ಬಿಗ್‌ಬಾಸ್ ಕನ್ನಡ ಸೀಸನ್ 12ರ ಫಿನಾಲೆ ಸ್ಪರ್ಧಿ ಎನ್ನಲಾದ ಅಶ್ವಿನಿ ಗೌಡ ಆಗರ್ಭ ಶ್ರೀಮಂತೆಯಾಗಿದ್ದು, 150 ಮನೆಗಳಿಂದ ಬಾಡಿಗೆ ಪಡೆಯುತ್ತಾರೆ. ಈ ಲೇಖನವು ಅವರ ವೈಯಕ್ತಿಕ ಜೀವನ ಮತ್ತು ಬಿಗ್‌ಬಾಸ್ ಮನೆಯಲ್ಲಿ ಅವರು ಪ್ರತಿ ವಾರ ಪಡೆಯುತ್ತಿರುವ ಅಂದಾಜು ಸಂಭಾವನೆಯ ಕುರಿತು ಚರ್ಚಿಸುತ್ತದೆ.
ಬಿಗ್‌ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಅಶ್ವಿನಿ ಗೌಡ ಆಗರ್ಭ ಶ್ರೀಮಂತೆ ಎಂಬ ವಿಷಯ ಎಲ್ಲರಿಗೂ ಗೊತ್ತಿದೆ. ಸದ್ಯ ಫಿನಾಲೆ ಅಭ್ಯರ್ಥಿ ಎಂದು ಅಶ್ವಿನಿ ಗೌಡ ಬಿಂಬಿತವಾಗಿದ್ದು, ಬೆಳ್ಳಿ ಮತ್ತು ಕಿರುತೆರೆಯಲ್ಲಿ ಮಿಂಚಿರುವ ಕಲಾವಿದೆ. ಅಶ್ವಿನಿ ಗೌಡ ಬಿಗ್‌ಬಾಸ್‌ನಿಂದ ಪಡೆಯುತ್ತಿರುವ ಸಂಭಾವನೆ ಎಷ್ಟು ಎಂಬುದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ.
25
100ನೇ ದಿನದತ್ತ ಬಿಗ್‌ಬಾಸ್
ಬಿಗ್‌ಬಾಸ್ ಮನೆಗೆ ಬಂದಾಗಿನಿಂದ ಅಶ್ವಿನಿ ಗೌಡ ತಮ್ಮದೇ ಶೈಲಿಯಲ್ಲಿ ಆಟವನ್ನು ಆಡಿಕೊಂಡು ಬಂದಿದ್ದಾರೆ. ಬಹುತೇಕ ವಾರಗಳಲ್ಲಿ ನಾಮಿನೇಟ್ ಆದರೂ ಅಶ್ವಿನಿ ಗೌಡ ಅವರನ್ನು ವೀಕ್ಷಕರು ವೋಟ್ ಮಾಡಿಕೊಳ್ಳುವ ಮೂಲಕ ಉಳಿಸಿಕೊಳ್ಳುತ್ತಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿರುವ ಸ್ಪರ್ಧಿಗಳು 85 ದಿನಗಳನ್ನು ಪೂರೈಸಿದ್ದು, 100ರ ಸಂಭ್ರಮದ ಸಮೀಪದಲ್ಲಿದ್ದಾರೆ.
35
150 ಮನೆಗಳ ಬಾಡಿಗೆ
ಸಿನಿಮಾಗಳ ಜೊತೆ ಕನ್ನಡ ಪರ ಹೋರಾಟಗಾರದಲ್ಲಿಯೂ ಅಶ್ವಿನಿ ಗೌಡ ಗುರುತಿಸಿಕೊಂಡಿದ್ದಾರೆ. ಅಶ್ವಿನಿ ಗೌಡ ತಂದೆ ಕೆಆರ್ ಪುರ ಭಾಗದ ರಾಜಕೀಯ ಮುಖಂಡರಾಗಿದ್ದು, ಒಂದು ಕಾರ್ಪೋರೇಟರ್ ಸಹ ಆಗಿದ್ದರು. 40 ವರ್ಷಗಳ ಹಿಂದೆಯೇ ಅಶ್ವಿನಿ ಗೌಡ ಅವರ ತಂದೆ ಲೇಔಟ್ ನಿರ್ಮಾಣ ಮಾಡಿದ್ದರು. ಸಂದರ್ಶನದಲ್ಲಿ ತಮಗೆ 150 ಮನೆಗಳ ಬಾಡಿಗೆ ಬರುತ್ತೆ ಎಂದು ಅಶ್ವಿನಿ ಗೌಡ ಹೇಳಿಕೊಂಡಿದ್ದಾರೆ.
19ನೇ ವಯಸ್ಸಿನಲ್ಲಿಯೇ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಶ್ವಿನಿ ಗೌಡ, ಕಾಲನಂತರ ಗಂಡನಿಂದ ದೂರವಾಗಿದ್ದಾರೆ. ಅಶ್ವಿನಿ ಗೌಡ ಅವರಿಗೆ ಒಬ್ಬ ಮಗನಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿಯೂ ಮಗನ ಬಗ್ಗೆ ಹಲವು ಬಾರಿ ಅಶ್ವಿನಿ ಗೌಡ ಮಾತನಾಡಿದ್ದಾರೆ. ಫಿನಾಲೆ ಹಂತದಲ್ಲಿರುವ ಅಶ್ವಿನಿ ಗೌಡ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಿದೆಯಾ?
ಕೆಲ ವರದಿಗಳ ಪ್ರಕಾರ ಅಶ್ವಿನಿ ಗೌಡ ಅವರಿಗೆ ವಾರದ ಲೆಕ್ಕದಲ್ಲಿ ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ. ಬಿಗ್‌ಬಾಸ್ ಮನೆಯಿಂದ ವಾರಕ್ಕೆ 1.75 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ನಾನು ನಕಲಿ ಆಭರಣಗಳನ್ನು ಧರಿಸಲ್ಲ. ನನ್ನದೊಂದು ವಜ್ರದ ಓಲೆ ಮಿಸ್ ಆಗಿದೆ ಎಂದು ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.