ಬಿಗ್ ಬಾಸ್ ಖ್ಯಾತಿಯ ಹಾಗೂ 'ಕರ್ಣ' ಧಾರಾವಾಹಿ ನಟಿ ನಮ್ರತಾ ಗೌಡ ಇದೀಗ ತಮ್ಮ ಕಾಳಿ ಅವತಾರದ ವಿಡಿಯೋ ಮೂಲಕ ಸದ್ದು ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಈ ರೌದ್ರಾವತಾರದ ರೂಪವು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.
ಬಿಗ್ಬಾಸ್ ಮೂಲಕ ಖ್ಯಾತಿ ಪಡೆದಿದ್ದ ನಟಿ ನಮ್ರತಾ ಗೌಡ, ಸದ್ಯ ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಕರ್ಣ ಸೀರಿಯಲ್ (Karna Serial ) ನಿತ್ಯಾ ಆಗಿ ಎಲ್ಲರ ಮನಸ್ಸನ್ನು ಗೆಲ್ಲುತ್ತಿದ್ದಾರೆ. ಕರ್ಣನ ಮೇಲೆ ದ್ವೇಷ ಸಾಧಿಸುತ್ತಿದ್ದ ನಿತ್ಯಾಳಿಂದಾಗಿ ಅಸಲಿ ಜೀವನದಲ್ಲಿಯೂ ಸಾಕಷ್ಟು ಟ್ರೋಲ್, ಕೆಟ್ಟ ಮಾತುಗಳನ್ನು ಕೇಳಿ ಬೇಸರ ಪಟ್ಟುಕೊಂಡಿದ್ದವರು ನಮ್ರತಾ ಗೌಡ. ಆ ಸಂದರ್ಭದಲ್ಲಿ ತುಂಬಾ ನೋವು ಆಗುತ್ತಿತ್ತು ಎಂದು ನಟಿ ಹೇಳಿಕೊಂಡಿದ್ದರೂ, ವೀಕ್ಷಕರು ಈ ಪರಿಯಲ್ಲಿ ದ್ವೇಷಿಸುತ್ತಾರೆ ಎಂದರೆ ಅವರು ಆ ಪಾತ್ರಕ್ಕೆ ಎಷ್ಟು ನ್ಯಾಯ ಒದಗಿಸಿಕೊಡುತ್ತಿದ್ದಾರೆ ಎನ್ನುವುದು ಕೂಡ ಅರ್ಥವಾಗುತ್ತದೆ.
27
ವೀಕ್ಷಕರಿಂದ ಭೇಷ್ ಎನ್ನಿಸಿಕೊಂಡ ನಟಿ
ಆದರೆ ಇದೀಗ, ನಿತ್ಯಾಳ ಮೇಲೆ ವೀಕ್ಷಕರಿಗೆ ಮರುಕ ಹುಟ್ಟಿದೆ. ಆಕೆಯನ್ನು ತುಂಬಾ ಪ್ರೀತಿಸುತ್ತಿದ್ದಾರೆ. ಸೀರಿಯಲ್ ಅನ್ನು ಕೇವಲ ಒಂದು ನಾಟಕ ಎಂದು ತೆಗೆದುಕೊಳ್ಳದೇ ಅದನ್ನು ತಮ್ಮ ಜೀವನದ ಭಾಗ ಎಂದು ತಿಳಿದುಕೊಳ್ಳುವ ಅದೆಷ್ಟೋ ವೀಕ್ಷಕರಿಂದಾಗಿ ನಟ-ನಟಿಯರು ಕೂಡ ಅದರಲ್ಲಿಯೂ ನೆಗೆಟಿವ್ ರೋಲ್ನಲ್ಲಿ ಕಾಣಿಸಿಕೊಳ್ಳುವವರು ಸಿಕ್ಕಾಪಟ್ಟೆ ಜನರಿಂದ ಬೈಸಿಕೊಳ್ಳುವುದೂ ನಡೆದೇ ಇದೆ.
37
ಕಾಳಿ ಅವತಾರದಲ್ಲಿ
ಅದೇನೇ ಇರಲಿ. ಸದ್ಯ ನಮ್ರತಾ ಮೇಲೆ ಅಭಿಮಾನಿಗಳು ಪ್ರೀತಿಯ ಧಾರೆಯನ್ನೇ ಹರಿಸುತ್ತಿದ್ದಾರೆ. ಯಾವ ರೀತಿಯ ಪಾತ್ರಕ್ಕೂ ಸೈ ಎನ್ನುವಂತೆ ನಟಿಸುವ ನಮ್ರತಾ ಗೌಡ ಅವರು ಇದೀಗ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಕಾಳಿ ಅವತಾರದ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ.
ಇದು ಯಾಕೆ, ಹೊಸ ಸೀರಿಯಲ್ಲಾ, ಹೊಸ ಸಿನಿಮಾನಾ ಅಥವಾ ಎರಡು ವರ್ಷಗಳ ಹಿಂದೆ ಕಾಳಿಯ ರೂಪದ ವಿಡಿಯೋ ಒಂದನ್ನು ಶೇರ್ ಮಾಡಿದ್ದನ್ನೇ ಪುನಃ ಮಾಡಿದ್ದಾರಾ ಎನ್ನುವುದು ತಿಳಿದಿಲ್ಲ. ಒಟ್ಟಿನಲ್ಲಿ ನಿತ್ಯಾ ಆಗಿ ಫೇಮಸ್ ಆಗ್ತಿರೋ ನಟಿ ನಮ್ರತಾ ಗೌಡ ಅವರು ಗುರುತೇ ಸಿಗದ ರೀತಿಯಲ್ಲಿ ಕಾಳಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
57
ಘರ್ಜಿಸಿದ ನಟಿ
ಕಾಳಿ ಎಂದ ಮೇಲೆ ಅದರ ಗೆಟಪ್ಪೇ ಬೇರೆಯ ರೀತಿ ಇರುತ್ತದಲ್ಲ. ಅದರಂತೆಯೇ ಘರ್ಜಿಸುವ ನಟಿಯನ್ನು ಈ ವಿಡಿಯೋದಲ್ಲಿ ನೋಡಬಹುದು. Namratha Gowda as Kaali ಎಂದು ಬರೆಯಲಾಗಿದೆ. n her strength, I rise ಎನ್ನುವ ಶೀರ್ಷಿಕೆಯನ್ನು ನಟಿ ನೀಡಿದ್ದಾರೆ.
67
ನಟಿಯ ಕುರಿತು
ಇನ್ನು ನಮ್ರತಾ ಗೌಡ ಕುರಿತು ಹೇಳುವುದಾದರೆ, ಬಾಲನಟಿಯಾಗಿ ಕನ್ನಡ ಸಿನಿಮಾಗಳಲ್ಲಿ ಎಂಟ್ರಿ ಕೊಟ್ಟಿದ್ದ ನಮ್ರತಾಗೆ ಹೆಚ್ಚು ಹೆಸರು ತಂದುಕೊಟ್ಟಿದ್ದು, ಸೀರಿಯಲ್ಗಳು. ಅದರಲ್ಲಿಯೂ ನಾಗಿಣಿ ಸೀರಿಯಲ್ ಅವರಿಗೆ ದೊಡ್ಡ ಖ್ಯಾತಿಯನ್ನೇ ಕೊಟ್ಟಿತು. ಅದಕ್ಕಿಂತ ಅವರ ಜೀವನದಲ್ಲಿ ದೊಡ್ಡ ಬ್ರೇಕ್ ಸಿಕ್ಕಿದ್ದು, ಬಿಗ್ ಬಾಸ್ ಕನ್ನಡ ಸೀಸನ್ 10.
77
ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್
ಅಲ್ಲಿಂದ ಬಂದ ಮೇಲೆ ಒಂದಷ್ಟು ಷೋಗಳಲ್ಲಿ ಅವಕಾಶ ಸಿಕ್ಕಿತು. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟೀವ್ ಆಗಿದ್ದಾರೆ. ನಮ್ರತಾ ಗೌಡ ಅವರು ಹಲವಾರು ಸೆಲೆಬ್ರಿಟಿಗಳಂತೆಯೇ ಪುನೀತ್ ರಾಜ್ಕುಮಾರ್ (Puneet Rajkumar) ಅವರ ಅಭಿಮಾನಿ ಕೂಡ. ತಮ್ಮ ಕೈಮೇಲೆ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಗೌರವ ಸಲ್ಲಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.