Bigg Bossಗೆ ಚೈತ್ರಾ ಕುಂದಾಪುರರನ್ನು ಪುನಃ ಕಳಿಸಿದ್ದು ಯಾಕೆ? ಕೊನೆಗೂ ದೊಡ್ಡ ರಹಸ್ಯ ಬಿಚ್ಚಿಟ್ಟ ಚೈತ್ರಾ

Published : Dec 22, 2025, 11:41 AM IST

ಬಿಗ್​ಬಾಸ್​ ಮನೆಯಿಂದ ಚೈತ್ರಾ ಕುಂದಾಪುರ ಮತ್ತು ರಜತ್​ ಹೊರಬಂದಿದ್ದು, ಅವರು ಅತಿಥಿಗಳಾಗಿದ್ದರು ಎಂಬುದು ಸ್ಪಷ್ಟವಾಗಿದೆ. ಅಶ್ವಿನಿ ಗೌಡ ಅವರನ್ನು ಟಾರ್ಗೆಟ್ ಮಾಡಲು ತಮ್ಮನ್ನು ಕಳುಹಿಸಲಾಗಿತ್ತು ಎಂಬ ಬಗ್ಗೆ ಮಾಧ್ಯಮಗಳ ಜೊತೆ ಚೈತ್ರಾ ಹೇಳಿದ್ದೇನು? 

PREV
15
ಹೊರ ಬಂದ ಚೈತ್ರಾ ಕುಂದಾಪುರ-ರಜತ್​

ಬಿಗ್​ಬಾಸ್​ ಮನೆಗೆ ಚೈತ್ರಾ ಕುಂದಾಪುರ ಮತ್ತು ರಜತ್​ ಅವರನ್ನು ಪುನಃ ಕಳುಹಿಸುವ ಮೂಲಕ ವೀಕ್ಷಕರಿಗೆ ಭಾರಿ ಸರ್​ಪ್ರೈಸ್​ ನೀಡಲಾಗಿತ್ತು. ಇವರು ಸ್ಪರ್ಧಿಗಳಾ, ಅತಿಥಿಗಳಾ ಎನ್ನುವ ಬಗ್ಗೆ ಸಾಕಷ್ಟು ಚರ್ಚೆಗಳೂ ನಡೆದಿದ್ದವು. ಇದೀಗ ಇವರಿಬ್ಬರೂ ಹೊರಕ್ಕೆ ಬಂದಿರುವ ಕಾರಣದಿಂದ ಇವರು ಅತಿಥಿಗಳಾಗಿ ಹೋಗಿದ್ದರು ಎನ್ನುವುದು ಸ್ಪಷ್ಟವಾಗಿದೆ. ಆದರೂ ಇವರಿಬ್ಬರನ್ನೇ ಏಕೆ ಇಷ್ಟು ದಿನ ಇಟ್ಟುಕೊಂಡಿದ್ದರು ಎನ್ನುವುದು ಕೂಡ ಬಹಳ ಚರ್ಚೆಯಾಗುತ್ತಿದೆ.

25
ಘೋಷವಾಕ್ಯವೇ ಕುತೂಹಲ

ಅಷ್ಟಕ್ಕೂ ಈ ಸೀಸನ್​ ಬಿಗ್​ಬಾಸ್​ ಘೋಷವಾಕ್ಯವೇ ಎಕ್ಸ್‌ಪೆಕ್ಟ್‌ ದಿ ಅನ್‌ಎಕ್ಸ್‌ಪೆಕ್ಟೆಡ್ ಎನ್ನುವುದು. ಅದರಂತೆಯೇ ಅನಿರೀಕ್ಷಿತವಾಗಿ ಚೈತ್ರಾ ಮತ್ತು ರಜತ್​ ಅವರನ್ನು ಕಳುಹಿಸಲಾಗಿತ್ತು. ಇದೀಗ ಇಬ್ಬರನ್ನೂ ಹೊರಕ್ಕೆ ಕರೆಸಿಕೊಳ್ಳಲಾಗಿದೆ. ಮೂರು ವಾರಗಳ ಕಾಲ ಇಬ್ಬರೂ ಮನೆಯಲ್ಲಿ ಸಕತ್​ ಆಗಿ ಆಡಿ ಬಿಗ್​ಬಾಸ್​​ ಯಾವ ಉದ್ದೇಶಕ್ಕೆ ಕಳುಹಿಸಿತ್ತೋ ಅದನ್ನು ನೆರವೇರಿಸಲಾಗಿದೆ.

35
ಚೈತ್ರಾ ಕುಂದಾಪುರ ಸೀಕ್ರೆಟ್​

ಹಾಗಿದ್ದರೆ ಬಿಗ್​ಬಾಸ್​ ಚೈತ್ರಾ ಕುಂದಾಪುರ ಅವರನ್ನು ಕಳುಹಿಸಲು ಕಾರಣವೇನು ಎನ್ನುವ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಲೇ ಇದೆ. ಅಷ್ಟಕ್ಕೂ ಈಗಿನ ಸೀಸನ್​ನಲ್ಲಿ ಜಗಳದಿಂದಲೇ ಫೇಮಸ್​ ಆಗಿರುವವರು ಎಂದರೆ ಅಶ್ವಿನಿ ಗೌಡ (Bigg Boss Ashwini Gowda). ಅದಕ್ಕಾಗಿಯೇ ಅವರಿಗೆ ಠಕ್ಕರ್​ ಕೊಡುವುದಕ್ಕಾಗಿಯೇ ಚೈತ್ರಾ ಕುಂದಾಪುರ ಅವರನ್ನು ಕಳುಹಿಸಲಾಗಿತ್ತು ಎಂದೇ ಚರ್ಚೆಯಾಗುತ್ತಿದೆ.

45
ಅಶ್ವಿನಿ ಗೌಡ ಟಾರ್ಗೆಟ್​?

ಈ ಬಗ್ಗೆ ಇದೀಗ ಮಾಧ್ಯಮದ ಜೊತೆ ಚೈತ್ರಾ ಕುಂದಾಪುರ ಮಾತನಾಡಿದ್ದಾರೆ. ಬಿಗ್​ಬಾಸ್​ನಲ್ಲಿ ಆಟವಾಡುವಾಗ ಹೇಗೆ ಯಾವ ರೀತಿ ಸಿಚುಯೇಷನ್​ ಬರುತ್ತದೆಯೋ ಗೊತ್ತಾಗಲ್ಲ. ಯಾರು ನಮ್ಮ ಜೊತೆ ಜಗಳಕ್ಕೆ ಬಂದರೆ ಅವರ ಜೊತೆ ಜಗಳ ಆಡಲೇಬೇಕಾಗುತ್ತದೆ. ಆದ್ದರಿಂದ ಅಶ್ವಿನಿ ಗೌಡ ಅವರನ್ನು ಟಾರ್ಗೆಟ್​ ಮಾಡಿ ನನ್ನನ್ನು ಕಳುಹಿಸಿದ್ದರು ಎನ್ನುವುದು ತಪ್ಪು ಎಂದಿದ್ದಾರೆ.

55
ಬಿಗ್​ಬಾಸ್​ ಮನೆಗೆ ಎನರ್ಜಿ

ಯಾರನ್ನೂ ಯಾರಿಗೋ ಠಕ್ಕರ್ ಕೊಡುವುದಕ್ಕೆ ಕಳುಹಿಸುವುದಿಲ್ಲ. ಆದರೆ ಮನೆಗೆ ಎನರ್ಜಿ ಕೊಡಬೇಕು, ಯಾರು ಇದನ್ನು ಕೊಡಲು ಶಕ್ಯರು ಎಂದು ನೋಡಿ ಕಳುಹಿಸುತ್ತಾರೆ. ಅದೇ ಕಾರಣಕ್ಕೆ ಬಿಗ್​ಬಾಸ್​ನ ಮನೆಗೆ ಇನ್ನಷ್ಟು ಎನರ್ಜಿ ತುಂಬಲು ನನ್ನನ್ನು ಕಳುಹಿಸಿದ್ದಿರಬಹುದೇ ವಿನಾ ಯಾರನ್ನೂ ಟಾರ್ಗೆಟ್​ ಆಗಿ ಮಾಡಿಕೊಂಡು ಅಲ್ಲ ಎಂದು ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories