'ಕರ್ಣ' ಧಾರಾವಾಹಿಯಲ್ಲಿ, ಕರ್ಣನ ನಿಜವಾದ ತಾಯಿ ಭುವನೇಶ್ವರಿಯೇ ಆತನಿಗೆ ಅರಿಯದೇ ಕಂಟಕವಾಗಿದ್ದಾಳೆ. ತನ್ನ ಶತ್ರು ರಮೇಶನ ಮಗನೆಂದು ಭಾವಿಸಿ, ಕರ್ಣನ ಆಸ್ಪತ್ರೆಯನ್ನು ತನ್ನ ವಶಕ್ಕೆ ಪಡೆದು, ಆತನನ್ನು ನಾಶಮಾಡಲು ಸಂಚು ರೂಪಿಸಿದ್ದಾಳೆ.
ಕರ್ಣ ಸೀರಿಯಲ್ನಲ್ಲಿ (Karna Serial)ನಲ್ಲಿ ಒಂದೆಡೆ ಕರ್ಣ, ನಿಧಿಯ ಅಪ್ಪ-ಅಮ್ಮನನ್ನು ಕೊಲೆ ಮಾಡಿದವರು ಯಾರು ಎನ್ನುವ ಬಗ್ಗೆ ಹುಡುಕಾಟ ನಡೆಸುತ್ತಿದ್ದರೆ, ಅದೇ ಇನ್ನೊಂದೆಡೆ ಕರ್ಣನ ಹೆತ್ತ ಅಮ್ಮನೇ ಅರಿಯದೇ ಕರ್ಣನ ಕುಟುಂಬವನ್ನು ನಾಶ ಮಾಡುವ ಪಣ ತೊಟ್ಟಿದ್ದಾಳೆ.
26
ಸಾಲದ ಬಾಧೆ
ಅಜ್ಜನಿಗೆ ಕೊಟ್ಟ ಮಾತಿನಿಂದ ಆಸ್ಪತ್ರೆಯನ್ನು ಉಳಿಸಿಕೊಳ್ಳುವ ಸಲುವಾಗಿ ಕರ್ಣ ಸಾಲದ ಶೂಲೆಯಲ್ಲಿ ಸಿಲುಕಿದ್ದ. ಆಗ ಕರ್ಣನ ಅಮ್ಮ ಭುವನೇಶ್ವರಿ ರೌಡಿಗಳ ಮೂಲಕ ಆತನಿಗೆ ಸಹಾಯ ಮಾಡಿದ್ದಳು. ಆದರೆ, ಆಕೆಗೆ ಕರ್ಣ ತನ್ನ ಮಗ ಎನ್ನುವುದು ತಿಳಿದಿಲ್ಲ, ಬದಲಿಗೆ ಆತನ ಮೇಲೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದಾಳೆ ಭುವನೇಶ್ವರಿ.
36
ಹೊಂಚು ಹಾಕ್ತಿರೋ ಅಮ್ಮ
ಅಂತೂ-ಇಂತೂ ಕರ್ಣ ಸಾಲವನ್ನು ತೀರಿಸಿದ್ದಾನೆ. ಇದರ ಹೊರತಾಗಿಯೂ ರಮೇಶನ ಮೇಲಿನ ದ್ವೇಷದಿಂದ ಆತನ ಮಗ ಎಂದುಕೊಂಡಿರುವ ಕರ್ಣನನ್ನೂ ಮುಗಿಸಲು ಸ್ವಂತ ಅಮ್ಮನೇ ಹೊಂಚು ಹಾಕುತ್ತಿದ್ದಾಳೆ. ಇತ್ತ ಕರ್ಣನಿಗೂ ತನ್ನ ಪ್ರಾಣಕ್ಕೆ ಕುತ್ತು ತರಲು ಹೊರಟವಳು ತನ್ನ ಅಮ್ಮನೇ ಎನ್ನುವ ಸತ್ಯ ಗೊತ್ತಿಲ್ಲ.
ಇದೀಗ ಇಡೀ ಆಸ್ಪತ್ರೆಯನ್ನು ಭುವನೇಶ್ವರಿ ತನ್ನ ಹೆಸರಿಗೆ ಮಾಡಿಕೊಂಡಿದ್ದಾಳೆ. ಕರ್ಣ ಮತ್ತು ನಿಧಿ ಆಸ್ಪತ್ರೆಗೆ ಬಂದಾಗ ಅವರಿಗೆ ಶಾಕ್ ಆಗಿದೆ. ಇಡೀ ಆಸ್ಪತ್ರೆಯನ್ನು ಭುವನೇಶ್ವರಿ ತನ್ನ ಹೆಸರಿಗೆ ಮಾಡಿಕೊಂಡಿರುವುದು ತಿಳಿದಿದೆ.
56
ಸತ್ಯ ತಿಳಿಯತ್ತಾ?
ವಿಧಿ ಅಮ್ಮ-ಮಗನನ್ನು ಎದುರು ಬದುರಿಗೆ ತಂದಿದೆ. ಆದರೆ ಕರ್ಣನಿಗಾಗಲೀ, ಭುವನೇಶ್ವರಿಗಾಗಲೀ ತಾವು ಅಮ್ಮ-ಮಗ ಎನ್ನುವ ಸತ್ಯ ಗೊತ್ತಿಲ್ಲ. ಮುಂದೇನಾಗುತ್ತದೆ ಎನ್ನುವ ಕುತೂಹಲ ಸದ್ಯಕ್ಕಿದೆ.
66
ಮುಂದೇನಾಗುತ್ತೆ?
ಕರ್ಣನೇ ತನ್ನ ಮಗ ಎನ್ನುವುದು ಭುವನೇಶ್ವರಿಗೆ ತಿಳಿಯತ್ತಾ? ಕರ್ಣ ಸದ್ಯ ರಮೇಶ್ನಿಂದಲೂ ಸಂಕಷ್ಟದಲ್ಲಿ ಇದ್ದಾನೆ ಎನ್ನುವ ಅರಿವು ಆಕೆಗೆ ಆಗತ್ತಾ? ಇಲ್ಲಿಯವರೆಗೆ ತೆರೆಮರೆಯಲ್ಲಿ ಇದ್ದ ಭುವನೇಶ್ವರಿನೇ ತನ್ನ ಅಮ್ಮ ಎನ್ನೋದು ಕರ್ಣನಿಗೆ ತಿಳಿಯತ್ತಾ ಎನ್ನುವುದನ್ನು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.