Must-watch Short Films: ಎದೆ ನಡುಗಿಸುವ, ಕಣ್ಣಂಚಲ್ಲಿ ನೀರು ತರಿಸುವ ಮಹಿಳಾ ಕೇಂದ್ರಿತ ಕಿರು ಚಿತ್ರಗಳು… ಇವತ್ತೇ ನೋಡಿ

Published : Oct 06, 2025, 01:51 PM IST

ಮಹಿಳಾ ಕೇಂದ್ರಿತ ಸಿನಿಮಾಗಳೇ ಬರೋದಿಲ್ಲ ಎಂದು ಹೇಳುವವರೇ ಹೆಚ್ಚು. ಆದರೆ ಈ ಕಿರುಚಿತ್ರಗಳನ್ನು ಒಮ್ಮೆಯಾದರೂ ನೀವು ನೋಡಲೇಬೇಕು. ಯಾಕಂದ್ರೆ ಇವೆಲ್ಲವೂ ಮಹಿಳಾ ಕೇಂದ್ರಿದ ಚಿತ್ರಗಳು. ಕೆಲವು ಕತೆಗಳು ಎದೆ ನಡುಗಿಸಿದರೆ, ಮತ್ತೆ ಕೆಲವು ಕಣ್ಣಂಚನ್ನು ಒದ್ದೆ ಮಾಡುತ್ತೆ.

PREV
17
ದ ಡೇ ಆಫ್ಟರ್ ಎವ್ರಿ ಡೇ (2013)

ಅನುರಾಗ್ ಕಷ್ಯಪ್ ನಿರ್ದೇಶನ ಮಾಡಿರುವ ದ ಡೇ ಆಫ್ಟರ್ ಎವ್ರಿ ಡೇ (The day after everyday) ಸಿನಿಮಾ ಪ್ರತಿದಿನ ಕೆಲಸಕ್ಕೆ ಹೋಗುವಾಗ ಕಿರುಕುಳಕ್ಕೆ ಒಳಗಾಗುವ ಮೂವರು ಮಹಿಳೆಯರ ಕಥೆಯಾಗಿದೆ. ಆ ಸಮಯದಲ್ಲಿ ಅವರು ಅಸಹಾಯಕರಾಗುತ್ತಾರೆ. ಕೊನೆಗೆ ಅವರು ಹೇಗೆ ತಮ್ಮ ಜೀವನವನ್ನು ನಿಯಂತ್ರಿಸಲು ಮತ್ತು ತಮಗೆ ಕಿರುಕುಳ ನಿಡುವವರನ್ನು ಹತ್ತಿಕ್ಕಲು ತಯಾರಾಗುತ್ತಾರೆ ಅನ್ನೋದು ಕಥೆ.

27
ಖಾನೆ ಮೆ ಕ್ಯಾ ಹೆ? ((2017)

ಖಾನೆ ಮೆ ಕ್ಯಾ ಹೇ (Khane me kya hai?) ಇದೊಂದು ಕಾಮಿಡಿ ಶಾರ್ಟ್ ಫಿಲಂ ಆಗಿದೆ. ಈ ಸಿನಿಮಾ ನಿಮ್ಮನ್ನು ನಗಿಸುವುದರ ಜೊತೆಗೆ ಉತ್ತಮ ಮೆಸೇಜ್ ಕೂಡ ನೀಡುತ್ತೆ. ತನ್ನ ಹನಿಮೂನ್ ನಿಂದ ಹಿಂತಿರುಗಿದ ಮಗಳು ಆಹಾರವನ್ನು ಮಾಧ್ಯಮವಾಗಿ ಬಳಸಿ ತನ್ನ ಹನಿಮೂನ್ ಅನುಭವದ ಬಗ್ಗೆ ತಾಯಿ ಜೊತೆ ಮಾತನಾಡುತ್ತಾರೆ. ಈ ಮಾತುಕಥೆಯಲ್ಲಿ ಡಿಸೈರ್, ಆಸೆ ಎಲ್ಲವೂ ಬರುತ್ತೆ. ಮಿಸ್ ಮಾಡದೆ ನೋಡಿ.

37
ಎವ್ರಿಥಿಂಗ್ ಈಸ್ ಫೈನ್ (2017)

ಮಾನ್ಸಿ ಜೈನ್ ನಿರ್ದೇಶನದ ಎವ್ರಿಥಿಂಗ್ ಈಸ್ ಫೈನ್ ( Everything is fine) ಸಿನಿಮಾ ಒಬ್ಬ ತಾಯಿಯ ಜೀವನದ ಆಳವನ್ನು ತಿಳಿಸುತ್ತೆ. ಮಧ್ಯವಯಸ್ಕ ಮಹಿಳೆಯೊಬ್ಬರು ತಮ್ಮ 35 ವರ್ಷದ ಅತೃಪ್ತ ದಾಂಪತ್ಯವನ್ನು ಕೊನೆಗೊಳಿಸಲು ಬಯಸುತ್ತಾರೆ ಮತ್ತು ಈ ನಿರ್ಧಾರವನ್ನು ಸ್ವೀಕರಿಸಲು ಹೆಣಗಾಡುತ್ತಿರುವ ತಮ್ಮ ಮಗಳ ಬೆಂಬಲವನ್ನು ಪಡೆಯುತ್ತಾರೆ. ಕಥೆ ಹೇಗೆ ಮುಂದುವರೆಯುತ್ತೆ ಅನ್ನೋದೆ ರೋಚಕವಾಗಿದೆ. ಇದು ನಮ್ಮ ಸಮಾಜದ ಹಲವು ಹೆಣ್ಣು ಮಕ್ಕಳ ಕಥೆಯನ್ನು ಸೂಚಿಸುತ್ತೆ.

47
ನೀತಿ ಶಾಸ್ತ್ರ (2018)

ತಾಪ್ಸಿ ಪನ್ನು ಅಭಿನಯಿಸಿರುವ ನೀತಿಶಾಸ್ತ್ರ (Nitishastra ) ಲೈಂಗಿಕ ದೌರ್ಜನ್ಯ, ನ್ಯಾಯದ ಕುರಿತ ಸಿನಿಮಾ ಆಗಿದೆ. ರೋಶ್ನಿ ಎಂಬ ಯುವತಿ ಸೆಲ್ಫಿ ಡಿಫೆನ್ಸ್ ಟೀಚರ್ ಆಗಿದ್ದು, ಮಹಿಳೆಯರು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಹಾಯ ಮಾಡುವ ಸ್ಟ್ರಾಂಗ್ ಹೆಣ್ಣು ಮಗಳು. ಆದರೆ, ಅವಳ ಸಹೋದರನೇ ಅಪರಾಧ ಮಾಡಿದಾಗ, ಆಕೆ ತನ್ನ ಕುಟುಂಬದ ಪರವಾಗಿ ನಿಲ್ಲುತ್ತಾಳೆಯೇ? ನ್ಯಾಯದ ಪರ ನಿಲ್ಲುತ್ತಾಳೆಯೇ ಅನ್ನೋದು ಕಥೆ.

57
ಅಯಾನ ವೈ ಮಿ? (2019)

ಅಯಾನ ವೈ ಮಿ? (Aanya why me?) ಇದನ್ನು ನೋಡಿದ್ರೆ ಮೈ ಜುಂ ಎನಿಸದೇ ಇರದು. ವಿಖ್ಯಾತ್ ನರ್ವಾಲ್ ನಿರ್ದೇಶನದ ಈ ಸಿನಿಮಾದಲ್ಲಿ ಪುಟ್ಟ ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಚಿತ್ರಣವನ್ನು ನೀಡಲಾಗಿದೆ. ಹೆಣ್ಣು ಮಕ್ಕಳ ಮೇಲೆ ಈ ಜಗತ್ತು ಎಷ್ಟು ಕ್ರೂರವಾಗಿದೆ ಎಂದು ತೋರಿಸುವ ಸಿನಿಮಾ ಇದು.

67
ಚುಪ್ ಚಾಪ್ (2019)

ಚುಪ್ ಚಾಪ್ (Chupchap) ಬಿಲಲ್ ಹಸನ್ ನಿರ್ದೇಶನದ ಚಿತ್ರ. ಟ್ಯೂಷನ್ ಮುಗಿಸಿ ಮನೆಗೆ ಬಾರದಿದ್ದಾಗ ಮಗಳನ್ನು ಹುಡುಕಲು ಹೊರಡುವ ಮಹಿಳೆಯ ಕಥೆ 'ಚುಪ್‌ಚಾಪ್'. ನಾಯಕಿ ಮತ್ತು ಆಕೆಯ ಪತಿಯ ನಡುವಿನ ಸಂಬಂಧದ ಮೂಲಕ ಮಹಿಳೆಯರ ಮೇಲಿನ ಸಾಮಾಜಿಕ ಒತ್ತಡಗಳನ್ನು ಸಹ ಈ ಚಿತ್ರದಲ್ಲಿ ವಿವರವಾಗಿ ನೀಡಲಾಗಿದೆ.

77
ದೇವಿ (2020)

ಪ್ರಿಯಾಂಕಾ ಬ್ಯಾನರ್ಜಿ ನಿರ್ದೇಶನದ ಒಂದು ಅದ್ಭುತ ಕಥೆ ಇದಾಗಿತ್ತು. ಕಾಜಲ್, ಶೃತಿ ಹಾಸನ್ ಸೇರಿ ಹಲವು ನಟಿಯರು ಈ ಕಿರುಚಿತ್ರದಲ್ಲಿ ನಟಿಸಿದ್ದಾರೆ. ಒಂದು ಸಣ್ಣ ಕೋಣೆಯಲ್ಲಿ ಒತ್ತಾಯದಿಂದ ಜೊತೆಯಾಗಿ ಜೀವಿಸುತ್ತಿರುವ ಮಹಿಳೆಯರ ಗುಂಪೊಂದು, ಮತ್ತೆ ಆ ಮನೆಯ ಬಾಗಿಲು ಬಡಿದಾಗ, ಇಲ್ಲಿ ಜಾಗವೇ ಇಲ್ಲ ಎಂದು ಗೊಣಗಾಡುತ್ತಾರೆ. ಕೊನೆಗೆ ಅಲ್ಲಿಗೆ ಬಂದಿರೋದು ಪುಟ್ಟ ಮಗು ಎಂದು ಗೊತ್ತಾದಾಗ ದುಃಖಿತರಾಗುತ್ತಾರೆ. ಅವರೆಲ್ಲಾ ಯಾಕೆ ಆ ರೂಮಿನಲ್ಲಿದ್ದರೆ ಎಂದು ತಿಳಿದರೆ ಶಾಕ್ ಆಗುತ್ತೆ ಈ ಚಿತ್ರ ಮಿಸ್ ಮಾಡದೆ ನೋಡಿ

Read more Photos on
click me!

Recommended Stories