21ನೇ ಬರ್ತ್‌ಡೇಗೆ ದುಬಾರಿ ಕಾರು ಖರೀದಿಸಿದ ರಾಮಚಾರಿ ಬೆಡಗಿ ಮೌನ ಗುಡ್ಡೆಮನೆ

Published : Jun 07, 2024, 04:44 PM IST

ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಪಾತ್ರದಲ್ಲಿ ಮಿಂಚುತ್ತಿರೋ ಮೌನ ಗುಡ್ಡೆಮನೆ ತಮ್ಮ ಹುಟ್ಟು ಹಬ್ಬದ ದಿನ ತಮ್ಮ ಬಹುದೊಡ್ಡ ಕನಸಾಗಿದ್ದ ಕಾರು ಖರೀದಿಸಿ ಸಂಭ್ರಮಿಸಿದ್ದಾರೆ.   

PREV
17
21ನೇ ಬರ್ತ್‌ಡೇಗೆ ದುಬಾರಿ ಕಾರು ಖರೀದಿಸಿದ ರಾಮಚಾರಿ ಬೆಡಗಿ ಮೌನ ಗುಡ್ಡೆಮನೆ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ರಾಮಾಚಾರಿ (Ramachari) . ಈ ಸೀರಿಯಲ್ ನ ನಾಯಕಿ ಚಾರು ಖ್ಯಾತಿಯ ಮೌನ ಗುಡ್ಡೆಮನೆ. ಮೊದಲ ಸೀರಿಯಲ್‌ನಲ್ಲೇ ವಿಭಿನ್ನ ಶೇಡ್ ಗಳ ಪಾತ್ರ ನಿರ್ವಹಿಸಿ, ವೀಕ್ಷಕರ ಮನಗೆದ್ದ ಬೆಡಗಿ ಇವರು. 
 

27

ಕನ್ನಡಿಗರ ಮನೆಮಾತಾಗಿರುವ ಮೌನ ಗುಡ್ಡೆಮನೆ (Mouna Guddemane) ಇದೀಗ ತಮ್ಮ 21 ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಜೂನ್ 6 ರಂದು ನಟಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಶುಭ ಸಂದರ್ಭದಲ್ಲಿ ತಮ್ಮ ಜೀವನದ ಬಹುದೊಡ್ಡ ಕನಸನ್ನು ನನಸು ಮಾಡುವ ಮೂಲಕ, ತಮ್ಮ ಸ್ಪೆಷಲ್ ದಿನವನ್ನು ಸೂಪರ್ ಸ್ಪೆಷಲ್ ಮಾಡಿಕೊಂಡಿದ್ದಾರೆ. 
 

37

ಹೌದು ನಟಿ ಮೌನ ಗುಡ್ಡೆಮನೆ ಹುಟ್ಟುಹಬ್ಬದ ಸಂದರ್ಭ ತಮ್ಮ ಕನಸಿನ ಕಾರು ಖರೀದಿಸಿ ಸಂಭ್ರಮಿಸಿದ್ದಾರೆ. ಅಲ್ಲದೇ ತಮ್ಮ ಕುಟುಂಬದ ಜೊತೆ ಮೈಸೂರಿನ ಶ್ರೀ ಚಾಮುಂಡಿ (Chamundi Hill) ತಾಯಿ ಸನ್ನಿಧಿಯಲ್ಲಿ ಹೊಸ ಕಾರಿನ ಪೂಜೆ ಮಾಡಿಸಿ ಬಂದಿದ್ದಾರೆ. 
 

47

ನನ್ನ ಕನಸಿನತ್ತ ಒಂದು ಸಣ್ಣ ಹೆಜ್ಜೆ ಎಂದು (One small step to my dreams) ಸೋಶಿಯಲ್ ಮೀಡಿಯಾದಲ್ಲಿ ಕಾರಿನ ಜೊತೆಗಿನ ಒಂದಷ್ಟು ಫೋಟೋಗಳನ್ನು ನಟಿ ಶೇರ್ ಮಾಡಿದ್ದಾರೆ. ಮೌನ ಜೊತೆ ಇವರ ಸಹೋದರಿ ಮತ್ತು ತಾಯಿಯನ್ಯೂ ಕಾಣಬಹುದು. 
 

57

ಕೇವಲ 21ನೇ ವಯಸ್ಸಿಗೆ ಮೌನ ಗುಡ್ಡೆಮನೆ ದುಬಾರಿ ಕಾರಿನ ಒಡೆಯರಾಗಿದ್ದಾರೆ. ಇವರು ಕಿಯಾ ಕಾರು (Kia Car) ಖರೀದಿಸಿದ್ದು, ಇದರ ಬೆಲೆ ಸಾಮಾನ್ಯವಾಗಿ 14 ರಿಂದ 24 ಲಕ್ಷ ರೂಪಾಯಿವರೆಗೂ ಇರುತ್ತೆ. ಹುಟ್ಟು ಹಬ್ಬದ ದಿನ ಕಾರು ಖರೀದಿಸಿದ ನಟಿಗೆ ನಟ -ನಟಿಯರು, ಅಭಿಮಾನಿಗಳು ಶುಭ ಕೋರಿದ್ದಾರೆ. 
 

67

ಹುಟ್ಟುಹಬ್ಬಕೂ ವಿಶ್ ಮಾಡಿರೋ ಅಭಿಮಾನಿಗಳು ಚಾರು... ನಿಮ್ ಕನಸೆಲ್ಲ ನನಸಾಗಲಿ, ನಿಮ್ಮ ಮುಖದಲ್ಲಿ ನಗು ಯಾವಾಗ್ಲೂ ಇರಲಿ, ನಿಮ್ಮ ಯಶಸ್ಸಿನಿಂದ ನಮಗೆ ಸಂತೋಷವಾಗಿದೆ, ಹೀಗೆ ಒಂದೊಂದೆ ಹೆಜ್ಜೆ ಮೇಲೆ ಹೋಗುತ್ತಾ, ನಿಮ್ಮೆಲ್ಲಾ ಕನಸನ್ನು ನನಸು ಮಾಡಿ ಎಂದು ವಿಶ್ ಮಾಡಿದ್ದಾರೆ. 
 

77

ಇನ್ನು  ರಾಮಾಚಾರಿಯ ಬೆಡಗಿ ತಮ್ಮ ವಿಶೇಷ ದಿನದಂದು  ಹಸಿರು ಬಾರ್ಡರು ಇರುವ ಕೆಂಪು ಬಣ್ಣದ ಸೀರೆಯುಟ್ಟಿದ್ದು, ಅದಕ್ಕೆ ಹಸಿರು ಬಣ್ಣದ ಸ್ಲೀವ್ ಲೆಸ್ ಬ್ಲೌಸ್ ತೊಟ್ಟಿದ್ದು, ತುಂಬಾನೆ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ. 
 

Read more Photos on
click me!

Recommended Stories