ವೈಷ್ಣವ್ ಪ್ರೀತಿಗಾಗಿ ಲಕ್ಷ್ಮೀ -ಕೀರ್ತಿ ಜಿದ್ದಾ ಜಿದ್ದಿ : ಕೀರ್ತಿಗೆ ಶ್ರೀಕೃಷ್ಣನ ಪ್ರೀತಿ ಪಾಠ ಮಾಡಿದ ಜನ

First Published | Jun 7, 2024, 5:51 PM IST

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಸದ್ಯ ಲಕ್ಷ್ಮೀ ಮತ್ತು ಕೀರ್ತಿ ಇಬ್ಬರೂ ವೈಷ್ಣವ್‌ಗಾಗಿ ಹಂಬಲಿಸುತ್ತಿದ್ದಾರೆ. ನನಗೆ ವೈಷ್ ಬಿಟ್ಟು ಕೊಡು ಎಂದು ಕೀರ್ತಿ, ನನ್ನ ಗಂಡನನ್ನು ನಾನು ಬಿಟ್ಟು ಕೊಡಲ್ಲ ಎಂದು ಲಕ್ಷ್ಮೀ. ಇವರಿಬ್ಬರ ಜಿದ್ದಾಜಿದ್ದಿ ನೋಡಿ ಜನ ಏನು ಸಲಹೆ ಕೊಟ್ಟಿದ್ದಾರೆ ನೋಡಿ. 
 

ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಲಕ್ಷ್ಮೀ ಬಾರಮ್ಮ. ಮಗನ ಮೇಲಿನ ಅತಿಯಾದ ಮೋಹದಿಂದಾಗಿ ಕಾವೇರಿ ಮಾಡಿದ ಮೋಸಕ್ಕೆ ಇದೀಗ ಲಕ್ಷ್ಮೀ, ವೈಷ್ಣವ್ ಮತ್ತು ಕೀರ್ತಿ ಬಲಿಯಾಗಿದ್ದಾರೆ. ವೈಷ್ಣವ್‌ಗಾಗಿ ಲಕ್ಷ್ಮೀ ಮತ್ತು ಕೀರ್ತಿ ನಡುವೆ ಜಿದ್ದಾಜಿದ್ದಿ ನಡೆಯುತ್ತಿದೆ. 
 

ವೈಷ್ಣವ್ ಪ್ರಾಣ ಉಳಿಸೋದಕ್ಕೋಸ್ಕರ ಅವನ ಜೊತೆ ಲಕ್ಷ್ಮೀಯನ್ನು ಮದುವೆ ಮಾಡಿಸಿದ್ದು ಎನ್ನುವ ಸತ್ಯವನ್ನುಕೀರ್ತಿ ಲಕ್ಷ್ಮೀ ಮುಂದೆ ಹೇಳಿ, ತನಗೆ ವೈಷ್ಣವ್‌ನನ್ನು ವಾಪಾಸು ಕೊಡು ಎಂದು ಲಕ್ಷ್ಮೀ (Lakshmi) ಬಳಿ ದಾನ ಬೇಡ್ತಿದ್ದಾಳೆ ಕೀರ್ತಿ. ತ್ಯಾಗ ಮಾಡಿದ ಮೇಲೆ ಅದನ್ನ ಕೇಳೋದು ಸರಿಯಲ್ಲ, ನನ್ನ ಗಂಡನನ್ನು ನಾನು ಯಾವತ್ತೂ ಬಿಟ್ಟು ಕೊಡೋದಿಲ್ಲ ಅಂತಿದ್ದಾಳೆ ಲಕ್ಷ್ಮೀ. 
 

Tap to resize

ವೈಷ್ಣವ್ ಗಾಗಿ (Vaishnavi) ಇವರಿಬ್ಬರ ಜಿದ್ದಾಜಿದ್ದಿ ನೋಡಿ, ವೀಕ್ಷಕರು ತಮಗೆ ತೋಚಿದ ಸಲಹೆ ನೀಡುತ್ತಾ ಬಂದಿದ್ದಾರೆ. ಕೀರ್ತಿ ಒಪ್ಪಂದ ಮಾಡಿಕೊಂಡಿರೋದು ಕಾವೇರಿ ಜೊತೆ, ಅವಳ ಜೊತೆ ಮಾತಾಡ್ಬೇಕು ಇವಾಗ ಬಂದು ಲಕ್ಷ್ಮಿ ಹತ್ತಿರ ಕೇಳಿದ್ರೆ ಅವಳೇನು ಮಾಡ್ತಾಳೆ ಅಂತ ಕೇಳಿದ್ದಾರ್ರೆ ಒಬ್ರು. 
 

ಬಡ ಹುಡುಗಿ ದುಡ್ಡಿನ ಆಸೆಗೆ ಆಸ್ತಿ ಮನೆ ಎಲ್ಲ ಕೊಟ್ಟರೆ ಗಂಡನನ್ನು ಬಿಟ್ಟು ಹೋಗುತ್ತಾಳೆ ಅಂತ ಮದುವೆ ಮಾಡಿಸಿದ ಕೀರ್ತಿ ಅಹಂಕಾರ ಇವತ್ತಿಗೆ ಮುಗಿಯಿತು. ಪ್ರೀತಿ ಮಾಡಿದವರು ಸಿಕ್ಕಿಲ್ಲ ಅಂದ್ರೆ ಎಲ್ಲಿದ್ರು ಚೆನ್ನಾಗಿ ಇರಲಿ ಅಂತ ಬಯಸೋದು ನಿಜವಾದ ಪ್ರೀತಿ! ಬೇಕೇ ಬೇಕು ಅಂತ ಇನೊಬ್ರ ಜೀವನ ಹಾಳು ಮಾಡೋದಕ್ಕೆ ಪ್ರೀತಿ ಅನ್ನಲ್ಲ ಎಂದು ಇನ್ನೊಬ್ರು ಕಾಮೆಂಟ್ ಮಾಡಿದ್ದಾರೆ. 
 

ಇನ್ನೊಬ್ರು ಇದು ಒಂದು ಗೃಹಿಣಿ ಗೆ ಇರಬೇಕಾದ ದೈರ್ಯ. ಪ್ರೀತಿ ಬೇರೆ, ತ್ಯಾಗ ಬೇರೆ, ಸ್ವಾರ್ಥ ಬೇರೆ. ಕೀರ್ತಿ ತ್ಯಾಗ ಮಾಡಿದ್ಲು ನಿಜ, ಆದ್ರೆ ಅದನ್ನ ವಾಪಸ್ ಕೇಳೋದು ಸ್ವಾರ್ಥ ಆಗತ್ತೆ. ಅದು ನಿಜವಾದ ಪ್ರೀತಿಗೆ ಅಗೌರವ ತೋರಿಸಿದ ಹಾಗೆ. ವೈಷ್ಣವ್ ಲಕ್ಷ್ಮೀನ ಬಿಟ್ಟು ಕೊಡಬಾರದು. ಬಿಟ್ಟರೆ ಅವನು ಒಂದೊಳ್ಳೆ ಮಗನು ಆಗಲ್ಲ, ಒಂದೊಳ್ಳೆ ಅಳಿಯನು ಆಗಲ್ಲ, ಮುಖ್ಯವಾಗಿ ಗಂಡನಾಗಿ ಇರೋಕೆ ಲಾಯಕ್ಕಿಲ್ಲ ಅಂತರ್ಥ ಎಂದಿದ್ದಾರೆ. 
 

ಲಕ್ಷ್ಮೀ ನೀವು ಯಾವುದೇ ಕಾರಣಕ್ಕೂ ನಿಮ್ಮ ಗಂಡ ನಾ ಬಿಟ್ಟು ಕೊಡಬೇಡಿ. ನೀವು ಸ೦ಪ್ರದಾಯದ೦ತೆ ಮದುವೆ ಆಗಿದ್ದೀರಿ. ಅವರು ನಿನ್ನ ಗಂಡ ಯಾವುದೇ ಕಾರಣಕ್ಕೂ ಬಿಟ್ಟು ಕೊಡುವ ಮಾತಿಲ್ಲ. ಕೀರ್ತಿ ವೈಷ್ಣವನ್ನ ವಾಪಾಸು ಕೇಳಿದ್ರೆ ಅದು ತ್ಯಾಗ ಅನಿಸ್ಕೊಳೊದಿಲ್ಲ.ಸ್ವಾರ್ಥ ಆಗತ್ತೆ .ಯಾವುದೇ ಕಾರಣಕ್ಕೂ ವೈಷ್ಣವ ನ್ನಾ ಬಿಟ್ಟು ಕೊಡಬೇಡಾ ಲಕ್ಷ್ಮಿ ಎನ್ನುವ ಸಲಹೆ ಕೂಡ ಕೊಟ್ಟಿದ್ದಾರೆ. 
 

ಕೀರ್ತಿ ಮನಸು ಮಾಡಿದರೆ ಇನ್ನೊಬ್ರನ್ನ ಮದುವೆ ಆಗಬಹುದು. ಆದ್ರೆ ಗಂಡ ಬದುಕಿರುವಾಗಲೇ ಎಲ್ಲಾ ಚೆನ್ನಾಗಿದ್ದು ಲಕ್ಷ್ಮಿ ತಾಳಿ ಬಿಟ್ಟು ಕೊಡಬೇಕು ಅಂದ್ರೆ ಆಗಲ್ಲ. ನಮ್ಮ ಹೆಣ್ಣು ಮಕ್ಕಳು ಸಂಸಾರ ಚೆನ್ನಾಗಿಲ್ಲ ಅಂದ್ರೇನೆ ಗಂಡನ್ನ ಬಿಟ್ಟು ಹೋಗೋದು ಕಷ್ಟ. ಇನ್ನು ಸಂಸಾರ ಚೆನ್ನಾಗಿದ್ರೆ ಬಿಟ್ಟು ಕೊಡ್ತಾರಾ ಹೇಳಿ. ಲಕ್ಷ್ಮಿ ವೈಷ್ಣವನ ಬಿಟ್ಟು ಕೊಡಬೇಡ. ಇವಾಗ ನೀನು ಬಿಟ್ಟು ಕೊಟ್ಟರೆ, ಅದು ಅಗೌರವ ಎಂದಿದ್ದಾರೆ ಮತ್ತೊಬ್ಬರು. 
 

ಇನ್ನೊಬ್ರು ಕೀರ್ತಿಗೆ ಬೆಂಬಲಿಸುತ್ತಾ, ಕೀರ್ತಿ, ಈ ವೈಷ್ಣವ್ ಲಕ್ಷ್ಮಿಗೇ ತಾಳಿ ಕಟ್ಟಿದ್ದಾನೆ. ಅದಕ್ಕೆ ತಾಳಿಗೇ ಇರೋ ಬೆಲೆ ಈ ಜನ ಪ್ರೀತಿಗೆ ಕೊಟ್ಟಿಲ್ಲ. ಅದಕ್ಕೆ ಆ ದೇವರು ಕೂಡ ಸಾಕ್ಷಿ. ಶ್ರೀ ಕೃಷ್ಣಂಗೇ ಪ್ರೀತಿ ಸಿಗಲಿಲ್ಲ ಆದರೆ ಕೃಷ್ಣ ಒಂದು ಮಾತ ಹೇಳ್ತಾರೆ ಕೀರ್ತಿ ನಮಗೆ ಯಾರ ಮೇಲೆ ಪ್ರೀತಿ ಇರುತ್ತೋ, ಅವರಿಗೆ ನಮ್ಮ ಮೇಲು ಪ್ರೀತಿ ಇರಬೇಕು ಅಂತ.  ಆದರೆ ವೈಷ್ಣವ್ ಗೆ ನಿನ್ನ ಮೇಲೆ ಪ್ರೀತಿ ಇಲ್ಲ. ಅದಕ್ಕೆ ಜನರಿಗೆ ನಿನ್ನ ಮೇಲೆ ಕೋಪ. ಈ ಜಗತ್ತಿನಲ್ಲಿ ಪ್ರೀತಿಗೆ ಬೆಲೆನೇ ಇಲ್ಲ, ಅದಕ್ಕೇ ಪ್ರೀತಿ ಸಾಯೋದು, ಪ್ರೇಮಿಗಳು ಸಾಯೋದು. ಕೀರ್ತಿ ನೀನು ಬೇಜಾರು ಮಾಡ್ಬೇಡ. ನಿನ್ನನ್ನು ಪ್ರೀತಿಸೋರು ಈ ಜಗತ್ತಲ್ಲಿ ತುಂಬಾ ಜನ ಇದ್ದಾರೆ ಎಂದಿದ್ದಾರೆ. 
 

ಇಬ್ಬರು ಸೇರಿ ಕಾವೇರಿಗೆ ಗಸಗಸೆ ಪಾಯಸ ಕೊಡಿ, ಇಬ್ಬರು ಈ ತರ ಕಿತ್ತಾಡೋ ಬದಲು ವೈಷ್ಣವ್‌ನ ಒಂದ ಸಲ ಕೇಳಿ ಯಾರು ಬೇಕು ಅಂತ ಆವಾಗ ಸರಿಯಾಗುತ್ತೆ, ಈಗ ಗೊತ್ತಾಗುತ್ತೆ, ತಾಳಿನಾ ಅಥವಾ ಪ್ರೀತಿನಾ ಕಾಯ್ದು ನೋಡಬೇಕು ಯಾವದು ಗೆಲ್ಲುತ್ತೆ ಅಂತ, ಇಬ್ರೂ ಕೂಡ ವೈಷ್ಣವ್‌ನ ಮದುವೆಯಾಗಿ ಜೊತೆಯಾಗಿ ಸುಖವಾಗಿರಿ ಅಂತಲೂ ಕಾಮೆಂಟ್ (Comment) ಮೂಲಕ ಸಲಹೆ ನೀಡಿದ್ದಾರೆ ಜನ. 
 

Latest Videos

click me!