Karna Serial: ನಿತ್ಯಾ ಜೊತೆಗೆ ಮದುವೆ- ಅಜ್ಜಿಗೆ ಮಾತು ಕೊಟ್ಟೇ ಬಿಟ್ಟ ಕರ್ಣ! ನಿಧಿ- ಕರ್ಣ ಒಂದಾಗೋದು ಕನಸಾಗೋಯ್ತಾ?

Published : Dec 25, 2025, 03:57 PM IST

ತೇಜಸ್ ಮೋಸಗಾರ ಎಂದು ಭಾವಿಸಿರುವ ಅಜ್ಜಿ, ಹೃದಯಾಘಾತದಿಂದ ಆಸ್ಪತ್ರೆ ಸೇರಿದ್ದಾರೆ. ಅಲ್ಲಿ, ನಿತ್ಯಾಳೊಂದಿಗಿನ ಮದುವೆಯನ್ನು ಉಳಿಸಿಕೊಳ್ಳುವಂತೆ ಕರ್ಣನಿಂದ ಮಾತು ಪಡೆದುಕೊಳ್ಳುತ್ತಾರೆ. ನಿಧಿ ಇದಕ್ಕೆ ಒಪ್ಪಿಗೆ ಸೂಚಿಸುವುದರಿಂದ, ಕರ್ಣ ಈಗ ಕೊಟ್ಟ ಮಾತಿಗೆ ಸಿಕ್ಕಿಹಾಕಿಕೊಂಡಿದ್ದಾನೆ.

PREV
17
ಏನಿದು ಕರ್ಣ ಟ್ವಿಸ್ಟ್​?

ಕರ್ಣ ಸೀರಿಯಲ್​ನಲ್ಲಿ (Karna Serial) ಸದ್ಯ ತೇಜಸ್​ ಆಗಮನದಿಂದ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ ಎಂದೇ ಅಂದುಕೊಳ್ಳಲಾಗಿತ್ತು. ಆದರೆ ಎಲ್ಲವೂ ಸುಲಭವಾದಂತೆ ಕಾಣುತ್ತಿಲ್ಲ.

27
ತೇಜಸ್​ಗೆ ಸತ್ಯ

ಕರ್ಣನೇ ತನಗೆ ಕಿಡ್​ನ್ಯಾಪ್​ ಮಾಡಿರುವುದು ಎಂದು ತಿಳಿದಿದ್ದ ತೇಜಸ್​ಗೆ ಅಸಲಿ ವಿಷ್ಯ ಗೊತ್ತಾಗಿದೆ. ಆದರೆ ಕಿಡ್​ನ್ಯಾಪ್​ ಮಾಡಿರುವವರು ಯಾರು ಎನ್ನುವುದು ತಿಳಿದಿಲ್ಲ. ನಿತ್ಯಾ ತನ್ನಿಂದ ಗರ್ಭಿಣಿಯಾಗಿರುವ ವಿಷಯವೂ ತೇಜಸ್​ಗೆ ತಿಳಿಯುವುದರ ಜೊತೆಗೆ, ಈ ಗುಟ್ಟು ಇಡೀ ಮನೆಯಲ್ಲಿಯೂ ರಟ್ಟಾಗಿದೆ. ವಿಲನ್​ಗಳ ಕಿವಿಗೂ ಬಿದ್ದಿದೆ.

37
ಅಜ್ಜಿಗೆ ಹೃದಯಾಘಾತ

ಆದರೆ, ನಿತ್ಯಾ ಮತ್ತು ಕರ್ಣ ನಿಜವಾಗಿಯೂ ಮದುವೆಯಾಗಿದ್ದಾರೆ, ತೇಜಸ್​ ನಿತ್ಯಾಳಿಗೆ ಮೋಸ ಮಾಡಿದ್ದಾನೆ ಎಂದೇ ಅಂದುಕೊಂಡಿರುವ ಅಜ್ಜಿ, ತೇಜಸ್​ಗೆ ಮುಖ ತೋರಿಸಬೇಡ ಎಂದು ಹೊಡೆಯಲು ಹೋದಾಗ ಹೃದಯಾಘಾತವಾಗಿ ಆಸ್ಪತ್ರೆ ಸೇರಿದ್ದಾಳೆ.

47
ತೇಜಸ್​ ಬೇಡ ಎಂದ ಅಜ್ಜಿ

ನಿತ್ಯಾಳ ಸ್ಥಿತಿ ಅಜ್ಜಿಗೆ ತಿಳಿದಿಲ್ಲ. ತೇಜಸ್​ ಮತ್ತು ನಿತ್ಯಾ ಒಂದಾಗೋದು ಅವಳಿಗೆ ಇಷ್ಟವಿಲ್ಲ. ತೇಜಸ್​ ಮೋಸಗಾರ ಎಂದುಕೊಂಡಿದ್ದಾಳೆ. ಆದ್ದರಿಂದ ಕರ್ಣನಿಂದ ಒಂದು ಭಾಷೆಯನ್ನು ತೆಗೆದುಕೊಂಡು ಬಿಟ್ಟಿದ್ದಾಳೆ.

57
ಮಾತು ಕೊಡು ಎಂದ ಅಜ್ಜಿ

ನೀನು ನಿನ್ನ ಮತ್ತು ನಿತ್ಯಾಳ ಮದುವೆಯನ್ನು ಉಳಿಸಿಕೊಡುವ ಮಾತುಕೊಡು ಎಂದು ಹೇಳಿದ್ದಾಳೆ. ಭಾಷೆ ಕೊಡುವಂತೆ ಹೇಳಿದಾಗ, ಕರ್ಣನಿಗೆ ಏನು ಮಾಡಬೇಕು ಎಂದು ತಿಳಿಯಲಿಲ್ಲ. ಆದರೆ ಸಾವಿನ ಹಾದಿ ಹಿಡಿದಿರೋ ಅಜ್ಜಿಯ ಮಾತನ್ನೂ ಆತನಿಗೆ ಇಲ್ಲ ಎನ್ನಲು ಆಗಲಿಲ್ಲ.

67
ಒಪ್ಪಿಗೆ ಸೂಚಿಸಿದ ನಿಧಿ

ಆದರೆ, ಅಲ್ಲಿಯೇ ಇರುವ ನಿಧಿ, ಕರ್ಣನ ಕೈಯನ್ನು ತಂದು ಅಜ್ಜಿಯ ಕೈ ಮೇಲೆ ಇಟ್ಟುಬಿಟ್ಟಿದ್ದಾಳೆ. ಇದರ ಅರ್ಥ ಈಗ ಕರ್ಣ ಆ ಮಾತನ್ನು ಪಾಲಿಸಿಕೊಡಬೇಕಿದೆ. ಇದು ನಿಜವಾದರೆ ನಿಧಿ ಮತ್ತು ಕರ್ಣ ಒಂದಾಗುವುದು ಕನಸೇ ಆಗುತ್ತದೆ.

77
ಕರ್ಣ ಸಿಕ್ಕಾಕ್ಕೊಂಡನಾ?

ಇದೇನು ಮಾಡಿದಿರಿ ಎಂದು ಕರ್ಣ ಹೊರಬಂದಾಗ ನಿಧಿಯನ್ನು ಕೇಳಿದಾಗ, ನಿಮ್ಮ ಮದುವೆನೇ ಆಗಿಲ್ಲವಲ್ಲ, ಮದುವೆ ಉಳಿಸಿಕೊಳ್ಳುವ ಮಾತೆಲ್ಲಿ ಎಂದಿದ್ದಾಳೆ. ಆದರೆ ಅದು ಇಷ್ಟು ಸುಲಭನಾ? ಮಾತು ಕೊಟ್ಟು ಕರ್ಣ ಸಿಕ್ಕಾಕ್ಕೊಂಡನಾ?

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories