ಜೀ ಕನ್ನಡದಲ್ಲಿ ಜಗದ್ಧಾತ್ರಿ ಸೀರಿಯಲ್ ಪ್ರೊಮೋ ಇದಾಗಲೇ ಸಾಕಷ್ಟು ಕುತೂಹಲ ಕೆರಳಿಸಿದೆ. ನಟಿ ಮೋಕ್ಷಿತಾ ಪೈ ಅಭಿನಯದ ಈ ಸೀರಿಯಲ್ ಯಾವಾಗ ಆರಂಭ ಆಗುತ್ತದೆ ಎಂದು ವೀಕ್ಷಕರು ಕಾಯುತ್ತಲೇ ಇದ್ದರು.
26
ಹೊಸ ಸೀರಿಯಲ್ಗೆ ದಾರಿ
ಇದಕ್ಕಾಗಿ ಯಾವ ಸೀರಿಯಲ್ ಅಂತ್ಯ ಆಗುತ್ತದೆ ಎನ್ನುವ ಬಗ್ಗೆ ಕುತೂಹಲ ಹೆಚ್ಚಿತ್ತು. ಅಮೃತಧಾರೆ ಸೀರಿಯಲ್ ಕೆಲವು ದಿನಗಳ ಹಿಂದೆ ಅಂತ್ಯವಾಗುತ್ತದೆ ಎಂದೇಅಂದುಕೊಳ್ಳಲಾಗಿತ್ತು. ಆದರೆ ದಿಢೀರ್ ಎಂದು ಭೂಮಿಕಾಳಿಗೆ ಕ್ಯಾನ್ಸರ್ ರೋಗ ಬರಿಸಿ, ಸದ್ಯ ಅಂತೂ ಈ ಸೀರಿಯಲ್ ಮುಗಿಯಲ್ಲ ಎನ್ನುವುದು ಕನ್ಫರ್ಮ್ ಆಗಿದೆ.
36
ಅದಲ್ಲ, ಇದಲ್ಲ, ಮತ್ತೊಂದು
ಅದೇ ಇನ್ನೊಂದೆಡೆ ಬ್ರಹ್ಮಗಂಟು ಸೀರಿಯಲ್ (Brahmagantu Serial) ಮುಗಿಯುವ ಹಂತಕ್ಕೆ ಬಂದಿದೆ. ದಿಶಾನೇ ದೀಪಾ ಎನ್ನುವುದು ಚಿರುಗೆ ತಿಳಿದಿದೆ. ಸೌಂದರ್ಯಳ ಅಸಲಿ ಮುಖ ತಿಳಿಯುವುದು ಹೆಚ್ಚು ಹೊತ್ತು ಬೇಕಿಲ್ಲ.ಆದ್ದರಿಂದ ಈ ಸೀರಿಯಲ್ ಮುಗಿಯತ್ತೆ ಎಂದುಕೊಳ್ಳಲಾಗಿತ್ತು. ಆದರೆ ಇದು ಕೂಡ ಸದ್ಯ ಮುಗಿಯುವ ಹಾಗೆ ಕಾಣಿಸುತ್ತಿಲ್ಲ.
ಆದ್ದರಿಂದ ಯಾವ ಸೀರಿಯಲ್ ಮುಗಿಯಲಿದೆ ಎನ್ನುವ ಬಗ್ಗೆ ವೀಕ್ಷಕರು ತೀವ್ರ ಕುತೂಲಹದಿಂದ ಕಾಯುತ್ತಿದ್ದರು. ಆದರೆ ಇದೀಗ ಈ ವಿಷಯ ಬಹಿರಂಗಗೊಂಡಿದೆ. ಈಗ ಮುಗಿಯುತ್ತಿರುವ ಸೀರಿಯಲ್ ಎಂದರೆ ಶ್ರಾವಣಿ ಸುಬ್ರಹ್ಮಣ್ಯ (Shravani Subramanya Serial).
56
ವೀಕ್ಷಕರ ನಿರೀಕ್ಷೆಗೆ ಮೀರಿ ಮುಕ್ತಾಯ
ಅಷ್ಟಕ್ಕೂ ಈ ಸೀರಿಯಲ್ ಇಷ್ಟು ಬೇಗ ಮುಗಿಯತ್ತೆ ಎಂದು ವೀಕ್ಷಕರು ಅಂದುಕೊಂಡಿರಲಿಲ್ಲ. ಇನ್ನೇನು ಮುಗಿಯತ್ತೆ ಎನ್ನುವಾಗ ಹೊಸ ಪಾತ್ರದ ಎಂಟ್ರಿ ಆಗಿದ್ದು, ಸುಬ್ರಹ್ಮಣ್ಯ ಜೊತೆ ಮದುವೆಗೂ ಸಿದ್ಧ ಮಾಡಲಾಗಿತ್ತು. ಆದರೆ ಇದೀಗ ಎಲ್ಲವೂ ಸುಸೂತ್ರವಾಗಿ ಸೀರಿಯಲ್ ಮುಗಿಸಲಾಗುತ್ತಿದೆ.
66
ಅನಿರೀಕ್ಷಿತ ಮುಕ್ತಾಯ
ಶ್ರಾವಣಿ ಮತ್ತು ಸುಬ್ರಹ್ಮಣ್ಯ ಇಬ್ಬರೂ ಒಂದಾಗಿ ಸೀರಿಯಲ್ ಹ್ಯಾಪ್ಪಿ ಎಂಡಿಂಗ್ ಆಗುತ್ತಿದೆ. ಅಂದಹಾಗೆ ಈ ಸೀರಿಯಲ್ 2024ರ ಮಾರ್ಚ್ 18ರಿಂದ ಆರಂಭವಾಗಿತ್ತು. ಇದಾಗಲೇ ಎರಡು ವರ್ಷ ಪೂರೈಸಿದೆ ಸೀರಿಯಲ್. ಇದೀಗ ಅಂತಿಮ ಹಂತಗಳು ಪ್ರಸಾರ ಆಗಲಿದ್ದು, ಆಗಸ್ಟ್ ಮೊದಲ ವಾರದಲ್ಲಿ ಧಾರಾವಾಹಿ ಮುಕ್ತಾಯವಾಗಲಿದೆ ಎನ್ನುವ ಮಾಹಿತಿ ಬಂದಿದೆ. ಆರಂಭದಲ್ಲಿ ಸಿಕ್ಕಾಪಟ್ಟೆ ಟಿಆರ್ಪಿ ಕಂಡಿದ್ದ ಸೀರಿಯಲ್ ಬರಬರುತ್ತಾ ವೀಕ್ಷಕರ ಸಂಖ್ಯೆಯಲ್ಲಿ ಕುಸಿತ ಕಂಡುಬಂತು. ಇದಕ್ಕೆ ಒಂದು ಕಾರಣ, ವೇಳೆಯ ಬದಲಾವಣೆ ಎಂದು ಹೇಳಲಾಗುತ್ತಿದೆಯಾದರೂ, ಕಾರಣಗಳು ಬೇರೆ ಬೇರೆ ಇರಬಹುದು. ಅದೇನೆ ಇದ್ದರೂ ಅನಿರೀಕ್ಷಿತವಾಗಿ ಇದನ್ನು ಮುಕ್ತಾಯ ಮಾಡಲಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.