲಿ ಕೆಂಪು ರಂಗು ಎಲ್ಲವೂ ಸೇರಿ ತನ್ವಿ ರಾವ್ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. 
 

57

ತನ್ವಿ ಫೋಟೋ ನೋಡಿದ ಅಭಿಮಾನಿಗಳು ನಿನ್ನ ಅಂದ ನೋಡಕ್ಕೆ ಎರಡು ಕಣ್ಣು ಸಾಲದು ಅಕ್ಕ ತುಂಬಾ ತುಂಬಾ ತುಂಬಾ  ಚೆನ್ನಾಗಿ ಕಾಣ್ತಾ ಇದ್ದೀರಿ ಅಕ್ಕ ಎಂದು ಕೆಲವರು ಹೇಳಿದ್ರೆ, ಮತ್ತೆ ಕೆಲವರು ಬ್ಯೂಟಿಫುಲ್ ಅಕ್ಕ, ಅದ್ಭುತ ಸೌಂದರ್ಯ ನಿಮ್ಮದು, ಮತ್ತೆ ಮತ್ತೆ ನೋಡುವಂತಹ ಬ್ಯೂಟಿ ನಿಮ್ಮದು ಎಂದು ಕಾಮೆಂಟ್ ಮಾಡಿದ್ದಾರೆ. 
 

67

ಇನ್ನು ಕರಿಯರ್ ಬಗ್ಗೆ ಹೇಳೋದಾದರೆ ಲಕ್ಷ್ಮೀ ಬಾರಮ್ಮ ಸೀರಿಯಲ್‌ಗೂ ಮೊದಲು ತನ್ವಿ  'ಆಕೃತಿ’, ‘ರಾಧೆ ಶ್ಯಾಮ’ ಸೀರಿಯಲ್‌ಗಳಲ್ಲಿ ಅಭಿನಯಿಸಿದ್ದರು. ‘ಜಮೀಲ’ ಎಂಬ ತಮಿಳು ಧಾರಾವಾಹಿಯಲ್ಲಿ ತನ್ವಿ ನಟಿಸಿದ್ದರು. ಈ ಸೀರಿಯಲ್ ನಲ್ಲಿ ಸಂಗೀತಗಾರ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
 

77

ಅಷ್ಟೇ ಅಲ್ಲ ಅದ್ಭುತ ನೃತ್ಯಗಾರ್ತಿಯಾಗಿರುವ ತನ್ವಿ, ಬಾಲ್ಯದಿಂದಲೇ ಭರತನಾಟ್ಯ ಅಭ್ಯಾಸ ಮಾಡಿಕೊಂಡು ಬಂದಿದ್ದಾರೆ, ಜೊತೆಗೆ ಇವರು ಥಿಯೇಟರ್ ಆರ್ಟಿಸ್ಟ್ ಕೂಡ ಹೌದು.  ಕನ್ನಡದಲ್ಲಿ ಇವರು 'ರಂಗ್‌ ಬಿ ರಂಗ್‌ ಎನ್ನುವ ಸಿನಿಮಾ ಮಾಡಿದ್ದಾರೆ, ಹಿಂದಿಯಲ್ಲಿ ಗುಲಾಬ್ ಗ್ಯಾಂಗ್, ಗುಲ್ಮೊಹರ್ ಎನ್ನುವ ಸಿನಿಮಾಗಳಲ್ಲಿ ನಟಿಸಿದ್ದಾರೆ. 

Read more Photos on
click me!

Recommended Stories