ಕರ್ಣ ಸೀರಿಯಲ್ ಕುತೂಹಲಕಾರಿ ಘಟ್ಟ ತಲುಪಿದ್ದು, ತನ್ನೆಲ್ಲಾ ಸಂಕಷ್ಟಕ್ಕೆ ರಮೇಶ್ ಕಾರಣ ಎಂದು ತಿಳಿದ ಕರ್ಣ ಆತನನ್ನು ಕಾಡಿನಲ್ಲಿ ಬಿಟ್ಟು ಬರುತ್ತಾನೆ. ಇದೇ ವೇಳೆ, ಕರ್ಣನೇ ರಮೇಶ್‌ನ ಮಗ ಎಂಬ ಆಘಾತಕಾರಿ ಸತ್ಯವನ್ನು ನಯನತಾರಾ ಬಯಲು ಮಾಡುತ್ತಾಳೆ. ಇನ್ನೊಂದೆಡೆ, ನಿತ್ಯಾಳಿಗೆ ಕರ್ಣನ ಮೇಲೆ ಪ್ರೀತಿ ಮೂಡಿದೆ.
ಕರ್ಣ ಸೀರಿಯಲ್ (Karna Serial) ಇದೀಗ ಕುತೂಹಲದ ಹಂತ ತಲುಪಿದೆ. ನಿಧಿ ಮತ್ತು ಕರ್ಣನನ್ನು ದೂರ ಮಾಡಲು ರಮೇಶ್ ಇಲ್ಲಿಯವರೆಗೆ ಮಾಡಿದ ಪ್ಲ್ಯಾನ್ ಎಲ್ಲವೂ ಸಕ್ಸಸ್ ಆಗಿ ಹೋಗಿದೆ. ದೂರ ದೂರ ಇದ್ದು ನಿಧಿ ಮತ್ತು ಕರ್ಣ ವಿರಹ ವೇದನೆಯಿಂದ ಒದ್ದಾಡುತ್ತಿದ್ದಾರೆ.
27
ರಮೇಶ್ ಕುತಂತ್ರದ ಅರಿವು
ಆದರೆ ನಿಧಿಗೆ ಹೊಸ ಮನೆ ಕೊಟ್ಟು, ಅವರನ್ನು ಬೀದಿಗೆ ತಂದಿರುವುದು ರಮೇಶ್ ಎಂದು ಕರ್ಣನಿಗೆ ತಿಳಿದಿದೆ. ಇದರ ಜೊತೆಗೆ, ಆಸ್ಪತ್ರೆಯಲ್ಲಿ ನಕಲಿ ಔಷಧ ಇಟ್ಟು ತನ್ನನ್ನು ಜೈಲಿಗೆ ಸೇರುವ ಹಾಗೆ ಮಾಡಿರುವ ಹಿಂದೆಯೂ ಆತನದ್ದೇ ಕೈವಾಡ ಇದೆ ಎನ್ನುವುದು ತಿಳಿದಿದೆ.
37
ನಿಧಿ ಕಿಡ್ನ್ಯಾಪ್
ಇದರ ನಡುವೆಯೇ, ಅತ್ತ ನಿಧಿ ಮತ್ತು ಶಾಂತಿಯನ್ನು ರಮೇಶ್‌ನ ಕಿತಾಪತಿ ಮೇರೆಗೆ ಕಿಡ್ನ್ಯಾಪ್ ಮಾಡಲಾಗಿತ್ತು. ಈ ವಿಷಯ ಕರ್ಣನಿಗೆ ತಿಳಿದು ಅವರನ್ನು ರಕ್ಷಿಸಿದ್ದಾನೆ.
ಇನ್ನು ಸುಮ್ಮನೇ ಇರದ ಕರ್ಣ, ರಮೇಶ್ನನ್ನು ಕರೆದುಕೊಂಡು ಕಾಡಿನ ಮಧ್ಯೆ ಹೋಗಿದ್ದಾನೆ. ನಿಮ್ಮೆಲ್ಲಾ ವಿಷಯವೂ ನನಗೆ ಗೊತ್ತಾಗಿದೆ. ಇನ್ನು ನಾನು ಆಡಿಸುತ್ತೇನೆ, ನೀವು ಆಡಬೇಕು ಎಂದಿರೋ ಕರ್ಣ, ಸುರಿಯುವ ಮಳೆಯ ನಡುವೆ ರಮೇಶ್ನನ್ನು ಕಾಡಿನ ಮಧ್ಯೆ ಬಿಟ್ಟು ಬಂದಿದ್ದಾನೆ.
57
ಜನ್ಮ ರಹಸ್ಯ ಬಯಲು
ಇಲ್ಲಿಯವರೆಗೆ ಕರ್ಣನನ್ನು ಅನಾಥ ಮಗು, ಡಸ್ಟ್ಬಿನ್ನಲ್ಲಿ ಸಿಕ್ಕ ಮಗು ಎಂದೇ ಹೇಳಲಾಗಿತ್ತು. ಆದರೆ ಈಗ ಅಸಲಿಯತ್ತನ್ನು ನಯನತಾರಾ ಬಯಲು ಮಾಡಿದ್ದಾಳೆ. ನೀನು ಇಂದು ಕಾಡಿನ ಮಧ್ಯೆ ನಿಲ್ಲುವುದಕ್ಕೆ ಕಾರಣ ನೀನು ಹೆತ್ತ ಮಗ ಕರ್ಣನೇ ಕಾರಣ ಎಂದಿದ್ದಾಳೆ. ಅಲ್ಲಿಗೆ ಕರ್ಣನ ಜನ್ಮ ರಹಸ್ಯ ಬಯಲಾಗಿದೆ.
67
ಕರ್ಣ ಅನಾಥನಲ್ಲ
ಕರ್ಣ ಅನಾಥ ಅಲ್ಲ. ಆತನ ನಿಜವಾದ ತಂದೆ ವಿಲನ್ ರಮೇಶ್ ಎನ್ನುವುದು ತಿಳಿದಿದೆ. ಆದರೆ ಈ ವಿಷಯ ಸದ್ಯ ಕರ್ಣನಿಗಾಗಲೀ, ರಮೇಶ್ಗಾಗಲೀ ತಿಳಿದಿಲ್ಲ. ಇನ್ನು ಸೀರಿಯಲ್ ಇನ್ನಷ್ಟು ಟ್ವಿಸ್ಟ್ ಪಡೆದುಕೊಳ್ಳಲಿದೆ.
77
ನಿತ್ಯಾಗೆ ಲವ್
ಅದೇ ಇನ್ನೊಂದೆಡೆ, ನಿತ್ಯಾಳಿಗೆ ಕರ್ಣ ತೋರಿಸ್ತಿರೋ ಪ್ರೀತಿಯಿಂದ ಆತನ ಮೇಲೆ ಲವ್ ಶುರುವಾಗಿದೆ. ಪದೇ ಪದೇ ಕರ್ಣ ನಮ್ಮ ಮಗು ನಮ್ಮ ಮಗು ಅಂತಿರೋದ್ರಿಂದ ಎಲ್ಲೋ ಒಂದು ಕಡೆ ಕರ್ಣನಿಗೂ ತನ್ನ ಮೇಲೆ ಇಷ್ಟ ಇದೆ ಎಂದೇ ನಿತ್ಯಾ ಅಂದುಕೊಂಡಂತಿದೆ. ಇದು ಇನ್ಯಾವ ರೂಪ ಪಡೆಯುತ್ತದೆಯೋ ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.