Bigg Boss ಸ್ಪರ್ಧಿಗಳಿಗೆ ಬಿಗ್​ ಸರ್​ಪ್ರೈಸ್​ ಕೊಟ್ಟ ರಾಖಿ ಸಾವಂತ್​! ಡ್ರೆಸ್​ ನೋಡಿ ಎಲ್ಲರೂ ಸುಸ್ತು

Published : Feb 09, 2026, 05:42 PM IST

ವಿವಾದಗಳ ರಾಣಿ ರಾಖಿ ಸಾವಂತ್  ಬಿಗ್‌ಬಾಸ್ ಮನೆಗೆ ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ. ಆದಿಲ್ ಖಾನ್ ಜೊತೆಗಿನ ವಿವಾದ, ಮುಕೇಶ್ ಅಂಬಾನಿ ಬಗ್ಗೆ ಹೇಳಿಕೆಗಳ ನಂತರ, ಇದೀಗ ಬಿಗ್‌ಬಾಸ್ ಮನೆಯಲ್ಲಿ ಆಟವನ್ನೇ ಬದಲಾಯಿಸುವುದಾಗಿ ಹೇಳಿ ಪ್ರವೇಶಿಸಿದ್ದಾರೆ.

PREV
16
ಬಿಗ್​ಬಾಸ್​ಗೆ ಡ್ರಾಮಾ ಕ್ವೀನ್​

ವಿವಾದಗಳ ರಾಣಿ, ಡ್ರಾಮಾ ಕ್ವೀನ್​ ರಾಖಿ ಸಾವಂತ್ (Rakhi Sawant) ಬಗ್ಗೆ ಎಲ್ಲರಿಗೂ ತಿಳಿದದ್ದೇ. ಮೈಸೂರಿನ ಯುವಕ ಆದಿಲ್​ ಖಾನ್​ ಅವರನ್ನು ಮದುವೆಯಾಗಿ ಫಾತಿಮಾ ಆಗಿ ಸೈಲೆಂಟ್​ ಆಗಿ, ಮತ್ತೆ ಪಾಕಿಸ್ತಾನದ ಧರ್ಮಗುರುವನ್ನು ಮದುವೆಯಾಗಲು ಹೋಗುವುದಾಗಿ ಹೇಳಿ, ಮೆಕ್ಕಾಕ್ಕೂ ಭೇಟಿ ಕೊಟ್ಟು ಇದೀಗ ಮತ್ತದೇ ಪ್ಲಾಸ್ಟಿಕ್​ ಸರ್ಜರಿ ದೇಹವನ್ನು ಪ್ರದರ್ಶಿಸುತ್ತಾ ಇರುವ ರಾಖಿ ಸಾವಂತ್​ ಇದೀಗ ಬಿಗ್​ಬಾಸ್​​ ಮನೆಗೆ ಭೇಟಿ ಕೊಟ್ಟು ಬಿಗ್​ ಸರ್​ಪ್ರೈಸ್​ ನೀಡಿದ್ದಾರೆ.

26
ಪತಿಯ ವಿರುದ್ಧ ದೂರು

ರಾಖಿ ಅವರು, ತಮ್ಮ ಪತಿ ಆದಿಲ್ ದುರಾನಿ (Adil Durrani) ವಿರುದ್ಧ ಕ್ರಿಮಿನಲ್ ಕೇಸ್​​ ದಾಖಲಿಸಿದ್ದರು. ಇದನ್ನು ಬಾಂಬೆ ಹೈಕೋರ್ಟ್ ಈಚೆಗೆ ರದ್ದುಗೊಳಿಸಿದೆ. ಜೊತೆಗೆ, ಆದಿಲ್ ಕೂಡ ರಾಖಿ ವಿರುದ್ಧ ನೀಡಿದ್ದ ದೂರನ್ನೂ ವಜಾಗೊಳಿಸಲಾಗಿದೆ. ಇಬ್ಬರೂ ಸೌಹಾರ್ದಯುತವಾಗಿ ಸಮಸ್ಯೆಯನ್ನು ಬಗೆಹರಿಸಿಕೊಂಡಿರೋ ಹಿನ್ನೆಲೆಯಲ್ಲಿ ಕೇಸ್ ವಜಾ ಆಗಿದೆ.

36
ಮುಕೇಶ್​ ಅಂಬಾನಿಯಿಂದ ಮಗು

ಇದರ ಬೆನ್ನಲ್ಲೇ, ಮೊನ್ನೆಯಷ್ಟೇ ಮದುಮಗಳಂತೆ ಶೃಂಗಾರ ಮಾಡಿಕೊಂಡು, ಮುಕೇಶ್​ ಅಂಬಾನಿಯನ್ನು ಮದುವೆಯಾಗುತ್ತೇನೆ ಎಂದು ಹುಚ್ಚುಚ್ಚಾಗಿ ಆಡಿದ್ದವರು ಇದೇ ರಾಖಿ ಸಾವಂತ್​. ನನ್ನ ಬ್ಲೌಸ್‌ 24 ಕ್ಯಾರೆಟ್‌ ಗೋಲ್ಡ್‌ನಿಂದ ಕೂಡಿದೆ. ನೀತಾ ಅಂಬಾನಿ ಬಂಗಾರದಲ್ಲಿ ಏನಾದರೂ ಮಿಕ್ಸ್‌ ಆಗಿರಬಹುದು, ಆದರೆ ನನ್ನ ಗೋಲ್ಡ್‌ನಲ್ಲಿ ಯಾವುದೂ ಮಿಸ್‌ ಇಲ್ಲ. ಮುಕೇಶ್‌ ಅಂಬಾನಿ ಅವರನ್ನು ನಾನು ಮದುವೆ ಆದರೆ, ಚೆನ್ನಾಗಿ ನೋಡಿಕೊಳ್ತೀನಿ. ನೀತು ಅಂಬಾನಿ ಅವರಿಗೆ ನಾನು ಸವತಿ ಆಗುತ್ತೇನೆ. ಅವರಿಂದ ನನಗೊಂದು ಮಗು ಬೇಕು ಎಂದಿದ್ದರು.

46
ಮೂರು ಮದುವೆ

ನನಗೆ ಒಂಟಿಯಾಗಿದ್ದು ಸಾಕಾಗಿದೆ. ನಾನು ಕೊನೆಗೂ ವಧು ಆಗಿದ್ದೇನೆ, ರಿಯಲ್‌ ಆಗಿ ಮದುವೆ ಆಗುತ್ತಿದ್ದೇನೆ. ಖ್ಯಾತ ಚಾನೆಲ್‌ನಲ್ಲಿ ಮದುವೆ ನಡೆಯಲಿದೆ. ಇದು ನನ್ನ ಮೂರನೇ ಮದುವೆ. ನನ್ನ ಮದುವೆ ಆಗುವ ಹುಡುಗನಿಗೂ ಕೂಡ ಮೂರು ಮದುವೆ ಆಗಿದೆ. ಆ ಹುಡುಗನಿಗೆ ಈಗಾಗಲೇ ಹಿಂದು, ಕ್ರಿಶ್ಚಿಯನ್‌, ಮುಸ್ಲಿಂ ಜೊತೆಯಲ್ಲಿ ಮದುವೆ ಆಗಿದೆ ಎಂದೆಲ್ಲಾ ಹೇಳಿದ್ದ ರಾಖಿ ಸಾವಂತ್​ ಇದೀಗ ಮರಾಠಿಯ ಬಿಗ್​ಬಾಸ್​ಗೆ ವೈಲ್ಡ್​ಕಾರ್ಡ್​ ಎಂಟ್ರಿ ಕೊಟ್ಟಿದ್ದಾರೆ.

56
ಡ್ರೆಸ್​ ಬ್ಯಾಲೆನ್ಸ್​ಗೆ ಸಿಬ್ಬಂದಿ!

ಮತ್ತದೇ ವಿಚಿತ್ರ ಡ್ರೆಸ್​ನಿಂದ ಬಂದ ರಾಖಿ ಅವರನ್ನು ಬ್ಯಾಲೆನ್ಸ್ ಮಾಡಲು ಕೆಲವರು ಬಂದಿದ್ದರು. ಅವರ ವೇಷವನ್ನು ನೋಡಿದ ಮಗುವೊಂದು ಕಿರುಚಿಕೊಂಡ ಘಟನೆಯೂ ನಡೆದಿದೆ. ಅದೇನೇ ಇದ್ದರೂ ಮರಾಠಿ ಬಿಗ್​ಬಾಸ್​​ನಲ್ಲಿ ನಟಿ ಏನು ಮಾಡುತ್ತಾರೆ ಎಂದು ನೋಡಬೇಕಿದೆ.

66
ಆಟ ಬದಲಾಯಿಸೋ ರಾಖಿ

"ರಾಖಿ ಬರುತ್ತಿದ್ದಾಳೆ, ಅವಳು ಆಟ ಬದಲಾಯಿಸುತ್ತಿದ್ದಾಳೆ. ನಾನು ಇಲ್ಲದೆ ಬಿಗ್ ಬಾಸ್ ಅಪೂರ್ಣ. ನಾನು ಮನೆಗೆ ಪ್ರವೇಶಿಸಿದಾಗ, ಎಲ್ಲರ ಧ್ವನಿ ಮಾಯವಾಗುತ್ತದೆ. ರಾಖಿ ಸಾವಂತ್ ಪ್ರವೇಶಿಸಿದಾಗ, ಅವಳ ಆಸೆ ಆಳುತ್ತದೆ. ನಾನು ಅಲ್ಲಿ ಸಂಪೂರ್ಣ ಅವ್ಯವಸ್ಥೆಯನ್ನು ಸೃಷ್ಟಿಸಲಿದ್ದೇನೆ. ನನ್ನ ವಿವಿಧ ವೇಷಭೂಷಣಗಳು ಮತ್ತು ನನ್ನ ಆಟವನ್ನು ನೀವು ನೋಡುತ್ತೀರಿ. ಎಲ್ಲರಿಗೂ ಬಿಗ್ ಬಾಸ್ ವೇದಿಕೆ ಸಿಗುವುದಿಲ್ಲ - ನನಗೆ ಅದು ಸಿಕ್ಕಿದೆ, ಆದ್ದರಿಂದ ನಾನು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು, ಅದು ನನ್ನ ಮಂತ್ರ ಎಂದು ಹೇಳುತ್ತಲೇ ಬಿಗ್​ಬಾಸ್​ ಮನೆಗೆ ಕಾಲಿಟ್ಟಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories