ಗುರುತೇ ಸಿಗದ ರೀತಿಯಲ್ಲಿ ಬದಲಾದ ಬಿಗ್ ಬಾಸ್ ಸ್ಪರ್ಧಿ, ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ್ರಾ?

Published : Feb 09, 2025, 03:05 PM IST

ಬಿಗ್ ಬಾಸ್ ಮುಗಿದರೂ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ. ಇದೀಗ ಖ್ಯಾತ ಬಿಗ್ ಬಾಸ್ ಸ್ಪರ್ಧಿ ಗುರುತೇ ಸಿಗದ ರೀತಿಯಲ್ಲಿ ಬದಲಾಗಿದ್ದಾರೆ. ಇದರ ಬೆನ್ನಲ್ಲೇ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಅನ್ನೋ ಮಾತುಗಳು ಕೇಳಿಂದಿದೆ.

PREV
15
ಗುರುತೇ ಸಿಗದ ರೀತಿಯಲ್ಲಿ ಬದಲಾದ ಬಿಗ್ ಬಾಸ್ ಸ್ಪರ್ಧಿ, ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ್ರಾ?

ಬಿಗ್ ಬಾಸ್ ಭಾರತತದಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಇತ್ತ ಸ್ಪರ್ಧಿಗಳು ಕೂಡ ತಮ್ಮ ಜನಪ್ರಿಯತೆಯನ್ನು ಬಿಗ್ ಬಾಸ್ ಮೂಲಕ ಹೆಚ್ಚಿಸಿಕೊಂಡಿದ್ದಾರೆ. ಹೊಸ ಅವಕಾಶಗಳನ್ನು ಪಡೆದಿದ್ದಾರೆ. ಸದ್ಯ ಕನ್ನಡ, ಹಿಂದಿ ಸೇರಿದಂತೆ ಹಲವು ಭಾಷೆಗಳ ಆವೃತ್ತಿ ಅಂತ್ಯಗೊಂಡಿದೆ. ಆದರೆ ಕ್ರೇಜ್ ಹಾಗೇ ಉಳಿದುಕೊಂಡಿದೆ. ಇದರ ನಡುವೆ ಖ್ಯಾತ ಬಿಗ್ ಬಾಸ್ ಸ್ಪರ್ಧಿ ಫೋಟೋಗಳು ವೈರಲ್ ಆಗಿದೆ. ಗುರುತೇ ಸಿಗದೆ ರೀತಿಯಲ್ಲಿ ಸ್ಪರ್ಧಿ ಬದಲಾಗಿದ್ದಾರೆ. ತಮಿಳು ಬಿಗ್ ಬಾಸ್ ಮೂಲಕ ಜನಪ್ರಿಯತೆ ಪೆಡಿರುವ ಶಿವಾನಿ ನಾರಾಯಣನ್ ಇದೀಗ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. 

25
ಬಿಗ್ ಬಾಸ್ ಖ್ಯಾತಿಯ ಶಿವಾನಿ

10ನೇ ತರಗತಿಯಲ್ಲಿರುವಾಗಲೇ ಸೀರಿಯಲ್‌ನಲ್ಲಿ ನಟಿಸೋಕೆ ಶುರು ಮಾಡಿದ ಶಿವಾನಿ, ಬಳಿಕ ಫಿಟ್ನೆಸ್ ಕಡೆ ಗಮನ ನೀಡಿದ್ದರು.  ಹೀರೋಯಿನ್ ಆಗಿ ನಟಿಸೋಕೆ ಶುರು ಮಾಡಿದ್ದರು. ಹಲವು ದಾರವಾಹಿಗಳಲ್ಲಿ ಶನಿವಾನಿ ಕಾಣಿಸಿಕೊಂಡಿದ್ದಾರೆ. ಪ್ರತಿ ದಿನ ಶಿವಾನಿ ತಮ್ಮ ಫೋಟೋಗಳನ್ನು ಸೋಶಿಯಲ್ ಮೀಡಿಯಾ ಖಾಚೆಗಳಲ್ಲಿ ಹಂಚಿಕೊಳ್ಳುತ್ತಿದ್ದರು. ಅದಕ್ಕಾಗಿಯೇ ಅವರ ಫಾಲೋವರ್ಸ್ ಜಾಸ್ತಿ. ತಮಿಳು ಬಿಗ್ ಬಾಸ್ ಸೀಸನ್ 4 ರಲ್ಲಿ ಅವಕಾಶ ಸಿಕ್ತು. ಬಾಲಾಜಿ ಮುರುಗದಾಸ್ ಜೊತೆ ಲವ್ ಮಾಡಿದ್ದು ದೊಡ್ಡ ವಿವಾದ ಆಯ್ತು.

 

35
ಶಿವಾನಿಗೆ ಸಿನಿಮಾ ಆಫರ್

ಬಿಗ್ ಬಾಸ್ ಮುಗಿದ ಮೇಲೆ ಶಿವಾನಿಗೆ ಸಿನಿಮಾ ಚಾನ್ಸ್‌ಗಳು ಸಿಕ್ಕವು. 'ವಿಕ್ರಮ್' ಸಿನಿಮಾದಲ್ಲಿ ವಿಜಯ್ ಸೇತುಪತಿಯ ಮೂರು ಹೆಂಡತಿಯರಲ್ಲಿ ಒಬ್ಬರಾಗಿ ನಟಿಸಿದ್ರು. ಡೈಲಾಗ್ ಇರಲಿಲ್ಲ. ಆದ್ರೂ ವಿಷಲ್ ಬಿತ್ತು. 'ಡಿಎಸ್‌ಪಿ' ಸಿನಿಮಾದಲ್ಲಿ ಪೊಲೀಸ್ ಪಾತ್ರ ಮಾಡಿದ್ರು. ಆದ್ರೆ ಸಿನಿಮಾ ಸೋತಿತು. ಸಿನಿಮಾ, ದಾರವಾಹಿ ಸೇರಿದಂತೆ ಹಲವು ವೇದಿಕೆಗಳಲ್ಲಿ ಶಿವಾನಿ ಕಾಣಿಸಿಕೊಳ್ಳುವ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗಿದ್ದರು. ಇದು ಶಿವಾನಿ ಕರಿಯರ್‌ಗೂ ನೆರವಾಗಿತ್ತು. 

45
ಶಿವಾನಿಗೆ ಏನಾಯ್ತು?

ವಡಿವೇಲು 'ನಾಯ್ ಸೇಕರ್' ಸಿನಿಮಾದಲ್ಲೂ ನಟಿಸಿದ್ರು. ಆ ಸಿನಿಮಾ ಕೂಡ ಸೋತಿತು. 'ಬಂಪರ್' ಸಿನಿಮಾದಲ್ಲಿ ಹೀರೋಯಿನ್ ಆಗಿ ನಟಿಸಿದ್ರು. ಆದ್ರೆ ಆ ಸಿನಿಮಾ ಕೂಡ ಸೋತಿತು. ನಂತರ ಎಲ್ಲೂ ಕಾಣಿಸಿಕೊಂಡಿಲ್ಲ. ಸೋಶಿಯಲ್ ಮೀಡಿಯಾದಲ್ಲೂ ಆಕ್ಟಿವ್ ಇರಲಿಲ್ಲ.ಅಷ್ಟೊತ್ತಿಗೆ ಶಿವಾನಿ ಎಲ್ಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತ.  ಸಿನಿಮಾ, ದಾರವಾಹಿ ಮಾತ್ರವಲ್ಲ ಸೋಶಿಯಲ್ ಮೀಡಿಯಾದಿಂದಲೂ ದೂರ ಉಳಿದ ಶಿವಾನಿ ಇದೀಗ ಪ್ರತ್ಯಕ್ಷರಾಗಿದ್ದರೆ. ಆದರೆ ಶಿವಾನಿ ಹೊಸ ರೂಪ ಹಲವರನ್ನು ಅಚ್ಚರಿಸಿಗೊಳಿಸಿದೆ 

55
ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ರಾ?

ಈಗ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಹಾಕಿದ್ದಾರೆ. ಫೋಟೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ತುಟಿ ದಪ್ಪ ಆಗಿದೆ, ಮುಖ ಸಣ್ಣ ಆಗಿದೆ. ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದಾರೆ ಅಂತ ಕೆಲವರು ಹೇಳ್ತಿದ್ದಾರೆ. ಶಿವಾನಿ ಹೊಸ ರೂಪಕ್ಕೆ ಹಲವರು ಕಮೆಂಟ್ ಮಾಡುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಶಿವಾನಿ ಸರ್ಜರಿ ಮಾಡಿಸಿಕೊಂಡು ಚೇತರಿಸಿಕೊಳ್ಳುತ್ತಿದ್ದರು. ಹೀಗಾಗಿ ಸೋಶಿಯಲ್ ಮೀಡಿಯಾದಿಂದ ದೂರ ಉಳಿದಿದ್ದರು ಎಂದಿದ್ದಾರೆ.ಆದರೆ ಈ ಕಮೆಂಟ್ ಕುರಿತು, ಪ್ಲಾಸ್ಟಿಕ್ ಸರ್ಜರಿ ಕುರಿತು ಶಿವಾನಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

 

Read more Photos on
click me!

Recommended Stories