ಕರ್ಣ ಸೀರಿಯಲ್ ಕುತೂಹಲದ ಘಟ್ಟ ತಲುಪಿದ್ದು, ತೇಜಸ್ ಎಂಟ್ರಿಯಾಗಿದೆ. ಕರ್ಣನ ತ್ಯಾಗದ ಬಗ್ಗೆ ತಿಳಿದ ನಿಧಿಗೆ ಅವನ ಮೇಲೆ ಪ್ರೀತಿ ಹೆಚ್ಚಾಗಿದ್ದು, ಅಚ್ಚರಿಯ ರೀತಿಯಲ್ಲಿ ಮತ್ತೆ ಒಂದಾಗಿದ್ದಾರೆ. ಇವರಿಬ್ಬರ ಪ್ರೇಮಕಥೆ ಪುನಃ ಆರಂಭವಾಗಿದೆ.
ಕರ್ಣ ಸೀರಿಯಲ್ (Karna Serial) ದಿನದಿಂದ ದಿನಕ್ಕೆ ಕುತೂಹಲದ ತಿರುವು ಪಡೆದುಕೊಳ್ಳುತ್ತಲೇ ಇದೆ. ಇದೀಗ ತೇಜಸ್ ಎಂಟ್ರಿ ಕೂಡ ಆಗಿದೆ. ಇಷ್ಟಾಗುತ್ತಿದ್ದಂತೆಯೇ ಕರ್ಣ ಮತ್ತು ನಿಧಿ ಒಂದಾಗುವುದು ಕನ್ಫರ್ಮ್ ಆಗಿದೆ. ಹೀಗೆ ಬೇಗ ಆಗಲಪ್ಪಾ ಎಂದು ವೀಕ್ಷಕರು ಅಂದುಕೊಳ್ಳುತ್ತಿದ್ದಾರೆ.
25
ಕರ್ಣನ ಮೇಲೆ ಮತ್ತಷ್ಟು ಪ್ರೀತಿ
ಕರ್ಣ ಮತ್ತು ನಿತ್ಯಾಳ ಸತ್ಯ ತಿಳಿದಿರುವ ನಿಧಿಗೆ, ಕರ್ಣನ ಮೇಲೆ ಇನ್ನಷ್ಟು ಪ್ರೀತಿ ಉಂಟಾಗಿದೆ. ತನ್ನ ಅಕ್ಕನನ್ನು ಕಾಪಾಡಲು ಇಷ್ಟೊಂದು ತ್ಯಾಗ ಮಾಡಿರೋ ಕರ್ಣನ ಮೇಲೆ ಅಭಿಮಾನ ಉಕ್ಕಿ ಹರಿದಿದೆ. ಇನ್ನೇನು ತೇಜಸ್ ಬಂದಾಯ್ತು ಎನ್ನುವ ಕಾರಣಕ್ಕೆ ಆಕೆ ಕರ್ಣನ ತೆಕ್ಕೆ ಸೇರಿದ್ದಾಳೆ.
35
ಅಮ್ಮನಿಗೆ ಕಾಲ್
ಇನ್ನು ನಿಮ್ಮನ್ನು ಬಿಡುವ ಮಾತೇ ಇಲ್ಲ ಎಂದು ನಿಧಿಯನ್ನು ತೋಳಿನಲ್ಲಿ ಬಳಸಿ ಕರ್ಣ ಹೇಳಿದ್ದಾರೆ. ಅಷ್ಟೊತ್ತಿಗಾಗಲೇ ಕರ್ಣನ ಅಮ್ಮನಿಗೆ ಒಂದು ಫೋನ್ಕಾಲ್ ಬಂದು ಅರ್ಜೆಂಟ್ ಆಗಿ ಕರ್ಣನನ್ನು ಕಳುಹಿಸಿಕೊಡುವಂತೆ ಕೇಳಲಾಗಿದೆ. ಯಾರಿದು ಎಂದು ಕೇಳಿದರೂ ಅಮ್ಮ ಕರ್ಣನಿಗೆ ಕರೆಯುತ್ತಿರುವುದು ಯಾರು ಎಂದು ಹೇಳಲಿಲ್ಲ.
ಬಳಿಕ ಗಾಡಿಯಲ್ಲಿ ಕರ್ಣನನ್ನು ಕುಳ್ಳರಿಸಿಕೊಂಡು ಹೋಗಲಾಗಿದೆ. ನೀವ್ಯಾರು ನೀವ್ಯಾರು ಕೇಳಿದರೂ ಎದುರುಗಡೆ ಇದ್ದವರು ಮಾತನಾಡಲಿಲ್ಲ. ಕೊನೆಗೆ ಗಾಡಿಯಿಂದ ಇಳಿದಾಗ ಆಕೆ ಹೆಣ್ಣು ಎನ್ನುವುದು ತಿಳಿದಿದೆ.
55
ಯಾರೀ ಸುಂದರಿ?
ಸಿನಿಮಾ ಸ್ಟೈಲ್ನಲ್ಲಿ ಆಕೆ ತಿರುಗಿದಾಗ ಅವಳನ್ನು ನೋಡಿ ಕರ್ಣನಿಗೆ ಶಾಕ್ ಆಗಿದೆ. ಅಷ್ಟಕ್ಕೂ ಅವಳು ಯಾರೂ ಅಲ್ಲ, ಬದಲಿಗೆ ಖುದ್ದು ನಿಧಿಯೇ. ಒಟ್ಟಿನಲ್ಲಿ ಕರ್ಣ ಮತ್ತು ನಿಧಿಯ ಲವ್ಸ್ಟೋರಿ ಪುನಃ ಆರಂಭವಾಗಿದೆ. ಇವರಿಬ್ಬರ ನಡುವೆ ಮತ್ಯಾರೂ ಬರದಿರಲಿ ಎಂದು ವೀಕ್ಷಕರು ಹೇಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.