ದಿ ಗರ್ಲ್‌ಫ್ರೆಂಡ್‌ ಸಿನಿಮಾದಂತೆ ರಿಯಲ್ ಲೈಫ್‌ನಲ್ಲೂ ರಶ್ಮಿಕಾ ಅನುಭವಿಸಿದ್ದು ನರಕಯಾತನೆ! ಬೆಚ್ಚಿಬೀಳಿಸುತ್ತೆ ತಾಯಿ ಬಿಚ್ಚಿಟ್ಟ ರಹಸ್ಯ!

Published : Mar 10, 2026, 10:38 PM IST

ರಶ್ಮಿಕಾ ಮಂದಣ್ಣ ಅವರ ತಾಯಿ ಸುಮನ್ ಮಂದಣ್ಣ, ಮಗಳ ಬ್ರೇಕಪ್ ಕುರಿತು ಮಾತನಾಡಿದ್ದಾರೆ. ಆ ನಟ ರಶ್ಮಿಕಾ ಬೆಳವಣಿಗೆಯನ್ನು ಸಹಿಸದೆ, 'ಗೀತಾ ಗೋವಿಂದಂ' ಚಿತ್ರದ ಬಳಿಕ ವೃತ್ತಿಜೀವನವನ್ನೇ ಅಂತ್ಯಗೊಳಿಸಲು ಒತ್ತಡ ಹೇರಿದ್ದ ಮತ್ತು ಆತನ ಪೊಸೆಸಿವ್‌ನೆಸ್‌ ಬಗ್ಗೆ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. 

PREV
17

2025ರಲ್ಲಿ ತೆಲುಗು ಭಾಷೆಯಲ್ಲಿ'ದಿ ಗರ್ಲ್‌ಫ್ರೆಂಡ್‌' ಅನ್ನೋ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದರು. ಈ ಸಿನಿಮಾದ ಪ್ರಮೋಷನ್‌ ವೇಳೆ ರಶ್ಮಿಕಾ, ಇದರಲ್ಲಿನ ಭೂಮಾ ದೇವಿ ಪಾತ್ರ ನನ್ನ ಜೀವನದ ಕಥೆಯೇ ಎಂದನಿಸುತ್ತದೆ ಎಂದು ಹಲವು ಕಡೆ ಹೇಳಿದ್ದರು. ಒಂದು ಹಂತದಲ್ಲಿ ಅವರು ತಮ್ಮ ಜೀವನದಲ್ಲಿ ಆದ ಕೆಲವು ಘಟನೆಗಳನ್ನು ನೆನೆದು ವೇದಿಕೆಯಲ್ಲೇ ಭಾವುಕರಾಗಿದ್ದರು.

27

ಈಗ ಅವರ ತಾಯಿ ಸುಮನ್‌ ಮಂದಣ್ಣ ಅವರು ರಶ್ಮಿಕಾ ಜೀವನದ ಬ್ರೇಕಪ್‌ ಬಗ್ಗೆ ಮಾತನಾಡಿರುವ ಆಡಿಯೋ ವೈರಲ್‌ ಆಗಿರುವಾಗ, ರಶ್ಮಿಕಾ ಮಂದಣ್ಣ ಹೇಳಿದ ಈ ಮಾತುಗಳು ನಿಜ ಎಂದನಿಸುತ್ತಿದೆ. ಹಿರಿಯ ಸಿನಿಮಾ ಪತ್ರಕರ್ತ ಮಹೇಶ್‌ ದೇವಿಶೇಟ್ಟಿ ಅವರ ಯೂಟ್ಯೂಬ್‌ ಚಾನೆಲ್‌ನಲ್ಲಿ ರಶ್ಮಿಕಾ ಮಂದಣ್ಣ ಅವರ ತಾಯು ಸುಮನ್‌ ಮಂದಣ್ಣ, ಮಗಳ ಬ್ರೇಕಪ್‌ ಸಂಗತಿಯ ಬಗ್ಗೆ ಮಾತನಾಡಿದ್ದಾರೆ.

37

ರಶ್ಮಿಕಾ ಅವರಿಗೆ 21 ವರ್ಷ ಹಾಗೂ ನಟನಿಗೆ 35 ವರ್ಷ ವಯಸ್ಸಾಗಿದ್ದರೂ, ಮಗಳನ್ನು ಆತನಿಗೆ ಕೊಟ್ಟಿದ್ದೇ ದೊಡ್ಡತನ ಎಂದು ತಾಯಿ ಹೇಳಿದ್ದಾರೆ. ಇಷ್ಟಿದ್ದರೂ ಆ ನಟ ಸಣ್ಣಪುಟ್ಟ ವಿಷಯಕ್ಕೂ ಮನೆಗೆ ಬಂದು ಗಲಾಟೆ ಮಾಡುತ್ತಾ ರಶ್ಮಿಕಾ ಮೇಲೆ ಸವಾರಿ ಮಾಡಲು ನೋಡುತ್ತಿದ್ದ ಎಂದು ಅವರು ಆರೋಪಿಸಿದ್ದಾರೆ.

47

ರಶ್ಮಿಕಾ ಅವರು ಸ್ಟಾರ್ ನಟರ ಜೊತೆ ನಟಿಸಿ ಬೆಳೆಯುವುದು ಆ ನಟನಿಗೆ ಸಹಿಸಲು ಸಾಧ್ಯವಾಗುತ್ತಿರಲಿಲ್ಲ. ವಿಶೇಷವಾಗಿ 'ಗೀತಾ ಗೋವಿಂದಂ' ಅವಕಾಶ ಸಿಕ್ಕಾಗ, "ನಾನು ಇನ್ನು ಮುಂದೆ ಸಿನಿಮಾ ಮಾಡಲ್ಲ" ಎಂದು ಟ್ವೀಟ್ ಮಾಡಿ ವೃತ್ತಿಜೀವನ ಅಂತ್ಯಗೊಳಿಸುವಂತೆ ನಟ ಹಾಗೂ ಆತನ ಗ್ಯಾಂಗ್ ಒತ್ತಡ ಹೇರಿತ್ತು ಎಂದು ಆಡಿಯೋದಲ್ಲಿ ಹೇಳಿದ್ದಾರೆ.

57

ಸಿನಿಮಾದ ಕಥೆಯ ಅಗತ್ಯಕ್ಕೆ ತಕ್ಕಂತೆ ರಶ್ಮಿಕಾ ನಟಿಸಿದ್ದ ಕಿಸ್ಸಿಂಗ್ ಸೀನ್ ವೈರಲ್ ಆದಾಗ ನಟನ ವರ್ತನೆ ಸಂಪೂರ್ಣ ಬದಲಾಗಿತ್ತು. ಆಕೆಯನ್ನು ಸಿನಿಮಾದಿಂದ ಬಿಡಿಸಿ, ಮದುವೆ ಮಾಡಿಕೊಂಡು ಮನೆಯೊಳಗೆ ಕೂಡಿಹಾಕುವುದು ಆತನ ಗ್ಯಾಂಗ್‌ನ ಸಂಚಾಗಿತ್ತು ಎಂದು ತಾಯಿ ತಿಳಿಸಿದ್ದಾರೆ.

67

ಗೀತಾ ಗೋವಿಂದಂ ಸಿನಿಮಾ ಬಿಡುಗಡೆಯ ಹಿಂದಿನ ದಿನ ರಾತ್ರಿ 2 ಗಂಟೆಗೆ ಫೋನ್ ಮಾಡಿದ್ದ ನಟ ಹಾಗೂ ಮ್ಯಾನೇಜರ್, ತಕ್ಷಣ ಹೈದರಾಬಾದ್‌ನಿಂದ ಬೆಂಗಳೂರಿಗೆ ಕಾರ್‌ನಲ್ಲಿ ಬಂದು ತನ್ನನ್ನು ನೋಡಿ ಬೆಳಿಗ್ಗೆ 8ಕ್ಕೆ ವಾಪಸ್ ಹೋಗುವಂತೆ ಹಠ ಹಿಡಿದಿದ್ದರು ಎಂದು ಸುಮನ್‌ ಮಂದಣ್ಣ ಹೇಳಿದ್ದಾರೆ. ಇನ್ಯಾವುದೋ ವಿಚಾರಕ್ಕೆ ನಾನು ಆ ನಟನ ತಾಯಿಗೆ ಸಾರಿ ಕೇಳಬೇಕು ಎಂದು ರಶ್ಮಿಕಾಗೆ ಹೇಳಿದ್ದ. ಆದರೆ, ಅದನ್ನು ನಾನೆಂದೂ ಮಾಡಿರಲಿಲ್ಲ ಎಂದು ಸುಮನ್‌ ಮಂದಣ್ಣ ಹೇಳಿದ್ದಾರೆ.

77

ಇನ್ನು ರಶ್ಮಿಕಾ ಮಂದಣ್ಣ ನಟಿಸಿರುವ ದಿ ಗರ್ಲ್‌ಫ್ರೆಂಡ್‌ ಸಿನಿಮಾ ಕೂಡ ಇಂಥದ್ದೇ ಕಥಾ ಹಂದರ ಹೊಂದಿರುವ ಸಿನಿಮಾ. ಕಾಲೇಜು ವಯಸ್ಸಲ್ಲಿ ಆಗುವ ಪ್ರೇಮ. ಪ್ರೀತಿಸಿದ ಹುಡುಗನ ಅತಿಯಾದ ಪೊಸೆಸಿವ್‌ನೆಸ್‌, ಕಂಟ್ರೋಲಿಂಗ್‌ ಸ್ವಭಾವ ಭೂಮಾ ದೇವಿಗೆ ಮಾನಸಿಕವಾಗಿ ಯಾವ ರೀತಿಯಲ್ಲಿ ಹಿಂಸೆ ನೀಡುತ್ತಿತ್ತು ಅನ್ನೋ ಪಾತ್ರದಲ್ಲಿ ರಶ್ಮಿಕಾ ನಟಿಸಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories