ಕನ್ನಡ ಕಿರುತೆರೆ ನಟಿ ಭವ್ಯಾ ಗೌಡ ಈ ವರ್ಷ ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಸಿದ್ದರು. ಭವ್ಯಾ ಗೌಡ ಹೆಸರು ಗಳಿಸಿರುವುದಕ್ಕಿಂತ ಡಬಲ್ ಹೆಸರು ಅವರ ಅಕ್ಕ ಮಾಡಿದ್ದಾರೆ.
ಹೌದು! ಬಿಗ್ ಬಾಸ್ ಮನೆಯಲ್ಲಿ ನಡೆದ ಫ್ಯಾಮಿಲಿ ರೌಂಡ್‌ನಲ್ಲಿ ಭವ್ಯಾ ಗೌಡ ಅವರ ಅಕ್ಕ ದಿವ್ಯಾ ಗೌಡ, ತಾಯಿ ಮತ್ತು ಅಕ್ಕನ ಮಗಳು ಆಗಮಿಸಿದ್ದರು.
ಈ ವರ್ಷ ಬಿಗ್ ಬಾಸ್ ಪ್ಲಾಟ್‌ನಲ್ಲಿ ಫ್ಯಾಮಿಲಿಯಿಂದ ಆಗಮಿಸಿರುವ ಒಬ್ಬರು ಒಂದು ದಿನ ಅಲ್ಲೇ ಉಳಿದುಕೊಳ್ಳಬಹುದು. ಆಗ ಭವ್ಯಾ ಅವರ ಅಕ್ಕ ದಿವ್ಯಾ ಉಳಿದುಕೊಂಡಿದ್ದರು.
ಭವ್ಯಾ ಗಿಂತ ಅವರ ಅಕ್ಕ ದಿವ್ಯಾನೇ ಸಖತ್ ಆಗಿದ್ದಾಳೆ ಎಂದು ರಜತ್ ಹೇಳಿದ ಡೈಲಾಗ್ ತುಂಬಾ ಫೇಮಸ್ ಆಯ್ತು. ಜನರು ದಿವ್ಯಾ ನೋಡಿದರೆ ಇದೇ ಡೈಲಾಗ್ ಹೇಳಲು ಶುರು ಮಾಡಿಬಿಟ್ಟರು.
ಬಿಗ್ ಬಾಸ್ ಫಿನಾಲೆ ದಿನ ಭವ್ಯಾ ಅಕ್ಕ ದಿವ್ಯಾ ಮತ್ತು ತಂಗಿ ಆಗಮಿಸಿದ್ದರು. ಆಗ ಜನರಿಯಿಂದ ಸಿಕ್ಕ ಪ್ರತಿಕ್ರಿಯೆ ಮತ್ತು ಫೇಮಸ್ ಆದ ರೀತಿ ಬಗ್ಗೆ ಸುದೀಪ್ ಜೊತೆ ಮಾತನಾಡಿದ್ದರು.
ಭವ್ಯಾ ಗಿಂತ ದಿವ್ಯಾ ಫೇಮಸ್ ಆಗಿರುವುದು ನಿಜ. ಆದರೆ ಫೇಮಸ್ ಆದ್ಮೇಲೆ ಕೂದಲು ಕಟ್ ಮಾಡಿಸಿದ್ದು ತಪ್ಪು ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.
Vaishnavi Chandrashekar