ಪುಟ್ಟ ಕಂದಮ್ಮನನ್ನು ಊರು ಜಾತ್ರೆಗೆ ಕರ್ಕೊಂಡು ಹೋದ್ರು ಕವಿತಾ ಗೌಡ; ನಾನು ಎಂದು ಕಾಮೆಂಟ್ ಮಾಡಿದ ಚಂದು!

Published : Feb 11, 2025, 11:12 AM IST

ಮಗನ ಜೊತೆ ಊರು ಜಾತ್ರೆಗೆ ಹೋದಾ ಕವಿತಾ ಗೌಡ. ಯಾವ ಊರು? ಯಾವ ಹಬ್ಬ ಎಂದು ಕಾಮೆಂಟ್ ಮಾಡಿದ ನೆಟ್ಟಿಗರು....    

PREV
16
ಪುಟ್ಟ ಕಂದಮ್ಮನನ್ನು ಊರು ಜಾತ್ರೆಗೆ ಕರ್ಕೊಂಡು ಹೋದ್ರು ಕವಿತಾ ಗೌಡ; ನಾನು ಎಂದು ಕಾಮೆಂಟ್ ಮಾಡಿದ ಚಂದು!

ಕನ್ನಡದ ನಟಿ ಕವಿತಾ ಗೌಡ ಮತ್ತು ನಟ ಚಂದನ್ ಕುಮಾರ್ ಸೆಪ್ಟೆಂಬರ್ 18, 2024ರಂದು ತಮ್ಮ ಚೊಚ್ಚಲ ಗಂಡು ಮಗುವನ್ನು ಬರ ಮಾಡಿಕೊಂಡರು. 

26

ಮಗನೊಟ್ಟಿಗೆ ಮಾಡಿರುವ ಫೋಟೋಶೂಟ್‌ ಮೂಲಕ ಮುಖವನ್ನು ರಿವೀಲ್ ಮಾಡಿದ್ದಾರೆ. ಹೆಸರು ಇಡದ ಕಾರಣ ಸನ್‌ಶೈನ್‌ ಎಂದು ಕವಿತಾ ಕರೆಯುತ್ತಾರೆ. 

36

ಇದೀಗ ತಮ್ಮ ಪುಟ್ಟ ಕಂದಮ್ಮನನ್ನು ಕರೆದುಕೊಂಡು ಹುಟ್ಟೂರಿಗೆ ಹೋಗಿದ್ದಾರೆ. ಅಲ್ಲಿನ ಮೊದಲ ಜಾತ್ರೆಯಲ್ಲಿ ಭಾಗಿಯಾಗ ಕ್ಷಣವನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದಾರೆ. 

46

'ಮಗನ ಮೊದಲ ಜಾತ್ರೆ. ನಾನು ಇದನ್ನು ಮೆಯರ್ನಲ್ ಜಾತ್ರೆ ಎನ್ನಬಹುದು. ಸ್ಪೆಷಲ್ ದಿನಕ್ಕೂ ಮೊದಲೇ ಹಲವರನ್ನು ಮಗ ಭೇಟಿ ಮಾಡಿದ' ಎಂದು ಕವಿತಾ ಬರೆದುಕೊಂಡಿದ್ದಾರೆ. 

56

ಕೆಂಪು ಮತ್ತು ವೈಟ್ ಕಾಂಬಿನೇಷನ್‌ ಸೀರೆಯಲ್ಲಿ ಕವಿತಾ ಗೌಡ ಕಾಣಿಸಿಕೊಂಡಿದ್ದಾರೆ. ಈಗಲೇ ಮಗನನ್ನು ಎಲ್ಲಾ ಕಡೆ ಸುತ್ತಾಡಿಸಬೇಡಿ ದೃಷ್ಠಿ ಆಗುತ್ತದೆ ಎಂದು ಫಾಲೋವರ್ಸ್ ಕಾಮೆಂಟ್ ಮಾಡಿದ್ದಾರೆ. 

66

ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ನಟಿಸಿ ಖ್ಯಾತಿ ಪಡೆದ ಕವಿತಾ ಗೌಡ ಶ್ರೀನಿವಾಸ ಕಲ್ಯಾಣ ಮತ್ತು ಫಸ್ಟ್‌ ಲವ್ ಸಿನಿಮಾದಲ್ಲಿ ನಟಿಸಿದ್ದಾರೆ. ಅಲ್ಲದೆ ಒಂದು ತಮಿಳು ಸೀರಿಯಲ್‌ನಲ್ಲಿ ನಟಿಸಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories