ಮೂರು ಹೊತ್ತು ಮಾಡೋಕೆ ಕೆಲಸನೇ ಇಲ್ಲ...ಬರೀ ಅಳೋದು ಅಂತಾರೆ: ರಜಿನಿ

First Published Mar 30, 2024, 4:40 PM IST

ಕಿರುತೆರೆಯಲ್ಲಿ ಮಿಂಚುತ್ತಿರುವ ರಜಿನಿ ಈಗ ಬೆಳ್ಳಿ ತೆರೆಯಲ್ಲೂ ಶೈನಿಂಗ್ ಸ್ಟಾರ್. ಆದರೆ ಸೀರಿಯಲ್‌ ಮತ್ತು ಸಿನಿಮಾಗೂ ಇರುವ ವ್ಯತ್ಯಾಸ ಏನು ಗೊತ್ತಾ? 
 

ಕನ್ನಡ ಕಿರುತೆರೆ, ಬೆಳ್ಳಿತೆರೆ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಮಿಂಚುತ್ತಿರುವನ ರಜಿನಿ ಸಿನಿಮಾ ಮತ್ತು ಸೀರಿಯಲ್‌ಗಳಿಗೆ ಇರುವ ವ್ಯತ್ಯಾಸ ಏನೆಂದು ಹಂಚಿಕೊಂಡಿದ್ದಾರೆ. 
 

'ಸೀರಿಯಲ್‌ನಲ್ಲಿ ನಾನು ಅಳುತ್ತಿದ್ದೆ ಎಂದು ನಿಜ ಜೀನದಲ್ಲೂ ನಾನು ಹಾಗೆ ಇರುವುದು ಎಂದು ಜನರು ಅಂದುಕೊಂಡಿದ್ದರು. ಅಳುತ್ತಲೇ ಇರುತ್ತಾಳೆ ಮೂರು ಹೊತ್ತು ಮಾಡೋಕೆ ಕೆಲಸನೇ ಇಲ್ಲ ಅನ್ನೋ ತರ ಜನರಿಗೆ ರೀಚ್ ಆಗಿತ್ತು

Latest Videos


ಸೀರಿಲ್‌ಗಳಿಂದ ಬ್ರೇಕ್ ತೆಗೆದುಕೊಂಡು ಮಜಾ ಟಾಕೀಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳಲು ಶುರು ಮಾಡಿದಾಗ ಜನರಿಗೆ ನನ್ನ ರಿಯಲ್ ವ್ಯಕ್ತಿತ್ವ ತಿಳಿಯಿತ್ತು .

ನನ್ನ ತಲೆಯಲ್ಲಿ ಸಿನಿಮಾ ಅನ್ನೋದು ಇರಲಿಲ್ಲ ಸೀರಿಯಲ್‌ನಲ್ಲಿ ಕಂಫರ್ಟ್ ಇತ್ತು ಆರಾಮ್‌ ಆಗಿ ತಿಂಗಳಲ್ಲಿ 20 ದಿನ ಶೂಟಿಂಗ್‌ ಇರುತ್ತೆ ಆಮೇಲೆ ನಾಲ್ಕೈದು ವರ್ಷ ನಡೆಯುತ್ತೆ ಹೀಗಾಗಿ ತಲೆ ಬಿಸಿ ಇಲ್ಲ . ಹೊಸ ಸಿನಿಮಾ ಬಂದಾಗ ಆ ತಂಡದ ಜೊತೆ ತುಂಬಾ ಕೆಲಸ ಇರುತ್ತೆ. 

ಅಮೃತಾವರ್ಷಿಣಿ ಧಾರಾವಾಹಿ ಸಮಯದಲ್ಲಿ ತುಂಬಾ ಒಳ್ಳೆ ಸಿನಿಮಾಗಳ ಆಫರ್‌ ಬಂದಿತ್ತು ಆದರೆ ಆ ಸಮಯಲ್ಲಿ ನಟಿಸಲು ಆಗಲಿಲ್ಲ. ಹಿಟ್ಲರ್ ಕಲ್ಯಾಣ ಧಾರಾವಾಹಿಯಿಂದ ಹೊರ ಬಂದು ಏನಾದರೂ ಪ್ರಯತ್ನ ಮಾಡೋಣ ಅಂತ.

ಯೋಚನೆ ಮಾಡಿದಾಗ ಅಂಬುಜಾ ಸಿನಿಮಾ ಆಫರ್ ಬಂತ್ತು. ಈಗ ಸೀರಿಯಲ್ ಮಾಡಿದರೆ ಒಂದು ಸಿನಿಮಾ ಮಾಡಿದ ಲೆಕ್ಕದ ಹಾಗೆ. ಸಿನಿಮಾನಾ ಸೀರಿಯಲಾ ಅಂತ ವ್ಯತ್ಯಾಸ ಹೇಳುವುದಕ್ಕೆ ಆಗಲ್ಲ.

ಸೆಟ್‌ ಅಷ್ಟು ಅದ್ಭುತವಾಗಿರುತ್ತದೆ ಹಾಗೆ ಸಿನಿಮಾ ರೀತಿ ಸೀರಿಯಲ್‌ನಲ್ಲಿ 70-80ಲಕ್ಷ ಹಣ ಖರ್ಚು ಮಾಡಿರುತ್ತಾರೆ. ಸಿನಿಮಾದಲ್ಲಿ ಇರುವಷ್ಟು ಕಾಂಪಿಟೇಷನ್‌ ಸೀರಿಯಲ್‌ ಲೋಕದಲ್ಲೂ ಇದೆ. 

ನಟಿಯರಿಗೆ ತುಂಬಾ ಕಾಂಪಿಟೇಷನ್‌ ಇರುತ್ತದೆ ಕೆಲವರು ಪ್ಯಾಷನ್‌ನಿಂದ ಬರುತ್ತಾರೆ ಆದರೆ ಕೆಲವರು ಇದ್ದನೇ ದುಡಿಮೆ ಮಾಡಿಕೊಳ್ಳಬೇಕು ಎಂದು ಬರುತ್ತಾರೆ. ಸೀರಿಯಲ್‌ನಲ್ಲಿ ನಾನು ಆಗ ಇದ್ದಿದ್ದಕ್ಕೂ ಈಗ ಇರುವುದಕ್ಕೂ ತುಂಬಾ ಬದಲಾಗಿರುವೆ. 

ಇಂಡಸ್ಟ್ರಿಗೆ ಕಾಲಿಟ್ಟಾಗ ನಾನು ಮೊದಲು ಕಲಿತ ಪಾಠವೇ ಸಮಯ ಪ್ರಜ್ಞೆ ಯಾರು ಬರಲಿ ಬಿಡಲಿ ನಾನು ಮೊದಲು ಸೆಟ್‌ಗೆ ಬಂದು ರೆಡಿಯಾಗಿ ನಿಂತಿರುವೆ ಎಂದಿದ್ದಾರೆ ರಜಿನಿ.

click me!