Published : Dec 08, 2025, 07:39 PM ISTUpdated : Dec 08, 2025, 07:40 PM IST
ಬಿಗ್ ಬಾಸ್ ಮನೆಗೆ ತಮ್ಮ ಶಿಷ್ಯಂದಿರನ್ನು ಕಳುಹಿಸುತ್ತಾರೆ ಎಂಬ ಆರೋಪಕ್ಕೆ ಕಿಚ್ಚ ಸುದೀಪ್ ಖಡಕ್ ಉತ್ತರ ನೀಡಿದ್ದಾರೆ. ಆದರೆ, ಕಿಚ್ಚನ ಬಗ್ಗೆ ಆರೋಪ ಮಾಡಿದ ವ್ಯಕ್ತಿ ಬೇರಾರೂ ಅಲ್ಲ, ಸ್ವತಃ ಬಿಗ್ ಬಾಸ್ ಮನೆಯೊಳಗೆ ಅನ್ನ ತಿಂದು ಹೋದ ಮಾಜಿ ಸ್ಪರ್ಧಿಯೇ ಆಗಿದ್ದು, ಇದೀಗ ಸಿಕ್ಕಿಬಿದ್ದಿದ್ದಾರೆ.
ನೀವೆಲ್ಲಾ 'ಒಂದು ತಿಳ್ಕೊಳಿ, ನಿಮಗೂ ಹೇಳಿಬಿಡ್ತೀನಿ. ಕೆಲವರು ಹೊರಗಡೆ ಕೂತ್ಕೊಂಡು ಬಹಳ ಉದ್ದುದ್ದ ಮಾತಾಡೋರು ಇರ್ತಾರೆ. ಅವರಿಗೂ ಹೇಳ್ತಿದೀನಿ, ಇಷ್ಟು ಸೀಸನ್‌ನಲ್ಲಿ ಯಾವ ಒಂದು ಕಂಟೆಸ್ಟೆಂಟ್ ಅನ್ನೂ ನನ್ನ ಶಿಷ್ಯ, ನನ್ನ ಹುಡುಗರು ಅಂತಾ ಈ ಮೇಕಪ್ ಹಾಕೋ ವೇದಿಕೆ ಮೇಲೆ ನಿತ್ಕೊಂಡು ಹೇಳ್ತೀನಿ ನಾನು ಕಳಿಸಿಲ್ಲ' ಎಂದು ಕಿಚ್ಚ ಸುದೀಪ್ ಖಡಕ್ ಆಗಿ ವಾರ್ನಿಂಗ್ ನೀಡಿದ್ದಾರೆ.
26
ಯಾರನ್ನೂ ಒಳಗೆ, ಹೊರಗೆ ಕಳಿಸೋ ಅಧಿಕಾರ ನನಗಿಲ್ಲ
ಬಿಗ್ ಬಾಸ್ ಸೀಸನ್ 12ರ ಕಿಚ್ಚನ ಪಂಚಾಯಿತಿ ವೇಳೆ ಧ್ರುವಂತ್ ನೀವು ನನ್ನನ್ನು ಮನೆಗೆ ಕಳಿಸಿಕೊಡಿ ಎಂದು ಕೇಳುತ್ತಾರೆ. ಆಗ ಸುದೀಪ್ ಅವರು ಬಿಗ್ ಬಾಸ್ ಮನೆಯೊಳಗೆ ಯಾರನ್ನೂ ಕಳಿಸುವ ಅಥವಾ ಯಾರನ್ನೂ ಹೊರಗೆ ಕಳಿಸುವ ಅಧಿಕಾರ ನನಗಿಲ್ಲ. ಜನರೇ ಎಲ್ಲವನ್ನೂ ತೀರ್ಮಾನಿಸುತ್ತಾರೆ ಎಂದು ಕಿಚ್ಚ ಹೇಳಿದ್ದಾರೆ.
36
ಮನೆಯೊಳಗೆ ಹೋಗೋ ಕಂಟೆಸ್ಟೆಂಟ್ ಬರೋವರೆಗೂ ಹೆಸರು ತಿಳ್ಕೊಳೋದಿಲ್ಲ
ಇಲ್ಲಿ ಸತ್ಯವೇನೆಂದರೆ ಬಿಗ್ ಬಾಸ್ ಎನ್ನುವ ಕಾರ್ಯಕ್ರಮ ಎಷ್ಟು ಹಾನೆಸ್ಟ್ ಆಗಿ ನಡೆಯುತ್ತೆ ಗೊತ್ತಾ. ಕಂಟೆಸ್ಟೆಂಟ್‌ಗಳು ಮನೆಯೊಳಗೆ ಹೋಗಲು ನಡ್ಕೊಂಡು ಬರೋವರೆಗೂ, ಒಳಗಡೆ ಹೋಗುವ ನೆಕ್ಸ್ಟ್ ಕಂಟೆಸ್ಟೆಂಟ್ ಯಾರು ಅಂತಾ ನಾನು ತಿಳ್ಕೊಳೋದಿಲ್ಲ' ಎಂದು ಕಾರ್ಯಕ್ರಮದ ಬಗ್ಗೆ ಹೇಳಿದ್ದಾರೆ.
ಆದರೆ, ಕಿಚ್ಚ ಸುದೀಪ್ ಅವರು ಈ ಮಾತನ್ನು ಯಾಕೆ ಹೇಳಿದರು? ಯಾರು ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ? ಸುದೀಪ್ ತನ್ನ ಶಿಷ್ಯಂದಿರನ್ನು ಬಿಗ್ ಬಾಸ್ ಮನೆಯೊಳಗೆ ಕಳಿಸಿದ್ದಾರೆ ಎಂದು ಹೇಳಿದ್ದಾದರೂ ಯಾರು ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.
56
ಶಿಷ್ಯಂದಿರನ್ನು ಒಳಗೆ ಕಳಿಸಿದ್ದಾರೆಂದವರಿಗೆ ಎಚ್ಚರಿಕೆ
ಮಾಧ್ಯಮಗಳ ಮೈಕ್ ಸಿಕ್ಕಿದಾಕ್ಷಣ ಏನಾದರೂ ಒಂದು ಕಾಂಟ್ರವರ್ಸಿ ಹೇಳಿಕೆ ನೀಡುವಂತಹ ಬಿಗ್ ಬಾಸ್ ಕಾರ್ಯಕ್ರಮದ ಮಾಜಿ ಸ್ಪರ್ಧಿ ವಕೀಲ ಜಗದೀಶ್ ಅವರೇ, ಕಿಚ್ಚ ಸುದೀಪ್ ಅವರು ತಮ್ಮ ಶಿಷ್ಯಂದಿರನ್ನು ಮನೆಯೊಳಗೆ ಕಳಿಸುತ್ತಾರೆ ಎಂದು ಹೇಳಿದ್ದರು. ಇದಕ್ಕೆ ಸ್ವತಃ ಸುದೀಪ್ ಕಿಚ್ಚನ ಪಂಚಾಯಿತಿ ವೇದಿಕೆಯಿಂದಲೇ ಖಡಕ್ ತಿರುಗೇಟು ಕೊಟ್ಟಿದ್ದಾರೆ.
66
ನಾಲಿಗೆ ಹರಿಬಿಟ್ಟಿದ್ದ ವಕೀಲ ಜಗದೀಶ್
ಕೆಎ ಚಾನಲ್ ಎಂಬ ಖಾಸಗಿ ವಾಹಿನಿಯೊಂದರ ಜೊತೆಗೆ ಮಾತನಾಡಿದ ವಕೀಲ ಜಗದೀಶ್, ಬಿಗ್ ಬಾಸ್ ಮನೆಯೊಳಗೆ ಯಾರನ್ನಾದರೂ ಒಳಗೆ ಸೇರಿಸಿಕೊಳ್ಳಲಿ. ತ್ರಿವಿಕ್ರಮ್, ಉಗ್ರಂ ಮಂಜ ಹಾಗೂ ರಂಜಿತ್ ಸುದೀಪ್ ಅವರ ಶಿಷ್ಯಂದಿರು ಹಾಗಾಗಿ ಅವರನ್ನು ಒಳಗಡೆ ಕಳಿಸಿದ್ದಾರೆ. ಇವರು ಮೂರು ಜನರೂ ಅವರ ಶಿಷ್ಯಂದಿರು ಎಂದು ನಾಲಿಗೆ ಹರಿಬಿಟ್ಟಿದ್ದರು.