ದೃಷ್ಟಿ ಹಾಕ್ಬೇಡಿ; ತಂದೆ-ಮಗಳ ಸುಂದರ ಬಾಂಡಿಂಗ್‌ ಸೆರೆ ಹಿಡಿದ ಲಕ್ಷ್ಮೀ ಬಾರಮ್ಮ ಧಾರಾವಾಹಿ ನಟಿ ನೇಹಾ ಗೌಡ!

Published : May 04, 2025, 05:28 PM ISTUpdated : May 05, 2025, 10:51 AM IST

‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ನಟಿ ನೇಹಾ ಗೌಡ ಅವರು ಈಗ ತಾಯ್ತನವನ್ನು ಸವಿಯುತ್ತಿದ್ದಾರೆ. ಈಗ ಅವರು ಸೀರಿಯಲ್‌ನಿಂದ ಬ್ರೇಕ್‌ ಪಡೆದು ಮಗಳ ಜೊತೆ ಸಮಯ ಕಳೆಯುತ್ತಿದ್ದಾರೆ.  

PREV
110
ದೃಷ್ಟಿ ಹಾಕ್ಬೇಡಿ; ತಂದೆ-ಮಗಳ ಸುಂದರ ಬಾಂಡಿಂಗ್‌ ಸೆರೆ ಹಿಡಿದ ಲಕ್ಷ್ಮೀ ಬಾರಮ್ಮ ಧಾರಾವಾಹಿ ನಟಿ ನೇಹಾ ಗೌಡ!

ಲಕ್ಷ್ಮೀ ಬಾರಮ್ಮ ಧಾರಾವಾಹಿ ನಟಿ ನೇಹಾ ಗೌಡ ಹಾಗೂ ಅಂತರಪಟ ಧಾರಾವಾಹಿ ನಟ ಚಂದನ್‌ ಗೌಡ ಅವರು ಮಗಳಿಗೆ ಶಾರದಾ ಎಂದು ನಾಮಕರಣ ಮಾಡಿದ್ದಾರೆ.
 

210

ಕನ್ನಡ ನಟಿ ನೇಹಾ ಗೌಡ ಅವರು ಪತಿ ಚಂದನ್, ಮಗಳ ಜೊತೆ ಔಟಿಂಗ್‌ ಮಾಡಿದ್ದಾರೆ. ಆ ವೇಳೆ ಸುಂದರ ಕ್ಷಣಗಳನ್ನು ಕಳೆದಿದ್ದಾರೆ.‌ ತುಂಬ ಸಮಯದ ನಂತರ ಈ ಜೋಡಿ ಹೊರಗಡೆ ಸುಂದರ ಸಮಯ ಕಳೆದಿದೆ.  
 

310

ತಂದೆ ಹಾಗೂ ಮಗಳು ಸುಂದರ ಸಮಯ ಕಳೆದಿದ್ದಾರೆ. ಈ ಬಾಂಧವ್ಯವನ್ನು ನೇಹಾ ಗೌಡ ಅವರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.
 

410

ನೇಹಾ ಗೌಡ ಅವರು ಕೆಲ ದಿನಗಳ ಹಿಂದೆ ಮಗಳಿಗೆ ನಾಮಕರಣ ಮಾಡಿದ್ದರು. ಆ ವೇಳೆ ಕಿರುತೆರೆಯ ಗಣ್ಯರು ಆಗಮಿಸಿ ಶುಭ ಹಾರೈಸಿದ್ದರು. 
 

510

ಅಂದಹಾಗೆ ʼಅಂತರಪಟʼ ಧಾರಾವಾಹಿಯಲ್ಲಿ ನಟ ಚಂದನ್‌ ಗೌಡ ಅವರು ಹೀರೋ ಆಗಿ ನಟಿಸಿದ್ದರು. ತನ್ವಿ ಬಾಲರಾಜ್‌ ನಾಯ್ಕ್‌ ಅವರು ಹೀರೋಯಿನ್‌ ಆಗಿದ್ದರು.  
 

610

ಉದ್ಯಮದಲ್ಲಿದ್ದ ಚಂದನ್‌ ಗೌಡ ಅವರು ಚಿತ್ರರಂಗಕ್ಕೆ ಕಾಲಿಟ್ಟು, ಇಲ್ಲಿಯೂ ಆಕ್ಟಿವ್‌ ಆಗಿದ್ದಾರೆ. ವಿದೇಶದಲ್ಲಿ ಅವರು ಉದ್ಯಮ ಮಾಡುತ್ತಿದ್ದಾರೆ. 

710

ಚಂದನ್‌ ಗೌಡ ಹಾಗೂ ನೇಹಾ ಗೌಡ ಅವರು ಪ್ರೀತಿಸಿ ಮದುವೆಯಾಗಿದ್ದಾರೆ. ಸ್ಕೂಲ್‌ನಲ್ಲಿದ್ದಾಗಲೇ ಈ ಜೋಡಿ ಪ್ರೀತಿಯಲ್ಲಿ ಬಿದ್ದಿತ್ತು.  

810

ನೇಹಾ ಗೌಡ, ಚಂದನ್‌ ಗೌಡ ಅವರು ʼರಾಜ ರಾಣಿʼ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದರು. ಅಲ್ಲಿಂದ ಚಂದನ್‌ ಅವರು ಡ್ಯಾನ್ಸ್‌ ಶೋನಲ್ಲಿ ಕೂಡ ಕಾಣಿಸಿಕೊಂಡಿದ್ದರು. 
 

910

ಚಂದನ್‌ ಗೌಡ ಹಾಗೂ ನೇಹಾ ಗೌಡ ಅವರು ಮತ್ತೆ ಯಾವಾಗ ತೆರೆ ಮೇಲೆ ಕಾಣಿಸ್ತಾರೆ ಎಂದು ಕಾದು ನೋಡಬೇಕಿದೆ. ಇನ್ನು ಈಗ ಅವರ ಸಂಪೂರ್ಣ ಗಮನ ಮಗಳ ಮೇಲಿದೆ. 

1010

ಇಡೀ ಮನೆಯಲ್ಲಿ ಈಗ ಶಾರದಾ ಕೇಂದ್ರ ಬಿಂದು ಆಗಿದ್ದಾಳೆ. ಸೋನು ಗೌಡ ಅವರು ಕೂಡ ಶಾರದಾಳನ್ನು ಎತ್ತಿಕೊಂಡು ಮುದ್ದಾಡುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. 

Read more Photos on
click me!

Recommended Stories