ವ್ಹಾರೆವ್ಹಾ Karna Serial: ಲಾ ಡಿಗ್ರಿ ಇಲ್ದೇ ಲಾಯರ್​ ಆದ್ಲು, NMC ಸರ್ಟಿಫಿಕೇಟ್​ ಇಲ್ಲ ಎಂದು ಸಸ್ಪೆಂಡ್​ ಆದ ನಿಧಿ

Published : Mar 11, 2026, 12:56 PM IST

ಕರ್ಣ ಸೀರಿಯಲ್​ನಲ್ಲಿ ಕಾನೂನು ಪದವಿ ಇಲ್ಲದೆ ವಾದಿಸಿ ಗೆದ್ದಿದ್ದ ಡಾ. ನಿಧಿ, ಇದೀಗ ಸಂಚುಕೋರರ ಕುತಂತ್ರದಿಂದ ತನ್ನ ವೈದ್ಯಕೀಯ ವೃತ್ತಿಯಿಂದಲೇ ಸಸ್ಪೆಂಡ್ ಆಗಿದ್ದಾಳೆ. ಈ ಅನಿರೀಕ್ಷಿತ ತಿರುವು ಧಾರಾವಾಹಿಯ ರೋಚಕತೆಯನ್ನು ಹೆಚ್ಚಿಸಿದ್ದು, ನಿಧಿ-ಕರ್ಣರ ಮುಂದಿನ ನಡೆ ಏನು ಎಂಬ ಕುತೂಹಲ ಮೂಡಿಸಿದೆ.

PREV
16
ಲಾಯರ್​ ನಿಧಿ

ಕರ್ಣ ಸೀರಿಯಲ್​ನಲ್ಲಿ (Karna Serial)ನಲ್ಲಿ ಇದಾಗಲೇ ಡಾ.ನಿಧಿ ಯಾವುದೇ ಕಾನೂನು ಪದವಿ ಪಡೆಯದೇ ಕರ್ಣನ ಪರ ವಾದಿಸಿ ಕರ್ಣನಿಗೆ ಗೆಲುವು ತಂದುಕೊಟ್ಟಿದ್ದಾಳೆ. ಕಾನೂನಿನ ಅಡಿ, ಕಾನೂನು ಪದವಿ ಪಡೆಯದೇ ನಮ್ಮ ಕೇಸನ್ನು ನಾವು ವಾದ ಮಾಡುವ ಅವಕಾಶವಿದೆ. ಆದರೆ ಬೇರೆಯವರ ಕೇಸನ್ನು ಮಾಡಲು ಅವಕಾಶವೇ ಇಲ್ಲ. ಆದರೂ ಸೀರಿಯಲ್​ನಲ್ಲಿ ನಿಧಿಗೆ ಆ ಅವಕಾಶವನ್ನು ನೀಡಿರುವುದು ಇದಾಗಲೇ ಸಾಕಷ್ಟು ಟ್ರೋಲ್​ಗೂ ಕಾರಣವಾಗುತ್ತಿದೆ.

26
ನಿಧಿ- ಕರ್ಣ ದೂರ

ಇದೀಗ, ರಮೇಶ್​, ನಯನತಾರಾ ಕುತಂತ್ರದಿಂದ ನಿಧಿ ಮತ್ತು ಕರ್ಣ ದೂರ ಆಗಿದ್ದಾರೆ. ಆದರೆ ಅವಳು ಸರ್ಜನ್​ ಆಗಿರುವ ವಿಲನ್​ಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ನಿಧಿಯನ್ನು ಸಂಜಯ್​ ಕ್ಲಾಸ್​ ಟೀಚರ್​ ಮಾಡಿದ್ದಾನೆ ಕರ್ಣ. ಇದು ಸಂಜಯ್​ಗೆ ಉರಿ ಹತ್ತಿದೆ.

36
ರಮೇಶ್​ ಕುತಂತ್ರ

ಈ ಬಗ್ಗೆ ಅಪ್ಪ-ಅಮ್ಮನಲ್ಲಿ ಕಿಡಿ ಕಾರಿದಾಗ, ರಮೇಶ್​ ಇನ್ನೊಂದು ಕುತಂತ್ರ ಮಾಡಿದ್ದಾನೆ. ಅದರಿಂದ ಡಾ.ನಿಧಿ ವೈದ್ಯಕೀಯ ವೃತ್ತಿಯಿಂದ ಸಸ್ಪೆಂಡ್ ಆಗಿದ್ದಾಳೆ.

46
ಸರ್ಟಿಫಿಕೇಟ್​ ಕೇಳಿದ ಅಧಿಕಾರಿ

ಅಷ್ಟಕ್ಕೂ ಮೇಲಾಧಿಕಾರಿ ಬಂದು ನಿಧಿಯ ಬಳಿ National Medical Commission ಸರ್ಟಿಫಿಕೇಟ್​ ಇದ್ಯಾ ಕೇಳಿದ್ದಾರೆ. ಅದಕ್ಕೆ ಕರ್ಣ, ಆ ಪ್ರಮಾಣ ಪತ್ರ ಇಲ್ಲ. ಆದರೆ ಆಕೆಯ ಬಳಿ ಅಗತ್ಯ ಇರುವ ಎಲ್ಲಾ ಅರ್ಹತೆ ಇದೆ ಎಂದಿದ್ದಾನೆ.

56
ನಿಧಿ ಸಸ್ಪೆಂಡ್​

ಅದಕ್ಕೆ ಅಧಿಕಾರಿ, ಅರ್ಹತೆ ಇದೆ ಎಂದ ಮಾತ್ರಕ್ಕೆ ಪ್ರಮಾಣ ಪತ್ರ ಇಲ್ಲದೇ ಆಪರೇಷನ್​ ಎಲ್ಲಾ ಮಾಡಿರುವುದು ಕಾನೂನುಬಾಹಿರ ಆಗಿರುವ ಕಾರಣ, ನಿಧಿ ಸಸ್ಪೆಂಡ್ ಆಗಿದ್ದಾಳೆ ಎಂದಿದ್ದಾರೆ.

66
ಸೀರಿಯಲ್​ ಆಗಿ ನೋಡಿ ಸಾಕು

ಒಟ್ಟಿನಲ್ಲಿ, ಸೀರಿಯಲ್​ಗಳು ಎಂದರೆ ಎಷ್ಟೋ ಸಮಯದಲ್ಲಿ ತಲೆಬುಡ ಇಲ್ಲದ್ದು ಎನ್ನುವುದು ತಿಳಿದದ್ದೇ. ಆದರೂ ರೋಚಕತೆ ಇರಬೇಕು, ರೋಚಕತೆ ಇದ್ದರಷ್ಟೇ ಜನರಿಗೆ ಇಷ್ಟವಾಗುವುದು. ಅದು ವಾಸ್ತವಕ್ಕೆ ಹತ್ತಿರ ಇರುತ್ತೋ, ಬಿಡುತ್ತೋ ಒಟ್ಟಿನಲ್ಲಿ ರೋಚಕತೆ ಬೇಕು, ಏಕೆಂದ್ರೆ ಸೀರಿಯಲ್​ ನೋಡುವುದೇ ಮನರಂಜನೆಗೆ ಅಲ್ವೆ? ತುಂಬಾ ಉತ್ತಮ ಸೀರಿಯಲ್​ಗಳಲ್ಲಿ ಒಂದು ಎನ್ನಿಸಿದ್ದ ಕರ್ಣ ಕೂಡ ಈಗ ಯಾವ್ಯಾವುದೋ ತಿರುವು ಪಡೆದುಕೊಳ್ಳುತ್ತಿರುವುದು ಕೆಲವರಿಗಂತೂ ಬೇಸರ ತರಿಸುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories