ಸೀರಿಯಲ್‌ ನಾಯಕಿಯರಾಗಿ ಗೆದ್ದು ಬೀಗಿದ ಈ ನಟಿಯರು, ಸಿನಿಮಾದಲ್ಲಿ ನಟಿಸಿ ಸೋತರು

Published : Nov 22, 2025, 05:43 PM IST

Kannada serial actresses: ಸೀರಿಯಲ್ ನಟಿಯರಾಗಿ ಯಶಸ್ಸು ಪಡೆದವರೆಲ್ಲಾ ಹಿರಿತೆರೆಯಲ್ಲಿ ಮಿಂಚುತ್ತಾರೆ ಎಂದು ಹೇಳುವ ಹಾಗಿಲ್ಲ. ಯಾಕಂದ್ರೆ, ಕನ್ನಡ ಕಿರುತೆರೆಯಲ್ಲಿ ಯಶಸ್ವಿ ನಾಯಕಿಯರಾಗಿದ್ದ ಈ ನಟಿಯರು, ಚಂದನವನದಲ್ಲಿ ಸಿನಿಮಾಗಳನ್ನು ಮಾಡಿದ್ರೂ ಕೂಡ ಯಶಸ್ಸನ್ನು ಪಡೆದುಕೊಳ್ಳಲು ಸಾಧ್ಯವಾಗಲೇ ಇಲ್ಲ.

PREV
18
ಕನ್ನಡ ನಟಿಯರು

ಕನ್ನಡ ಕಿರುತೆರೆಯಲ್ಲಿ ತಮ್ಮ ಅಭಿನಯದ ಮೂಲಕವೇ ಪ್ರೇಕ್ಷಕರ ಮನಗೆದ್ದು, ಜನಪ್ರಿಯತೆ ಪಡೆದ ಅದೆಷ್ಟೋ ನಟಿಯರಿದ್ದಾರೆ. ಆದರೆ ಈ ನಟಿಯರು ಸಿನಿಮಾದಲ್ಲಿ ಮಾತ್ರ ಯಶಸ್ಸು ಕಾಣಲೇ ಇಲ್ಲ. ಅಂತಹ ನಟಿಯರ ಲಿಸ್ಟ್ ಇಲ್ಲಿದೆ.

28
ವೈಷ್ಣವಿ ಗೌಡ

ವೈಷ್ಣವಿ ಗೌಡ ಬಿಗ್ ಬಾಸ್ ಅಲ್ಲದೇ, ಅಗ್ನಿ ಸಾಕ್ಷಿ, ಸೀತಾ ರಾಮ ಧಾರಾವಾಹಿಗಳಲ್ಲೂ ನಟಿಸಿದ್ದರು. ಅವರು ನಟಿಸಿದ ಎರಡೂ ಸೀರಿಯಲ್ ಕೂಡ ಸೂಪರ್ ಹಿಟ್. ಆದರೆ ವೈಷ್ಣವಿ ನಟಿಸಿದ ಬಹುಕೃತ ವೇಷಂ ಸಿನಿಮಾ ಮಾತ್ರ ಯಶಸ್ಸು ಕಾಣಲೇ ಇಲ್ಲ.

38
ರಂಜನಿ ರಾಘವನ್

ಕನ್ನಡ ಕಿರುತೆರೆಯಲ್ಲಿ ಪುಟ್ಟ ಗೌರಿಯಾಗಿ, ಕನ್ನಡತಿಯರ ಭುವಿಯಾಗಿ ಲಕ್ಷಾಂತರ ಅಭಿಮಾನಿಗಳನ್ನು ಪಡೆದುಕೊಂಡ ನಟಿ ರಂಜನಿ ರಾಘವನ್ ಬೆಳ್ಳಿ ಪರದೆಯಲ್ಲಿ ನಾಯಕಿಯಾಗಿ ಯಶಸ್ಸು ಕಾಣುವಲ್ಲಿ ಸೋತರು. ರಂಜನಿ ರಾಜಹಂಸ, ಟಕ್ಕರ್, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ, ಹಕ್ಕುನಮ ಟಾಟ, ನೈಟ್ ಕರ್ಫ್ಯೂ, ಕಾಂಗರೂ, ಸ್ವಪ್ನ ಮಂಟಪ ಸಿನಿಮಾದಲ್ಲಿ ನಟಿಸಿದ್ದರು.

48
ದೀಪಿಕಾ ದಾಸ್

ದೀಪಿಕಾ ದಾಸ್ ಕನ್ನಡ ಕಿರುತೆರೆಯಲ್ಲಿ ನಟಿಸಿದ್ದು ಒಂದೆ ಒಂದು ಧಾರಾವಾಹಿಯಲ್ಲಿ, ಅದು ನಾಗಿಣಿ. ಈ ಸೀರಿಯಲ್ ಅವರಿಗೆ ನೇಮ್ ಫೇಮ್ ಎಲ್ಲವನ್ನು ತಂದುಕೊಟ್ಟಿತು. ಬಳಿಕ ಬಿಗ್ ಬಾಸ್ ನಲ್ಲಿ ಸ್ಪರ್ಧಿಸುವ ಮೂಲಕ ಮತ್ತಷ್ಟು ಜನಪ್ರಿಯತೆ ಪಡೆದರು. ಆದರೆ ಇವರು ನಟಿಸಿರುವ ಪಾರು ಪಾರ್ವತಿ, ಈ ಮನಸೇ, ದೂದ್ ಸಾಗರ್, ರಂಗನ್ ಸ್ಟೈಲ್ ಸಿನಿಮಾಗಳು ಗೆದ್ದಿಲ್ಲ.

58
ಕಾವ್ಯಾ ಗೌಡ

ಗಾಂಧಾರಿ, ರಾಧಾರಮಣ ಸೀರಿಯಲ್ ನಲ್ಲಿ ನಟಿಸಿ ಜನಮನ ಗೆದ್ದಿದ್ದ ನಟಿ ಕಾವ್ಯಾ ಗೌಡ ಅವರು ಚಂದನವನದಲ್ಲಿ ನೆಲೆಯೂರಲು ಸಾಧ್ಯವಾಗಲಿಲ್ಲ. ತಮಿಸ್ರಾ, ಎಂಬಿಎ, ಸಖತ್ ರಿಸ್ಕ್, ಬಕಾಸುರ ಸಿನಿಮಾಗಳಲ್ಲಿ ನಟಿಸಿದ್ದರು.

68
ಕಾವ್ಯಾ ಶಾಸ್ತ್ರೀ

ಶುಭ ವಿವಾಹ, ಮಹಾಲಕ್ಷ್ಮಿ, ರಾಧಿಕಾ ಸೀರಿಯಲ್ ಗಳಲ್ಲಿ ನಟಿಸಿ ಯಶಸ್ಸು ಕಂಡಿದ್ದ ಕಾವ್ಯಾ ಶಾಸ್ತ್ರೀ ಸಿನಿಮಾ ನಟಿಯಾಗಿ ಗೆಲ್ಲಲು ಕಷ್ಟಪಟ್ಟಿದ್ದರು. ಯುಗ, ಚೆಲುವೆಯೆ ನಿನ್ನ ನೋಡಲು, ಲವ್ 360 ಮೊದಲಾದ ಸಿನಿಮಾಗಳಲ್ಲಿ ಕಾವ್ಯಾ ನಟಿಸಿದ್ದರು.

78
ಐಶ್ವರ್ಯ ಸಿಂಧೋಗಿ

ಐಶ್ವರ್ಯ ಸಿಂಧೋಗಿ ನಾಗಿಣಿ-2, ತನಿಷಾ, ಮಂಗಳ ಗೌರಿ ಮದುವೆ, ನಮ್ಮ ಲಚ್ಚಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಈ ಎಲ್ಲಾ ಧಾರಾವಾಹಿಗಳಲ್ಲಿ ಪಾಸಿಟಿವ್ ಮತ್ತು ನೆಗೆಟಿವ್ ಪಾತ್ರಗಳಲ್ಲೂ ನಟಿಸಿ ಗೆದ್ದಿದ್ದರು. ಇವರು ಮಟಾಶ್, ಧೂಳಿಪಟ, ಸಂಯುಕ್ತ 2, ವಾಟ್ಸಪ್ ಲವ್ ಸಿನಿಮಾಗಳಲ್ಲಿ ನಟಿಸಿದ್ದರು.

88
ದಿವ್ಯಾ ಉರುಡುಗ

ದಿವ್ಯಾ ಉರುಡುಗ ಕೂಡ ಕಿರುತೆರೆ ನಟಿಯಾಗಿ ಹಾಗೂ ಬಿಗ್ ಬಾಸ್ ಮೂಲಕ ಸದ್ದು ಮಾಡಿದ್ದರು. ಆದರೆ ದಿವ್ಯಾ ನಟಿಸಿರುವ ಅರ್ಧಂಬರ್ಧ ಪ್ರೇಮಕಥೆ, ರಾಂಚಿ, ಹುಲಿರಾಯ, ಪದವಿಪೂರ್ವ, ಗಿರ್ಕಿ, ಫೇಸ್ ಟು ಫೇಸ್ ಸಿನಿಮಾಗಳು ಅಷ್ಟೊಂದು ಸದ್ದು ಮಾಡಲೇ ಇಲ್ಲ.

Read more Photos on
click me!

Recommended Stories