Karna Serial: ನಿಧಿಯ ಪ್ರಿಯಕರನ ಸತ್ಯ ನಿತ್ಯಾಗೆ ತಿಳಿಯೋ ಟೈಮ್​ ಬಂದೇ ಬಿಡ್ತು- ಮುಂದೇನಾಗತ್ತೆ?

Published : Oct 08, 2025, 10:50 PM IST

ಕರ್ಣ ಸೀರಿಯಲ್ ರೋಚಕ ಹಂತ ತಲುಪಿದ್ದು, ನಿಧಿಯನ್ನು ಪ್ರೀತಿಸುವ ಕರ್ಣ ಅನಿರೀಕ್ಷಿತವಾಗಿ ನಿತ್ಯಾಳಿಗೆ ತಾಳಿ ಕಟ್ಟಿದ್ದಾನೆ. ಇದೀಗ ನಿಧಿಯ ಸತ್ಯ ನಿತ್ಯಾಳಿಗೆ ಗೊತ್ತಾಗುವ ಟೈಮ್ ಬಂದಿದೆ. ಇನ್ನೊಂದೆಡೆ, ಜೋಗತಿಯು ನಿಧಿ ಮತ್ತು ಕರ್ಣ ಒಂದಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾಳೆ. ಮುಂದೇನು? 

PREV
16
ರೋಚಕ ಘಟ್ಟದಲ್ಲಿ ಕರ್ಣ ಸೀರಿಯಲ್​

ಸದ್ಯ ಕರ್ಣ ಸೀರಿಯಲ್​ (Karna Serial) ರೋಚಕ ಘಟ್ಟ ತಲುಪಿದೆ. ಮದುವೆಯ ಸಂಭ್ರಮದ ನಡುವೆಯೇ ಮಹಾ ಸತ್ಯವೊಂದು ಬಯಲಾಗಿದೆ. ನಿತ್ಯಾ ಕರ್ಣನನ್ನು ಎಷ್ಟು ದ್ವೇಷ ಮಾಡುತ್ತಾಳೋ, ನಿಧಿ ಅಷ್ಟೇ ಪ್ರೀತಿಸುತ್ತಾಳೆ. ಆದರೆ ನಿಧಿ ಮತ್ತು ಕರ್ಣ ಒಬ್ಬರನ್ನೊಬ್ಬರು ಇಷ್ಟ ಪಟ್ಟಿರೋ ಸತ್ಯ ನಿತ್ಯಾಳಿಗೆ ಗೊತ್ತಿಲ್ಲ. ಅವಳು ಕಾರ್ತಿಕ್​ನನ್ನೇ ಇಷ್ಟಪಡುತ್ತಿದ್ದಾಳೆ ಎಂದು ನಿತ್ಯಾ ಇಲ್ಲಿಯವರೆಗೂ ಅಂದುಕೊಂಡು ಬಂದಿದ್ದಾಳೆ. ತನ್ನ ಪ್ರಿಯಕರನ ಹೆಸರು ಕೆಎಆರ್​ ನಿಂದ ಶುರುವಾಗುತ್ತದೆ ಎಂದಾಗಲೆಲ್ಲಾ ನಿತ್ಯಾ ಅದು ಕಾರ್ತಿಕ್​ ಅಂದುಕೊಂಡಿದ್ದಾಳೆ.

26
ಮದುವೆಯ ಸಂಭ್ರಮ

ಇತ್ತ ನಿತ್ಯಾಳ ಮದುವೆಯ ಸಂಭ್ರಮ ಜೋರಾಗಿಯೇ ನಡೆಯುತ್ತಿದೆ. ಈ ಮದುವೆಯ ಸಂದರ್ಭದಲ್ಲಿಯೇ ತನಗೆ ಪ್ರಪೋಸ್​ ಮಾಡಬೇಕು ಎಂದು ನಿಧಿ ಕರ್ಣನಿಗೆ ಪತ್ರವನ್ನು ಬರೆದಿದ್ದು, ಆ ಪತ್ರ ಓದಿ ಕನಸಿನಲ್ಲಿ ತೇಲಾಡುತ್ತಿದ್ದಾನೆ ಕರ್ಣ.

36
ಕಾರ್ತಿಕ್​ಗೆ ಬೈದು ಕಳುಹಿಸಿದ ನಿಧಿ

ಅದೇ ಇನ್ನೊಂದೆಡೆ ನಿಧಿ ತಮ್ಮ ಮೆಹಂದಿಯಲ್ಲಿ 'ಕೆ' ಎಂದು ಬರೆದುಕೊಂಡಿದ್ದಾಳೆ. ಇದನ್ನು ನೋಡಿದ ಕಾರ್ತಿಕ್​ ಹಿರಿಹಿರಿ ಹಿಗ್ಗಿದ್ದಾನೆ. ತಾನೇ ಆ ಕೆ ಎಂದು ಅಂದುಕೊಂಡು ನಿಧಿಯ ಬಳಿ ಪ್ರೀತಿಯ ನಿವೇದನೆ ಮಾಡಿಕೊಂಡಿದ್ದಾನೆ. ಇದನ್ನು ಕೇಳಿ ನಿಧಿ ಕೆಂಡಾಮಂಡಲ ಆಗಿದ್ದಾಳೆ. ಎಷ್ಟು ಸಲ ಹೇಳುವುದು ನಿನ್ನನ್ನು ನಾನು ಇಷ್ಟಪಡುವುದಿಲ್ಲ ಎಂದು ಗದರಿದ್ದಾಳೆ. ಅಲ್ಲಿಂದ ತೊಲಗುವಂತೆ ತಾಕೀತು ಮಾಡಿದ್ದಾಳೆ.

46
ನಿತ್ಯಾದ ಗೊತ್ತಾಯ್ತು ಸತ್ಯ

ಇದನ್ನು ಮರೆಯಲ್ಲಿ ನಿಂತು ನಿತ್ಯಾ ಕೇಳಿಸಿಕೊಂಡಿದ್ದಾಳೆ. ಆಕೆಗೆ ಶಾಕ್​ ಆಗಿದೆ. ಹಾಗಿದ್ದರೆ ನಿಧಿಲವ್​ ಮಾಡ್ತಿರೋದು ಕಾರ್ತಿಕ್​ನನ್ನು ಅಲ್ಲವಾ ಎಂದು ಪ್ರಶ್ನಿಸಿಕೊಂಡಿದ್ದಾಳೆ. ಆದರೆ ಅವಳಿಗೆ ಆ ಕೆ ಕರ್ಣನೇ ಎನ್ನುವುದು ತಿಳಿದಿಲ್ಲ.

56
ನಿತ್ಯಾಗೆ ತಾಳಿ ಕಟ್ಟಿದ ಕರ್ಣ

ಅದೆ ಇನ್ನೊಂದೆಡೆ, ಇದಾಗಲೇ ತೋರಿಸಿರುವ ಪ್ರೊಮೋದಲ್ಲಿ ಕರ್ಣ ಅನಿವಾರ್ಯ ಸಂದರ್ಭದಲ್ಲಿ, ನಿತ್ಯಾಳಿಗೆ ತಾಳಿ ಕಟ್ಟುವಂತೆ ತೋರಿಸಲಾಗಿದೆ. ಅದೇ ಸಮಯದಲ್ಲಿ ಆಕೆ ತಲೆತಿರುಗಿ ಬೀಳುವಂತಾಗುತ್ತಿದ್ದು, ಕರ್ಣ ಆಕೆಯ ನಾಡಿ ಹಿಡಿದಾಗ ಆಕೆ ಗರ್ಭಿಣಿ ಎನ್ನುವುದು ತಿಳಿಯುತ್ತದೆ.

66
ಜೋಗತಿಯ ಮುನ್ಸೂಚನೆ

ಇನ್ನೊಂದೆಡೆ, ಜೋಗತಿ ಬಂದು ನಿಧಿ ಮತ್ತು ಕರ್ಣ ಒಂದಾಗುವ ಮುನ್ಸೂಚನೆ ಕೊಟ್ಟಿದ್ದಾಳೆ. ಮುಂದಿನ ಹಾದಿ ಸ್ವಲ್ಪ ಕಷ್ಟವಾದರೂ ಛಲ ಬಿಡಬಾರದು. ನೀವಿಬ್ಬರೂ ದೇವರು ಹೇಳಿ ಮಾಡಿಸಿದ ಜೋಡಿ ಎಂದಿದ್ದಾಳೆ. ಆದ್ದರಿಂದ ಸೀರಿಯಲ್​ನಲ್ಲಿ ಸದ್ಯ ಟ್ವಿಸ್ಟೋ ಟ್ವಿಸ್ಟ್​. ಮುಂದೆ ಏನಾಗುತ್ತದೆ ಎಂದು ಊಹಿಸುವುದೂ ಕಷ್ಟವಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories