BBK 12: ಬಿಗ್‌ಬಾಸ್ ವೇದಿಕೆ ಮೇಲೆ ತಾಯಿಯನ್ನು ನೆನೆದು ಭಾವುಕರಾದ ಕಿಚ್ಚ ಸುದೀಪ್

Published : Oct 19, 2025, 09:03 AM IST

Kiccha Sudeep 25th anniversary ಬಿಗ್‌ಬಾಸ್ ಸೀಸನ್ 12ರ ವೇದಿಕೆಯಲ್ಲಿ ಕಿಚ್ಚ ಸುದೀಪ್ ಮತ್ತು ಪ್ರಿಯಾ ತಮ್ಮ 25ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಈ ಕ್ಷಣದಲ್ಲಿ ಸುದೀಪ್ ತಮ್ಮ ದಿವಂಗತ ತಾಯಿ ಸರೋಜಾ ಅವರನ್ನು ನೆನೆದು ಭಾವುಕರಾದರು.

PREV
15
25ನೇ ಮದುವೆ ವಾರ್ಷಿಕೋತ್ಸವ

ಬಿಗ್‌ಬಾಸ್ ವೇದಿಕೆ ಮೇಲೆ ಕಿಚ್ಚ ಸುದೀಪ್ ಮತ್ತು ಪ್ರಿಯಾ ಸುದೀಪ್ ಅವರ 25ನೇ ಮದುವೆ ವಾರ್ಷಿಕೋತ್ಸವ ಆಚರಿಸಲಾಗಿದೆ. ಸೀಸನ್ 12ರ ವೇದಿಕೆಗೆ ಪ್ರಿಯಾ ಸುದೀಪ್ ಆಗಮನ ಕಂಡು ಅಭಿನಯ ಚಕ್ರವರ್ತಿ ಸಂತಸ ವ್ಯಕ್ತಪಡಿಸಿದ್ದಾರೆ. ಸುದೀಪ್ ಅವರೇ ಹೋಗಿ ಪತ್ನಿಯನ್ನು ವೇದಿಕೆಗೆ ಸ್ವಾಗತಿಸಿದ್ದಾರೆ.

25
ಸುದೀಪ್ ತಂದೆ ಎಂ.ಸಂಜೀವ್

ಪ್ರಿಯಾ ವೇದಿಕೆ ಬರುತ್ತಿದ್ದಂತೆ ಸುದೀಪ್ ಅವರ ತಂದೆ ಎಂ.ಸಂಜೀವ್ ಅವರ ವಿಡಿಯೋವನ್ನು ಪ್ರೋಮೋದಲ್ಲಿ ತೋರಿಸಲಾಗಿದೆ. ಮನೆಗೆ ಬಂದ ಸೊಸೆ ಅಂತ ಹೇಳಲೋ, ಮಗಳು ಅಂತ ಹೇಳಲೋ ತಿಳಿಯುತ್ತಿಲ್ಲ. ಪ್ರಿಯಾ ನಮ್ಮನೆಯ ಭಾಗ್ಯ ದೇವತೆ. ಇದೇ ರೀತಿ ಒಗ್ಗಟ್ಟಿನಿಂದ ಬಾಳಿ ಎಂದು ಮಗ ಮತ್ತು ಸೊಸೆಗೆ ಎಂ.ಸಂಜೀವ್ ಆಶೀರ್ವದಿಸಿದ್ದಾರೆ.

35
ಪತಿಗಾಗಿ ಪ್ರಿಯಾ ಹಾಡು

ಮಾವ ಸಂಜೀವ್ ಅವರ ಮಾತುಗಳನ್ನು ಕೇಳಿ ಪ್ರಿಯಾ ಸುದೀಪ್ ಭಾವುಕರಾಗಿ ಥ್ಯಾಂಕ್ಸ್ ಅಪ್ಪಾ ಎಂದು ಹೇಳಿದ್ದಾರೆ. ಈ ದಿನದ ವಿಶೇಷತೆ ಏನಂದ್ರೆ ಕಳೆದ ವರ್ಷ ನನ್ನ ತಾಯಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಜೀವಂತವಾಗಿ ನೋಡಿದ ದಿನ ಎಂದು ಹೇಳಿ ಸುದೀಪ್ ಸಹ ಭಾವುಕರಾದರು. ಮದುವೆ ವಾರ್ಷಿಕೋತ್ಸವದ ಹಿನ್ನೆಲೆ ಪತಿಗಾಗಿ ಪ್ರಿಯಾ ಹಾಡು ಸಹ ಹೇಳಿದ್ದಾರೆ.

45
ಸುದೀಪ್ ಮತ್ತು ಪ್ರಿಯಾ

ಇಂದಿನ ಸಂಚಿಕೆಯಲ್ಲಿ ಸುದೀಪ್ ಮತ್ತು ಪ್ರಿಯಾ ಅವರು ಮದುವೆ ವಾರ್ಷಿಕೋತ್ಸವ ಹೇಗೆ ಆಚರಿಸಲಾಯ್ತು ಎಂಬುದನ್ನು ನೋಡಬಹುದಾಗಿದೆ. ಬಿಗ್‌ಬಾಸ್ ಸಹ ಕಿಚ್ಚ ದಂಪತಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳನ್ನು ತಿಳಿಸಿದ್ದರು.

55
ಸರೋಜಾ

2024ರಲ್ಲಿ ಸುದೀಪ್ ಬಿಗ್‌ಬಾಸ್ ಶೋ ನಿರೂಪಣೆ ಮಾಡುತ್ತಿರುವ ಸಂದರ್ಭದಲ್ಲಿಯೇ ತಾಯಿ ಸರೋಜ ಅವರು ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.  ಅಕ್ಟೋಬರ್ 20ರಂದು ಸರೋಜಾ ಅವರು ನಿಧನವಾಗಿ ಒಂದು ವರ್ಷವಾಗಿದೆ. ಸರೋಜಾ ಅವರಿಗೆ 74 ವರ್ಷ ವಯಸ್ಸಾಗಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories