Amruthadhare: ಡುಮ್ಮ ಸರ್ -ಭೂಮಿ ನಟನೆಗೆ ಮನ ಸೋತ ವೀಕ್ಷಕರು, ಡೆರೆಕ್ಟರ್‌ಗೆ ಬೆಳ್ಳುಳ್ಳಿ ಕಬಾಬ್ ಗಿಫ್ಟ್!

First Published | Jun 7, 2024, 5:13 PM IST

ಅಮೃತಧಾರೆ ಧಾರಾವಾಹಿಯ ಕಳೆದ ಎರಡು ದಿನಗಳ ಎಪಿಸೋಡ್‌ಗಳನ್ನು ನೋಡಿರೋ ಜನ ಗೌತಮ್ ಮತ್ತು ಭೂಮಿಯ ಅಭಿನಯಕ್ಕೆ ಸೋತು ಹೋಗಿದ್ದು, ಇವರಿಬ್ಬರದ್ದು ಆಸ್ಕರ್ ಪರ್ಫಾರ್ಮೆನ್ಸ್ ಎಂದಿದ್ದಾರೆ. 
 

ಝೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಅಮೃತಧಾರೆ (Amruthadhare) ಸೀರಿಯಲ್ ಸಪರೇಟ್ ಫ್ಯಾನ್ ಬೇಸ್ ಹೊಂದಿದೆ ಅಂದ್ರೆ ತಪ್ಪಲ್ಲ. ಅದಕ್ಕೆ ಕಾರಣ ಸೀರಿಯಲ್ ಕಥೆ, ಅದನ್ನ ತೆಗೆದುಕೊಂಡು ಹೋಗುವ ರೀತಿ, ಎಲ್ಲದಕ್ಕಿಂತ ಮುಖ್ಯವಾಗಿ ನಟನೆ. ಗೌತಮ್ ಮತ್ತು ಭೂಮಿಕಾಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದೇ ಅವರ ಅದ್ಭುತ ನಟನೆಯಿಂದಾಗಿ. 
 

ಅಮೃತಧಾರೆ ಧಾರಾವಾಹಿಯಲ್ಲಿ ರಾಜೇಶ್ ನಟರಂಗ (Rajesh) ಮತ್ತು ಛಾಯಾ ಸಿಂಗ್(Chaya Singh) ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೊಂದು ಪ್ರಬುದ್ಧ ಪ್ರೇಮಕಥೆಯನ್ನು ಹೊಂದಿರೋ ಸೀರಿಯಲ್ಆ. ತಮ್ಮ ಮತ್ತು ತಂಗಿಯ ಮದುವೆಯಾಗೋದಕ್ಕಾಗಿ ಇಷ್ಟವಿಲ್ಲದಿದ್ದರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗೌತಮ್ ದಿವಾನ್ ಮತ್ತು ಭೂಮಿಕಾ ಹೊಂದಿಕೊಳ್ಳೋದಕ್ಕೆ ಕಷ್ಟ ಪಟ್ಟು, ಬಳಿಕ ಒಬ್ಬರನ್ನೊಬ್ಬರು ಅರ್ಥ ಮಾಡ್ಕೊಂಡು ಇವಾಗಷ್ಟೇ ಒಂದಾಗಿದ್ದಾರೆ. 
 

Tap to resize

ಕಳೆದ ಎರಡು ದಿನಗಳಿಂದ ಅಮೃತಧಾರೆ ಧಾರಾವಾಹಿ ನೋಡ್ತಿರೋ ವೀಕ್ಷಕರು ಛಾಯಾ ಸಿಂಗ್ ಮತ್ತು ರಾಜೇಶ್ ನಟನೆಗೆ ವಾರೆವಾ ಅಂದಿದ್ದಾರೆ. ಫ್ಯಾನ್ಸ್ ಏನೆಲ್ಲಾ ಕಾಮೆಂಟ್ ಮಾಡಿದ್ದಾರೆ ನೋಡೋಣ ಬನ್ನಿ. ನಿಮಿಬ್ಬರನ್ನ ನೋಡೋಕೆ ಎರಡ್ ಕಣ್ಣು ಸಾಲದು. ಅಮೇಜಿಂಗ್ ಆಕ್ಟಿಂಗ್, ಪಾತ್ರದಲ್ಲಿ ಇಷ್ಟೊಂದು ಆಳಕ್ಕೆ ಹೋಗಿ ನಟಿಸೋ ಯಾವ ನಟರನ್ನು ನಾನು ನೋಡೆ ಇಲ್ಲ ಎಂದಿದ್ದಾರೆ ಫ್ಯಾನ್ಸ್. 
 

ಫಸ್ಟ್ ನೈಟ್ ದೃಶ್ಯದಲ್ಲಿ (First night scene) ಇಬ್ಬರ ತಳಮಳ, ಆತಂಕ, ಪ್ರೀತಿ, ಭಯ ಎಲ್ಲವನ್ನೂ ನೋಡಿ ಖುಷಿ ಪಟ್ಟಿರೋ ವೀಕ್ಷಕರು ಏನ್ ಆಕ್ಟಿಂಗ್, ನೋಡ್ತಿದ್ರೆ ನಮ್ಗೇ ಢವ ಢವ ಅಂತಿದೆ ಮುಂದೇನು ಮುಂದೇನು ಅನ್ನೋ ಹಾಗಿದೆ. ಡೈರೆಕ್ಟ್ರ್ರಿಗೆ ನನ್ ಕಡೆ ಇಂದ ಒಂದ್ ಪ್ಲೇಟ್ ಬೆಳ್ಳುಳ್ಳಿ ಕಬಾಬ್ ಪಾರ್ಸೆಲ್ ಎಂದಿದ್ದಾರೆ.  
 

ಗೌತಮ್ ಮತ್ತು ಭೂಮಿಯ ನ್ಯಾಚುರಲ್ ನಟನೆ (natural acting) ನೋಡೋದಕ್ಕೆ ಚೆಂದ. ಇವರಿಬ್ಬರು ನಟಿಸುತ್ತಾರೆ ಎಂದು ಅನಿಸೋದೆ ಇಲ್ಲ. ಇವರಿಬ್ಬರನ್ನು ಈ ಪಾತ್ರಕ್ಕೆ ಆಯ್ಕೆ ಮಾಡಿದಾಗಲೇ ಸೀರಿಯಲ್ ಗೆದ್ದಿತು. ಏನು ಆಕ್ಟಿಂಗ್ ಇವರದ್ದು. ಇವರಿಗೆ ಆಸ್ಕರ್ ಕೊಡಬೇಕು ಎಂದು ಒಬ್ರು ಸಂತೋಷದಿಂದ ಹೊಗಳಿದ್ದಾರೆ. 
 

ಮತ್ತೊಬ್ಬರು ಕಾಮೆಂಟ್ ಮಾಡಿ ಎಂಥ ಚಂದ ಅಭಿನಯ ಮಾಡುತ್ತೀರಾ ಇಬ್ಬರು. ನಿಜವಾಗಿ ಆ ಪಾತ್ರಗಳಲ್ಲಿ ಜೀವಿಸುತ್ತಿರಾ.  ಈ ಧಾರಾವಾಹಿ ನೋಡಿದರೆ ನನ್ಗೆ ತುಂಬಾ ಸಂತೋಷವಾಗುತ್ತದೆ.  ಸಂಬಂಧಗಳ ಬೆಲೆಯನ್ನು ತುಂಬಾ ಚನ್ನಾಗಿ ತೋರಿಸುವ ಒಂದು ಧಾರಾವಾಹಿ. ಇಬ್ಬರ ಬದುಕಲ್ಲಿ ಹೊಸ ಅಧ್ಯಾಯ ಶುರುವಾಗಿರೋದು ನೋಡಿ ಖುಷಿಯಾಗಿದೆ ಎಂದಿದ್ದಾರೆ. 
 

ಗೌತಮ್ -ಭೂಮಿಯನ್ನು ಜೊತೆಯಾಗಿ ನೋಡೋದೆ ಚೆಂದ. ಇಬ್ಬರದು ಅದ್ಭುತ ಅಭಿನಯ. ಛಾಯ ಸಿಂಗ್ ನೋಡೋವಾಗ ನಟಿ ಕಲ್ಪನಾ ನೆನಪಾಗ್ತಾರೆ. ನಿರ್ದೇಶನವೂ ಅದ್ಭುತವಾಗಿದೆ. ಇವರಿಬ್ಬರ ಅಭಿನಯ ನೋಡೋಕೆ ಎರಡು ಕಣ್ಣು ಸಾಲದು.  ಭಾವನೆಗಳನ್ನು ವ್ಯಕ್ತಪಡಿಸುವ ರೀತಿ ಮತ್ತು ಅಭಿನಯವು ಅತ್ಯುತ್ತಮವಾಗಿತ್ತು. ಇಬ್ಬರ ಈ ಪ್ರೀತಿ, ಹೊಸ ಜೀವನ ಎಲ್ಲವೂ ಸುಂದರವಾಗಿರಲಿ ಎಂದು ಅಭಿಮಾನಿಗಳು ಶುಭ ಹಾರೈಸಿದ್ದಾರೆ. 
 

Latest Videos

click me!