ಹುಣ್ಣಿಮೆ ಚಂದ್ರನಂತೆ ಹೊಳಿತಿದ್ದಾರೆ ಉಪಾಧ್ಯಕ್ಷ ಬೆಡಗಿ ಮಲೈಕಾ ವಸುಪಾಲ್

Published : Mar 30, 2024, 05:29 PM IST

ಹಿಟ್ಲರ್ ಕಲ್ಯಾಣ ಸೀರಿಯಲ್ ಮತ್ತು ಉಪಾಧ್ಯಕ್ಷ ಸಿನಿಮಾ ಮೂಲಕ ಕನ್ನಡಿಗರ ಮನೆಮಾತಾಗಿರುವ ನಟಿ ಮಲೈಕಾ ವಸುಪಾಲ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.   

PREV
17
ಹುಣ್ಣಿಮೆ ಚಂದ್ರನಂತೆ ಹೊಳಿತಿದ್ದಾರೆ ಉಪಾಧ್ಯಕ್ಷ ಬೆಡಗಿ ಮಲೈಕಾ ವಸುಪಾಲ್

ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಹಿಟ್ಲರ್ ಕಲ್ಯಾಣದ ಮೂಲಕ ಎಡವಟ್ಟು ರಾಣಿ ಲೀಲಾ ಆಗಿ ನಟನಾ ಜಗತ್ತಿಗೆ ಕಾಲಿಟ್ಟ ನಟಿ ಮಲೈಕಾ ವಸುಪಾಲ್ (Malaika Vasupal). ಮೊದಲ ಸೀರಿಯಲ್ ಮೂಲಕವೇ ಕನ್ನಡಿಗರ ಮನಗೆದ್ದಿದ್ದರು. 

27

ಲೀಲಾ ಆಗಿ ಜನಮನ ಗೆದ್ದ ಬೆಡಗಿ ಬಳಿಕ ಸಿನಿಮಾದಲ್ಲೂ ಮಿಂಚಿದರು, ಚಿಕ್ಕಣ್ಣ ನಟನೆಯ ಉಪಾಧ್ಯಕ್ಷ (Upadhyaksha)ಸಿನಿಮಾದಲ್ಲಿ ಚಿಕ್ಕಣ್ಣನಿಗೆ ನಾಯಕಿಯಾಗಿ ಮಲೈಕಾ ನಟಿಸಿ, ಅಲ್ಲೂ ಕೂಡ ಸೈ ಎನಿಸಿಕೊಂಡಿದ್ದರು. 
 

37

ಹಿಟ್ಲರ್ ಕಲ್ಯಾಣ (Hitler Kalyana) ಧಾರಾವಾಹಿಯಲ್ಲಿ ಲೀಲಾಗೆ ಸರಿಯಾಗಿ ನ್ಯಾಯ ಕೊಡಿಸದೇ ತರಾತುರಿಯಲ್ಲಿ ಸೀರಿಯಲ್ ಮುಗಿಸಿದ್ದಕ್ಕೆ ಸೀರಿಯಲ್ ನಿರ್ದೇಶಕರ ಮೇಲೆ ವೀಕ್ಷಕರು ಸಿಕ್ಕಾಪಟ್ಟೆ ಕೋಪಮಾಡಿಕೊಂಡಿದ್ದರು. ಮತ್ತೆ ಮಲೈಕಾ ಅವರನ್ನು ಕಿರುತೆರೆಯಲ್ಲಿ ನೋಡೋದಕ್ಕೆ ಬಯಸ್ತಿದ್ದಾರೆ ಜನ. 
 

47

ಸದ್ಯ ಸಿನಿಮಾ, ಸೀರಿಯಲ್ ನಿಂದ ಸ್ವಲ್ಪ ರಿಲ್ಯಾಕ್ಸ್ ಆಗಿರುವ ಮಲೈಕಾ ಸೋಶಿಯಲ್ ಮೀಡಿಯಾದಲ್ಲಿ (social media) ಆಕ್ಟೀವ್ ಆಗಿರುವ ಮೂಲಕ ತಮ್ಮ ಫೊಟೋ, ರೀಲ್ಸ್ ಶೇರ್ ಮಾಡುತ್ತಾ, ತಮ್ಮ ಅಭಿಮಾನಿಗಳ ಜೊತೆ ಕನೆಕ್ಟ್ ಆಗುತ್ತಿರುತ್ತಾರೆ. 
 

57

ಇದೀಗ ಮಲೈಕಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ (Instagram) ಕೆಲವೊಂದು ಫೋಟೋಗಳನ್ನು ಅಪ್ ಲೋಡ್ ಮಾಡಿದ್ದು, ಹಿಟ್ಲರ್ ಕಲ್ಯಾಣ ಬಳಿಕ ಮತ್ತೆ ಮಲೈಕಾ ಅವರನ್ನು ಸೀರೆಯಲ್ಲಿ ನೋಡಿ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದು, ನೆಚ್ಚಿನ ನಟಿಯನ್ನು ಹೊಗಳುತ್ತಾ ಕಾಮೆಂಟ್ ಮಾಡಿದ್ದಾರೆ. 
 

67

ತಿಳಿ ಹಸಿರು ಬಣ್ಣದ ನೆಟೆಡ್ ಸೀರೆಯಲ್ಲಿ ಮಿಲ್ಕಿ ಬ್ಯೂಟಿ ಮಲೈಕಾ ಮುದ್ದಾಗಿ ಕಾಣಿಸುತ್ತಿದ್ದು, ಜನರು ನಂದಿನಿ ಹಾಲಿಗಿಂತ ಹೊಳಪು,. ಆ ಚಂದ್ರನೇ ನಾಚುವ ಬಿಳುಪು ನಮ್ಮ ಮಲೈಕಾ, ಹುಣ್ಣಿಮೆ ಚಂದಿರನಂತೆ ಹೊಳೆಯುವ ಬೆಡಗಿ ನಮ್ಮ ಹುಡುಗಿ ಎಂದು ಕಾಮೆಂಟ್ ಮಾಡಿದ್ದಾರೆ. 
 

77

ಹಿಟ್ಲರ್ ಕಲ್ಯಾಣದ (Hitler Kalyana) ಲೀಲಾ ಪಾತ್ರದ ಮೂಲಕ ಹುಡುಗ ಕ್ರಶ್ ಆಗಿರುವ ಮಲೈಕಾರನ್ನು ಮತ್ತೆ ತೆರೆ ಮೇಲೆ ನೋಡಲು ಜನರು ಕಾಯ್ತಾ ಇದ್ದಾರೆ. ಸೀರಿಯಲ್ ಆಗಲಿ, ಸಿನಿಮಾ ಆಗಲಿ ಒಟ್ಟಲ್ಲಿ ಬೇಗನೆ ತೆರೆ ಮೇಲೆ ನಿಮ್ಮನ್ನು ನೋಡಬೇಕು ಎಂದು ವೀಕ್ಷಕರು ಹೇಳ್ತಿದ್ದಾರೆ. ಮಲೈಕಾ ಸದ್ಯದಲ್ಲಿ ನಾಗಭೂಷಣ್ ಜೊತೆ ವಿದ್ಯಾಪತಿ ಸಿನಿಮಾದಲ್ಲಿ ನಟಿಸಲಿದ್ದಾರೆ. 
 

Read more Photos on
click me!

Recommended Stories