ಕರ್ಣನಿಗೆ ಅವರಪ್ಪನ ಜತೆಗೆ ಅವರ ಅತ್ತೆಯ ಮುಖವಾಡವೂ ಗೊತ್ತಾಯ್ತಾ? ಆ ಕಠಿಣ ನಿರ್ಧಾರ ತಗೊಂಡಿದ್ದೇಕೆ?

Published : Jan 28, 2026, 08:04 PM IST

ಮಹಾಭಾರತದಲ್ಲಿ ತ್ಯಾಗಮಯಿ ಹಾಗೂ ಕರುಣಾಮಯಿಯಾಗಿದ್ದ ಕರ್ಣನಂತೆ ಇದ್ದ ಕಿರಣ್ ರಾಜ್, ಕರ್ಣ ಧಾರಾವಾಹಿಯಲ್ಲಿ ಇದ್ದಕ್ಕಿದ್ದಂತೆಯೇ ಬದಲಾಗಿ ಹೋಗಿದ್ದಾನೆ. ಅವರ ಅಪ್ಪನ ಕಂತ್ರಿ ಬುದ್ದಿ ಬೆಳಕಿಗೆ ಬಂದ ಬೆನ್ನಲ್ಲೇ ಇದೀಗ ತಮ್ಮ ಅತ್ತೆಯ ಮುಖವಾಡ ಬಯಲಾದಂತೆ ಅನಿಸುತ್ತಿದೆ. ಏನದು ಹೊಸ ಅಪ್ಡೇಟ್ಸ್‌. 

PREV
16
ಕಳಚಿಬಿದ್ದ ರಮೇಶನ ಮುಖವಾಡ

ಕರ್ಣನ ತಂದೆ ಒಂದು ರೂಮ್‌ನಲ್ಲಿ ಕುಳಿತು, ಎಣ್ಣೆ ಹೊಡೆಯುತ್ತಾ ಕರ್ಣನ ಬದುಕನ್ನು ಹೇಗೆ ಹಾಳು ಮಾಡಿದೆ ಎಂದು ಎಳೆಎಳೆಯಾಗಿ ಬಿಚ್ಚಿಡುತ್ತಾ ಇರುತ್ತಾರೆ. ಆಗ ಕರ್ಣ ಆ ಸೀಕ್ರೇಟ್‌ ರೂಮ್‌ಗೆ ಎಂಟ್ರಿ ಕೊಟ್ಟಿರೋದು ಗೊತ್ತಾಗಿರುವುದಿಲ್ಲ. ಕರ್ಣನ ತಂದೆ ರಮೇಶ್, ನಾಟಕ ಮಾಡುತ್ತಿರುವುದು ಕರ್ಣನಿಗೆ ಗೊತ್ತಾದ ನಂತರ, ಕರ್ಣ ಸಂಪೂರ್ಣ ಬದಲಾಗಿ ಹೋಗ್ತಾನೆ.

26
ಅತ್ತೆಗೆ ಶಾಕ್ ಕೊಡಲು ರೆಡಿಯಾದ ಕರ್ಣ

ರಮೇಶ್ ಮಾಡಿದ ನೀಚತನದಿಂದ ಕರ್ಣ ಪ್ರೀತಿಸಿದ ನಿಧಿಯ ಕುಟುಂಬ ಬೀದಿಪಾಲಾಯಿತು. ಇದರಿಂದ ಬೇಸರಗೊಂಡ ಕರ್ಣ, ತಾನೂ ಕೂಡಾ ಬುದ್ದಿವಂತೆಯಿಂದ ನಾಟಕ ಮಾಡಲು ಶುರುಮಾಡುತ್ತಾನೆ. ಅದರ ಭಾಗವಾಗಿ ಅವರ ಅತ್ತೆಗೂ ಇದೀಗ ಶಾಕ್ ನೀಡಲು ಕರ್ಣ ರೆಡಿಯಾಗಿದ್ದಾನೆ.

36
ನಿತ್ಯಾ ಪಾಲಿಗೆ ಭರವಸೆಯ ಆಶಾಕಿರಣವಾಗಿ ಕಾಣುತ್ತಿರುವ ಕರ್ಣ

ಇದೀಗ ಬೀದಿಗೆ ಬಂದಿರುವ ನಿತ್ಯಾಗೆ ಬದುಕು ಕಟ್ಟಿಕೊಡಲು ಮುಂದಾಗಿರುವ ಕರ್ಣ, ನಿತ್ಯಾ ಕುಟುಂಬದ ಪಾಲಿಗೆ ಹೊಸ ಭರವಸೆಯ ಆಶಾಕಿರಣ ಎನಿಸಿಕೊಂಡಿದ್ದಾನೆ. ಮೊದಲು ಕರ್ಣ ತಮ್ಮದೇ ಆಸ್ಪತ್ರೆಯಲ್ಲಿ ಕೇವಲ ಕೆಲಸಗಾರನಂತಿದ್ದ ಕರ್ಣ, ಇದೀಗ ಡಿಷೀಶನ್ ಮೇಕರ್ ಆಗಿ ಬದಲಾಗಿದ್ದಾನೆ.

46
ನಯನತಾರಾಗೆ ಶಾಕ್ ಕೊಟ್ಟ ಕರ್ಣ

ನಿತ್ಯಾಳನ್ನ ಆಸ್ಪತ್ರೆಗೆ ಕರೆದುಕೊಂಡು ಬಂದ ಕರ್ಣ, ತನ್ನ ಸ್ವಂತ ಅತ್ತೆ ನಯನತಾರ ಎದುರೇ ನಿತ್ಯಾಳನ್ನ ಈ ಆಸ್ಪತ್ರೆಯ ಬೋರ್ಡ್ ಆಫ್ ಮೆಂಬರ್ ಎಂದು ನೇಮಕಮಾಡಿಕೊಳ್ಳುತ್ತಾನೆ. ಇದು ಕರ್ಣನ ಅತ್ತೆಗೆ ಒಂದು ಕ್ಷಣ ಶಾಕ್ ಎನಿಸುತ್ತದೆ.

56
ನಿತ್ಯಾ ಬೆಸ್ಟ್ ಕ್ಯಾಂಡಿಡೇಟ್ ಎಂದ ಕರ್ಣ

ಆಗ ಕರ್ಣನ ಅತ್ತೆ ನಯನತಾರ ಈ ನಿರ್ಧಾರವನ್ನು ವಿರೋಧಿಸುತ್ತಾಳೆ. ಆಗ ಕರ್ಣ ಇದು ನನ್ನ ಆಸ್ಪತ್ರೆ. ಇಲ್ಲಿ ನನ್ನದೇ ನಿರ್ಧಾರ ಫೈನಲ್. ನಾನು ಆಸ್ಪತ್ರೆಯ ವೆಲ್‌ಫೇರ್ ಬಗ್ಗೆ ಸಾಕಷ್ಟು ಯೋಚಿಸಿಯೇ ನಿತ್ಯಾ ಬೆಸ್ಟ್ ಕ್ಯಾಂಡಿಡೇಟ್ ಎಂದು ಈ ತೀರ್ಮಾನ ತೆಗೆದುಕೊಂಡಿದ್ದೇನೆ ಎನ್ನುತ್ತಾನೆ.

66
ಅತ್ತೆಯ ಮುಖವಾಡ ಬಯಲಾಯ್ತಾ?

ಯಾಕೆಂದರೆ ನಿತ್ಯಾಳಲ್ಲಿ ಒಳ್ಳೆಯ ಸ್ಕಿಲ್ ಹಾಗೂ ಕ್ವಾಲಿಫಿಕೇಷನ್ ಇದೆ ಎನ್ನುತ್ತಾನೆ. ಕರ್ಣ ಈ ಮಟ್ಟಿಗೆ ಕಠಿಣ ನಿರ್ಧಾರ ತೆಗೆದುಕೊಳ್ಳಲು ಕಾರಣ, ಆತನಿಗೆ ಅತ್ತೆಯ ಮುಖವಾಡ ಬಯಲಾಗಿರಬಹುದಾ ಎನ್ನುವುದನ್ನು ಕಾದು ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories