ಕರ್ಣ ಸೀರಿಯಲ್ ಖ್ಯಾತಿಯ ನಿಧಿ ಅಲಿಯಾಸ್ ಭವ್ಯಾ ಗೌಡ, 'ಡಾನ್ಸ್ ಕರ್ನಾಟಕ ಡಾನ್ಸ್' ವೇದಿಕೆಯಲ್ಲಿ ತಮ್ಮ ಸಹೋದರಿಯರೊಂದಿಗೆ ಕಾಣಿಸಿಕೊಂಡಿದ್ದಾರೆ. ಇಂಟಿರಿಯರ್ ಡಿಸೈನರ್ ಆಗಿರುವ ಅಕ್ಕ ವರ್ಷಿಣಿ ಮತ್ತು ಮೇಕಪ್ ಆರ್ಟಿಸ್ಟ್ ಆಗಿರುವ ತಂಗಿ ದಿವ್ಯಾ ಜೊತೆಗೂಡಿ, ಕುಟುಂಬದ ವಿಶೇಷತೆಗಳನ್ನು ಹಂಚಿಕೊಂಡಿದ್ದಾರೆ.
ಕರ್ಣ (Karna Serial) ಸದ್ಯ ವಿಶೇಷ ಸಂಚಿಕೆಗಳು ನಡೆಯುತ್ತಿದೆ. ಅಣ್ಣಯ್ಯ ಸೀರಿಯಲ್ ಜೊತೆ ಮಹಾಸಂಗಮ ನಡೆಯುತ್ತಿದೆ. ಇಲ್ಲಿ ನಿತ್ಯಾ ಮತ್ತು ಕರ್ಣನ ಮದುವೆಯ ಸೀಕ್ರೇಟ್ ನಿಧಿಯ ಮುಂದೆ ಬಯಲಾಗುವ ಹೊತ್ತು ಬಂದಿದೆ. ಅದು ಹೇಗೆ ಎನ್ನೋದು ಇನ್ನಷ್ಟೇ ತಿಳಿಯಬೇಕಿದೆ.
26
ಡಾನ್ಸ್ ಕರ್ನಾಟಕ ಡಾನ್ಸ್
ಇದರ ನಡುವೆಯೇ ನಿಧಿ ಅರ್ಥಾತ್ ನಟಿ ಭವ್ಯಾ ಗೌಡ ಅವರು ಡಾನ್ಸ್ ಕರ್ನಾಟಕ ಡಾನ್ಸ್ (Dance Karnataka Dance-DKD) ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಬಾರಿ ನಿಧಿಯಾಗಿ ನಿತ್ಯನ ಜೊತೆ ಅವರಿಲ್ಲ, ಬದಲಿಗೆ ಭವ್ಯಾ ಆಗಿ ರಿಯಲ್ ಲೈಫ್ ಅಕ್ಕ-ತಂಗಿ ಜೊತೆ ಕಾಣಿಸಿಕೊಂಡಿದ್ದಾರೆ.
36
ಅಕ್ಕ ಇಂಟಿರಿಯರ್ ಡಿಸೈನರ್
ಅಂದಾಗೆ ಭವ್ಯಾ ಗೌಡ ಅವರ ಅಕ್ಕ ವರ್ಷಿಣಿ ಗೌಡ. ಇವರು ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಇಂಟಿರಿಯರ್ ಡಿಸೈನರ್ ಆಗಿದ್ದಾರೆ.
ತಂಗಿ ದಿವ್ಯಾ ಗೌಡ. ಇವರು ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಪ್ರತ್ಯೇಕ ಕೋರ್ಸ್ ಮಾಡಿ ಸರ್ಟಿಫೈಡ್ ಮೇಕಪ್ ಆರ್ಟಿಸ್ಟ್ ಎಂದೆನಿಸಿಕೊಂಡಿದ್ದಾರೆ. ಜೊತೆಗೆ ಬ್ರೈಡಲ್ ಮೇಕಪ್‌ನಲ್ಲಿ ಪರಿಣತಿ ಹೊಂದಿದ್ದಾರೆ. ಹಲವು ಸೆಲೆಬ್ರಿಟಿಗಳಿಗೆ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದಾರೆ.
56
ಹೆಸರು ಬದಲು
ಭವ್ಯ-ದಿವ್ಯಾ ಒಂದೇ ಆದ್ರೂ, ವರ್ಷಿಣಿ ಹೆಸರು ಚೇಂಜ್ ಯಾಕೆ ಎಂದು ಪ್ರಶ್ನಿಸಿದಾಗ, ಅವಳು ಸ್ವಲ್ಪ ಡಿಫರೆಂಟ್ ಆಗಿ ಇರಲಿ ಎಂದು ಡಿಫರೆಂಟ್ ಹೆಸರು ಇಟ್ಟರು. ಅವಳು ಡಿಫರೆಂಟ್ ಆಗಿಯೇ ಇದ್ದಾಳೆ ಎಂದು ವರ್ಷಿಣಿ ಕುರಿತು ಭವ್ಯಾ ಹೇಳಿದ್ದಾರೆ.
66
ಕ್ಯೂಟ್ ಸ್ಟೆಪ್
ಕರ್ಣ ಸೀರಿಯಲ್ ಪ್ರೊಮೋ ಬಂದಾಗ ತುಂಬಾ ಜನ ಖುಷಿ ಪಟ್ಟರು ಎಂದಿರೋ ಸಹೋದರಿಯರು ಕರ್ಣ ಸೀರಿಯಲ್ನಲ್ಲಿ ನಿಧಿಯಾಗಿ ಹೇಗೆ ಅವಳು ಇದ್ದಾಳೋ, ರಿಯಲ್ ಲೈಫ್ನಲ್ಲಿಯೂ ಹಾಗೆಯೇ ಇದ್ದಾಳೆ ಎಂದಿದ್ದಾರೆ ಅಕ್ಕ-ತಂಗಿ. ಕೊನೆಗೆ ಮೂವರೂ ಸೇರಿ ಕ್ಯೂಟ್ ಸ್ಟೆಪ್ ಹಾಕಿದ್ದಾರೆ.