ಓಡಿ ಹೋಗಿ ಮದುವೆಯಾದ ಕನ್ನಡ ಯೂಟ್ಯೂಬರ್ ಜೋಡಿ; ಸ್ವಾತಿ ತವರಿಗೆ ರೀ-ಎಂಟ್ರಿ ಮಾಡಿಸಿದ ತಾರೇಶ್

Published : Aug 07, 2026, 02:59 PM IST

ಸಂಬಂಧಗಳಲ್ಲಿ ಭಿನ್ನಾಭಿಪ್ರಾಯ, ಮುನಿಸು, ಕೋಪ ಇರುವುದು ಸಹಜ. ಹೃದಯಸ್ಪರ್ಶಿ ಘಟನೆಯೊಂದನ್ನು ಕನ್ನಡದ ಜನಪ್ರಿಯ ಸೋಷಿಯಲ್ ಮೀಡಿಯಾ ಜೋಡಿಯಾದ ತಾರೇಶ್ ಮತ್ತು ಸ್ವಾತಿ ಹಂಚಿಕೊಂಡಿದ್ದು, ಗಂಡನ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

PREV
14
ಈ ಸಮಯದಲ್ಲಿ ನಾವೇ ತಲೆ ಬಗ್ಗಿಸೋಣ

ಸಂಬಂಧಗಳಲ್ಲಿ ಭಿನ್ನಾಭಿಪ್ರಾಯ, ಮುನಿಸು, ಕೋಪ ಇರುವುದು ಸಹಜ. ಆದರೆ ಕುಟುಂಬಕ್ಕಾಗಿ ಅಹಂಕಾರ ಬಿಟ್ಟು ಒಂದು ಹೆಜ್ಜೆ ಮುಂದೆ ಇಡುವವರು ಮಾತ್ರ ಸಂಬಂಧಗಳನ್ನು ಉಳಿಸಿಕೊಳ್ಳುತ್ತಾರೆ. ಅಂತಹ ಹೃದಯಸ್ಪರ್ಶಿ ಘಟನೆಯೊಂದನ್ನು ಕನ್ನಡದ ಜನಪ್ರಿಯ ಸೋಷಿಯಲ್ ಮೀಡಿಯಾ ಜೋಡಿಯಾದ ತಾರೇಶ್ ಮತ್ತು ಸ್ವಾತಿ ಹಂಚಿಕೊಂಡಿದ್ದು, ಗಂಡನ ನಡೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸಮಯದಲ್ಲಿ ನಾವೇ ತಲೆ ಬಗ್ಗಿಸೋಣ

ಸ್ವಾತಿಯ ತಂದೆಯ ಆರೋಗ್ಯ ಹದಗೆಟ್ಟಿದೆ ಎಂಬ ವಿಚಾರ ತಿಳಿದ ಬಳಿಕ, ಹಳೆಯ ಮನಸ್ತಾಪಗಳನ್ನು ಮರೆತು ತವರಿಗೆ ಹೋಗೋಣ ಎಂದು ತಾರೇಶ್ ಪತ್ನಿಗೆ ಸಲಹೆ ನೀಡಿದರು. ಅವರಿಗೂ ಇಬ್ಬರೇ ಹೆಣ್ಣುಮಕ್ಕಳು. ಈ ಸಮಯದಲ್ಲಿ ನಾವೇ ಹೋಗಬೇಕು. ನಾವು ಪ್ರೀತಿಸಿ ಮದುವೆಯಾಗಿದ್ದೀವಿ, ನಾವೇ ತಲೆ ಬಗ್ಗಿಸಿದರೆ ತಪ್ಪೇನಿಲ್ಲ. ಅಪ್ಪನ ಆರೋಗ್ಯ ಸರಿಯಿಲ್ಲದಾಗ ನಾವು ದೂರ ನಿಲ್ಲಬಾರದು" ಎಂದು ತಾರೇಶ್ ಹೇಳಿದ ಮಾತುಗಳು ಹಲವರ ಮನಸ್ಸು ಗೆದ್ದಿವೆ.

24
ಹಾಸನಕ್ಕೆ ಶಿಫ್ಟ್ ಆದ ಬಳಿಕ ಸಿಕ್ಕ ಅವಕಾಶ

ಮೊದಲು ಬೆಂಗಳೂರಿನಲ್ಲಿ ಕೆಲಸದ ಕಾರಣದಿಂದ ಆಗಾಗ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಹಾಸನಕ್ಕೆ ಬಂದ ನಂತರ ತವರ ಮನೆ ಹತ್ತಿರವಾದ ಕಾರಣ, ಸ್ವಾತಿಯನ್ನು ಕರೆದುಕೊಂಡು ಹೋಗಲು ತಾರೇಶ್ ನಿರ್ಧರಿಸಿದರು. ಇಷ್ಟೂ ದಿನ ಅಪ್ಪ-ಅಮ್ಮನನ್ನು ನೋಡಿಕೊಂಡಿದ್ದೀಯಾ. ಮದುವೆಯಾಗಿದೆ ಎಂದು ಅವರನ್ನು ಬಿಟ್ಟುಬಿಡಬೇಡ. ನಿನ್ನ ಕೈಲಾದ ಸಹಾಯ ಮಾಡು ಎಂದು ಪತ್ನಿಗೆ ಧೈರ್ಯ ತುಂಬಿದರು.

ತವರ ಮನೆಗೆ ಹೋದಾಗ ಭಾವನಾತ್ಮಕ ಕ್ಷಣ

ಮೊದಲು ಸ್ವಾತಿಯ ಅಕ್ಕನ ಜೊತೆ ಮತ್ತೆ ಸಂಪರ್ಕ ಆರಂಭವಾಯಿತು. ನಂತರ ನೇರವಾಗಿ ತವರ ಮನೆಗೆ ಹೋದಾಗ ಮನೆಯವರ ಪ್ರತಿಕ್ರಿಯೆ ಭಾವುಕವಾಗಿತ್ತು. ಮಗಳು ಮತ್ತು ಅಳಿಯ ಮನೆಗೆ ಬಂದ ಸಂತೋಷವನ್ನು ಸ್ವಾತಿಯ ತಾಯಿ ಮುಚ್ಚಿಡಲಾಗಲಿಲ್ಲ. ಹೊರಗೆ ಹೆಚ್ಚು ಮಾತನಾಡದಿದ್ದರೂ, ಅವರ ಮುಖದ ನಗು ಮತ್ತು ನಾಚಿಕೆ ಕುಟುಂಬದವರಿಗೆ ಹೊಸ ಭರವಸೆ ನೀಡಿತು.

34
ಪ್ರೀತಿಸಿ ಮದುವೆಯಾದ ಜೋಡಿ

ತಾರೇಶ್ ಮತ್ತು ಸ್ವಾತಿ ಪಿಯುಸಿ ಓದುತ್ತಿದ್ದಾಗಲೇ ಪರಿಚಯವಾಗಿ ನಂತರ ಪ್ರೀತಿಸಿದರು. ಆದರೆ ಈ ಪ್ರೀತಿಗೆ ಸ್ವಾತಿ ಮನೆಯವರ ವಿರೋಧ ವ್ಯಕ್ತವಾಯಿತು. ಕೊನೆಗೆ ಇಬ್ಬರೂ ದೇವಸ್ಥಾನದಲ್ಲಿ ಸರಳವಾಗಿ ವಿವಾಹವಾಗಿದ್ದರು. ಮದುವೆಯಾದ ಬಳಿಕವೂ ಸ್ವಾತಿಯ ತಂದೆ-ತಾಯಿ ಈ ಸಂಬಂಧವನ್ನು ಒಪ್ಪಿಕೊಂಡಿರಲಿಲ್ಲ. ಹಲವು ವರ್ಷಗಳಿಂದ ಮಾತುಕತೆಯೂ ಇರಲಿಲ್ಲ ಎಂದು ಈ ಜೋಡಿ ಹೇಳಿಕೊಂಡಿದೆ.

44
ಕೆಲಸಕ್ಕಾಗಿ ಸಾಕಷ್ಟು ಹೋರಾಟ

ತಾರೇಶ್ ಅವರ ಬದುಕೂ ಸುಲಭವಾಗಿರಲಿಲ್ಲ. ಅನೇಕ ಕಂಪನಿಗಳಿಗೆ ಅರ್ಜಿ ಸಲ್ಲಿಸಿದರೂ ಉದ್ಯೋಗ ಸಿಗಲಿಲ್ಲ. ಕೊನೆಗೆ ಕೊಯಂಬತ್ತೂರಿನಲ್ಲಿ ಮೊದಲ ಉದ್ಯೋಗ ದೊರೆಯಿತು. ಅಲ್ಲಿಂದ ಆರಂಭವಾದ ಅವರ ಪಯಣ ಇಂದು ಉತ್ತಮ ಉದ್ಯೋಗದ ಜೊತೆಗೆ ಯಶಸ್ವಿ ಕಂಟೆಂಟ್ ಕ್ರಿಯೇಟರ್ ಆಗಿಯೂ ಬೆಳೆಸಿದೆ. ತಾರೇಶ್ ಮತ್ತು ಸ್ವಾತಿ ಈ ಅನುಭವವನ್ನು 'ನ್ಯೂಸೋ ನ್ಯೂಸು' ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories