BBK 12: ಎಲ್ರೂ ಸುಮ್ನಿದ್ದಾಗ ಮೋಸ, ಸುಳ್ಳಿನ ವಿರುದ್ಧ ಸಿಡಿದೆದ್ದ ಏಕೈಕ ಸ್ಪರ್ಧಿಗೆ ಈ ವಾರದ ಕಿಚ್ಚನ ಚಪ್ಪಾಳೆ

Published : Oct 19, 2025, 07:36 AM IST

ಬಿಗ್‌ ಬಾಸ್‌ ಕನ್ನಡ 12 ಶೋನಲ್ಲಿ ಕಿಚ್ಚನ ಚಪ್ಪಾಳೆಗೋಸ್ಕರ ಸ್ಪರ್ಧಿಗಳು ಕಾಯೋದುಂಟು. ಕಳೆದ ಬಾರಿ ಕರ್ನಾಟಕದ ಜನತೆಗೆ ಸುದೀಪ್‌ ಚಪ್ಪಾಳೆ ನೀಡಿದ್ದರು. ಉಳಿದಂತೆ ಯಾರೂ ಕೂಡ ತಮ್ಮ ವ್ಯಕ್ತಿತ್ವ ಇದೇ ಎಂದು ತೋರಿಸುವಂತೆ ಆಟ ಆಡಿರಲಿಲ್ಲ. ಮೂರನೇ ವಾರ ಸ್ಪರ್ಧಿಯೋರ್ವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ. 

PREV
15
ರಕ್ಷಿತಾ ಶೆಟ್ಟಿ ಡಿಫೇಮ್‌ ಮಾಡಿದ್ರು

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ರಕ್ಷಿತಾ ಶೆಟ್ಟಿ ಅವರು ರಾತ್ರಿ ತುಂಬ ಟೈಮ್‌ ಬಾತ್‌ರೂಮ್‌ಗೆ ಹೋಗ್ತಾರೆ, ಅಲ್ಲಿ ಡ್ಯಾನ್ಸ್‌ ಮಾಡ್ತಾರೆ, ನಗ್ತಾರೆ ಎಂಬ ವಿಷಯ ಇಟ್ಟುಕೊಂಡು ಅಶ್ವಿನಿ ಗೌಡ, ಜಾಹ್ನವಿ ಅವರು ರಾ ರಾ ಎಂದು ಹಾಡಿಕೊಂಡು ಡ್ಯಾನ್ಸ್‌ ಮಾಡ್ತಾರೆ, ನಾಗವಲ್ಲಿ ಎಂದೆಲ್ಲ ಬಿಂಬಿಸಿದರು. ನಾವು ಏನೂ ಮಾಡಿಲ್ಲ, ನಮ್ಮ ತಪ್ಪಿಲ್ಲ ಎಂದು ಹೇಳಿದ್ದರು. ಇದು ರಕ್ಷಿತಾ ಶೆಟ್ಟಿಗೆ ತುಂಬ ಬೇಸರ ತಂದಿತ್ತು. 

25
ಯಾರು?

ಈ ವಿಚಾರವನ್ನು ಕಾವ್ಯ ಶೈವ ಅವರು ಬಗೆಹರಿಸಲು ಟ್ರೈ ಮಾಡಿದ್ದರು. ಆದರೆ ಜಾಹ್ನವಿ ನೀವು ಮಧ್ಯೆ ಬರಬೇಡಿ ಎಂದಿದ್ದಕ್ಕೆ ಕಾವ್ಯ ಸೈಲೆಂಟ್‌ ಆದರು. ಚಂದ್ರಪ್ರಭ ಅವರಿಗೂ ಕೂಡ ರಾತ್ರಿ ಕಾಲ್ಗೆಜ್ಜೆ ಸೌಂಡ್‌ ಮಾಡಿ, ಅದನ್ನು ರಕ್ಷಿತಾ ಶೆಟ್ಟಿ ಮೇಲೆ ಹಾಕಿದ್ದು ಕೂಡ ಜಾಹ್ನವಿ ಎನ್ನೋದು ಗೊತ್ತಾಗಿದ್ದರೂ ಕೂಡ, ತಮ್ಮ ಜೊತೆಗಿದ್ದವರ ಜೊತೆ ಮಾತನಾಡಿಕೊಂಡರೂ ಕೂಡ ಅದರ ಬಗ್ಗೆ ದನಿ ಎತ್ತಲೇ ಇಲ್ಲ.

35
ಜಗಳ ನೋಡಿಕೊಂಡು ನಿಂತರು

ಉಳಿದಂತೆ ಮಂಜು ಭಾಷಿಣಿ ಸೇರಿದಂತೆ ಕೆಲವರಿಗೆ ಜಾಹ್ನವಿ, ಅಶ್ವಿನಿ ಗೌಡ ವಿರುದ್ಧವೇ ಡೌಟ್‌ ಇತ್ತು. ಆದರೂ ಕೂಡ ಯಾರು ಮಾತನಾಡಲಿಲ್ಲ. ಇನ್ನು ಅಶ್ವಿನಿ ಗೌಡ, ಜಾಹ್ನವಿ ಸೇರಿಕೊಂಡು ರಕ್ಷಿತಾ ಮೇಲೆ ವಾಕ್‌ ದಾಳಿ ಮಾಡಿದಾಗಲೂ ಎಲ್ಲರೂ ಜಗಳ ನೋಡಿಕೊಂಡು ಇದ್ದರೆ ವಿನಃ ಏನೂ ಮಾತನಾಡಿರಲಿಲ್ಲ.

45
ಧ್ರುವಂತ್‌ ಸುಮ್ಮನಿದ್ದರು

ಧ್ರುವಂತ್‌ ಕೂಡ ಒಮ್ಮೆ ರಕ್ಷಿತಾ ಪರವಾಗಿ, ಇನ್ನೊಮ್ಮೆ ರಕ್ಷಿತಾ ವಿರುದ್ಧವಾಗಿ ಮಾತನಾಡಿದರು. ಇದು ಕೂಡ ಕಿಚ್ಚ ಸುದೀಪ್‌ ಗಮನಕ್ಕೆ ಬಂದಿದ್ದು, ತಿಳಿ ಹೇಳಿದ್ದರು. ಇನ್ನು ಈ ವಾರ ಸಿಕ್ಕಾಪಟ್ಟೆ ಕೂಗಾಡಿದ ಧ್ರುವಂತ್‌ಗೆ ಕಿಚ್ಚ ಸುದೀಪ್‌ ಕಿವಿ ಹಿಂಡಿದ್ದಾರೆ.

55
ಕಿಚ್ಚನ ಚಪ್ಪಾಳೆ ಯಾರಿಗೆ?

ಗಿಲ್ಲಿ ನಟ ಮಾತ್ರ ಸಾಕಷ್ಟು ಬಾರಿ ಜಾಹ್ನವಿ, ಅಶ್ವಿನಿ ಗೌಡಗೆ ನೀವು ರಕ್ಷಿತಾ ವಿರುದ್ಧ ಮಾಡುತ್ತಿರೋದು ತಪ್ಪು ಎಂದು ಪದೇ ಪದೇ ಹೇಳಿದ್ದರು. ಇದನ್ನೇ ಇಟ್ಟುಕೊಂಡು ಅವರು ಹಾಡಿನ ಮೂಲಕ ಹೇಳಿದ್ದರು, ವ್ಯಂಗ್ಯ ಮಾಡಿದ್ದರು. ಈ ಬಗ್ಗೆ ದನಿ ಎತ್ತಿದ್ದಕ್ಕೆ ಗಿಲ್ಲಿ ನಟ ಅವರಿಗೆ ಈ ಬಾರಿಯ ಕಿಚ್ಚನ ಚಪ್ಪಾಳೆ ಸಿಕ್ಕಿದೆ.

Read more Photos on
click me!

Recommended Stories