'ಕರ್ಣ' ಧಾರಾವಾಹಿಯಲ್ಲಿ, ಕುತಂತ್ರದಿಂದ ನಡೆಯುತ್ತಿರುವ ರಮೇಶ್ ಮತ್ತು ಮಾಲತಿಯ ಡಿವೋರ್ಸ್ ತಡೆಯಲು ಕರ್ಣ ಮತ್ತು ನಿಧಿ ಹೊಸ ಯೋಜನೆ ರೂಪಿಸಿದ್ದಾರೆ. ಡಿವೋರ್ಸ್ ಆದರೆ 25 ಕೋಟಿ ಆಸ್ತಿ ಕೈತಪ್ಪುತ್ತದೆ ಎಂದು ಮಗ ಸಂಜಯ್‌ನನ್ನು ಹೆದರಿಸಿ, ಅವನ ಮೂಲಕವೇ ವಿಚ್ಛೇದನವನ್ನು ನಿಲ್ಲಿಸಲು ಮುಂದಾಗಿದ್ದಾರೆ.
ಕರ್ಣ ಸೀರಿಯಲ್ (Karna Serial)ನಲ್ಲಿ ಸದ್ಯ ರಮೇಶ್ ಮತ್ತು ಮಾಲತಿ ಡಿವೋರ್ಸ್ ವಿಷ್ಯ ನಡೆಯುತ್ತಿದೆ. ನಯನತಾರಾ ಮತ್ತು ಭುವನೇಶ್ವರಿಯ ಕುತಂತ್ರದಿಂದಾಗಿ ಇವರಿಬ್ಬರ ನಡುವೆ ಬಿರುಕು ಮೂಡಿದೆ. ಬೇಡ ಬೇಡ ಎಂದರೂ ಕೇಳದೇ ರಮೇಶ್ ಮಾಲತಿಗೆ ಡಿವೋರ್ಸ್ ಕೊಡಲು ಮುಂದಾಗಿದ್ದಾನೆ.
26
ರಮೇಶ್ಗೆ ಉಪವಾಸ
ಇದನ್ನು ಹೇಗಾದರೂ ತಪ್ಪಿಸಬೇಕು ಎನ್ನೋದು ಕರ್ಣ ಮತ್ತು ನಿಧಿಯ ವಿಷ್ಯ. ಅದಕ್ಕಾಗಿ ಇನ್ನಿಲ್ಲದಂಥ ಪ್ರಯತ್ನ ಮಾಡುತ್ತಿದ್ದಾರೆ ಅವರು. ಇದಾಗಲೇ ರಮೇಶ್ಗೆ ಯಾರೂ ಊಟ ಹಾಕಿಲ್ಲ. ಊಟ ಬೇಕು ಎಂದರೆ ನೀನೇಮಾಡಿಕೊಂಡು ತಿನ್ನು ಎಂದಿದ್ದಾರೆ. ಇದರಿಂದ ರಮೇಶ್ ಕಕ್ಕಾಬಿಕ್ಕಿಯಾಗಿದ್ದು, ಪತ್ನಿ ಇಲ್ಲದಿದ್ದರೆ ಏನೇನು ಆಗಬಹುದು ಎನ್ನೋದನ್ನು ತಿಳಿದುಕೊಳ್ತಿದ್ದಾನೆ.
36
ಸಂಜಯ್ನ ಮನ ಒಲಿಕೆ
ಅದೇ ಇನ್ನೊಂದೆಡೆ, ಸಂಜಯ್ನ ಮನಸ್ಸನ್ನೂ ಒಲಿಸಿ ಈ ಡಿವೋರ್ಸ್ ಆಗೋದನ್ನು ತಡಿಯಬೇಕು ಎಂದು ಕರ್ಣ ಮತ್ತು ನಿಧಿ ಪ್ಲ್ಯಾನ್ ಮಾಡಿದ್ದಾರೆ. ಆದರೆ, ಏನು ಹೇಳಿದರೂ ಅದಕ್ಕೆ ಉಲ್ಟಾ ಹೇಳುವ ಸಂಜಯ್‌ನನ್ನು ಒಲಿಸಿಕೊಳ್ಳೋದು ಅ್ಟು ಸುಲಭವಲ್ಲವಲ್ಲ. ಆದರೂ ಛಲ ಬಿಟ್ಟಿಲ್ಲ ಕರ್ಣ-ನಿಧಿ.
ಸಂಜಯ್ಗೆ ಕೇಳುವ ಹಾಗೆ ಇಬ್ಬರೂ ಮಾತನಾಡಿಕೊಂಡಿದ್ದಾರೆ. ಅಪ್ಪ ಡಿವೋರ್ಸ್ ಕೊಟ್ಟರೆ ಏನಿಲ್ಲವೆಂದರೂ 20-25 ಕೋಟಿ ಪರಿಹಾರ ಕೊಡಬೇಕಾಗುತ್ತದೆ. ವಕೀಲರ ಫೀಸ್ಗೆ ಲಕ್ಷಲಕ್ಷ ಖರ್ಚಾಗುತ್ತದೆ. ಅದಕ್ಕೆ ಒಂದು ವರ್ಷ ಆಗುತ್ತೆ. ಆ ಆ ಸಮಯದಲ್ಲಿ ಸಂಜಯ್ಗೆ ಆಸ್ತಿ ಎಲ್ಲಾ ಬಂದಿರುತ್ತದೆ. ಆ ಆಸ್ತಿಯನ್ನು ಅಪ್ಪ ತೆಗೆದುಕೊಂಡು ಅಮ್ಮನಿಗೆ ಕೊಡಬೇಕಾಗುತ್ತದೆ. ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂದಿದ್ದಾನೆ.
56
ಸಂಜಯ್ ಶಾಕ್
ಇದನ್ನು ಕೇಳಿದ ಸಂಜಯ್ ಶಾಕ್ ಆಗೋಗಿದ್ದಾನೆ. ಅಲ್ಲಿಗೆ ಕರ್ಣ ಮತ್ತು ನಿಧಿ ಪ್ಲ್ಯಾನ್ ವರ್ಕ್ಔಟ್ ಆಗಿದೆ. ಅಪ್ಪ-ಅಮ್ಮ ಯಾವುದೇ ಕಾರಣಕ್ಕೂ ಡಿವೋರ್ಸ್ ಕೊಡಲಾರದು ಎಂದಿರೋಆತ, ಕರ್ಣನ ಕೈಹಿಡಿದಿದ್ದಾರೆ. ಅವರಿಬ್ಬರೂ ಡಿವೋರ್ಸ್ ತೆಗೆದುಕೊಳ್ಳುವುದು ಬೇಡ ಎಂದಿದ್ದಾನೆ.
66
ಹಣ ಕಂಡರೆ ಹೆಣನೂ...
ಅಲ್ಲಿಗೆ ಹಣ ಕಂಡರೆ ಹೆಣನೂ ಬಾಯ್ಬಿಡತ್ತೆ ಎನ್ನೋ ರೀತಿ, ಆಸ್ತಿಗಾಗಿಯೇ ಹಪಹಪಿಸ್ತಾ ಇರೋ ಸಂಜಯ್ ಅನ್ನು ಸುಲಭದಲ್ಲಿ ನಿಧಿ ಮತ್ತು ಕರ್ಣ ಬುಟ್ಟಿಗೆ ಹಾಕಿಕೊಂಡಿದ್ದಾರೆ. ಮುಂದೇನಾಗತ್ತೆ ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.